Breaking News

ತಿರುಪತಿ ದೇವಸ್ಥಾನದವರು ಕೇವಲ ಹಣ ಮಾಡುತ್ತಾರೆ: ಮಹಾಂತಶೆಟ್ಟರ

Spread the love

ಕ್ಷ್ಮೇಶ್ವರ: ‘ತಿರುಪತಿ ದೇವಸ್ಥಾನದವರು ಕೇವಲ ಹಣ ಮಾಡುತ್ತಾರೆ. ತಿರುಪತಿ ದೇವಸ್ಥಾನದಲ್ಲಿ ಕೋಟ್ಯಂತರ ಹಣ ಸಂಗ್ರಹವಾಗುತ್ತದೆ. ಆದರೆ ಅದರಿಂದ ಬಡ ಜನತೆಗೆ ಯಾವುದೇ ಉಪಯೋಗ ಆಗುತ್ತಿಲ್ಲ. ಆದರೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಮಾತ್ರ ಹಣವನ್ನು ಬಡವರ ಆರ್ಥಿಕ ಪ್ರಗತಿಗಾಗಿ ಬಳಕೆ ಮಾಡುತ್ತಾರೆ’ ಎಂದು ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ ಹೇಳಿದರು.

 

ಇಲ್ಲಿನ ರಂಭಾಪುರಿ ಸಮುದಾಯ ಭವನದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್‌ನ ಶಿರಹಟ್ಟಿ, ಲಕ್ಷ್ಮೇಶ್ವರ ತಾಲ್ಲೂಕುಮಟ್ಟದ ಪ್ರಗತಿಬಂಧು ಸ್ವ -ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಜನರಿಗಾಗಿ, ಸಮಾಜಕ್ಕಾಗಿ ಸೇವೆ ನೀಡುವ ಯಾವುದಾದರೂ ಧಾರ್ಮಿಕ ಕ್ಷೇತ್ರ ಇದ್ದರೆ ಅದು ಶ್ರೀಕ್ಷೇತ್ರ ಧರ್ಮಸ್ಥಳ ಮಾತ್ರ. ಸಾಲ ನೀಡುವಾಗ ಹತ್ತು ಹಲವು ಕಾಗದಪತ್ರಗಳು, ಜಾಮೀನುಗಳನ್ನು ನೀಡಬೇಕಾಗಿರುವ ಈ ಕಾಲದಲ್ಲಿ ಯಾವುದೇ ಷರತ್ತು, ಜಾಮೀನುಗಳಿಲ್ಲದೆ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸಾಲವನ್ನು ನೀಡುವ ಮೂಲಕ ವಿಶ್ವಾಸದಿಂದ ಕಾರ್ಯ ಮಾಡುತ್ತಿರುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಾಗಿದೆ’ ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ