Breaking News

6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

Spread the love

ದಾಂಡೇಲಿ: ಗಂಡ-ಹೆಂಡತಿಯ ಜಗಳದಿಂದಾಗಿ 6 ವರ್ಷದ ಗಂಡು ಮಗುವೊಂದನ್ನು ನಾಲಾಕ್ಕೆ ಬಿಸಾಕಿದ ಅಮಾನವೀಯ ಘಟನೆ ಮೇ.4ರ ಶನಿವಾರ ರಾತ್ರಿ ದಾಂಡೇಲಿ ತಾಲೂಕಿನ ಹಾಲಮಡ್ಡಿ ಎಂಬಲ್ಲಿ ನಡೆದಿದೆ.

ಹಾಲಮಡ್ಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ರವಿಕುಮಾರ್ ಶೆಳ್ಳೆ ಮತ್ತು ಸಾವಿತ್ರಿ ದಂಪತಿಗಳು ಪರಸ್ಪರ ಜಗಳ‌ ಮಾಡಿಕೊಂಡಿದ್ದಾರೆ.ಜಗಳದಿಂದ ಮಾನಸಿಕವಾಗಿ‌ ನೊಂದ ಸಾವಿತ್ರಿ 6 ವರ್ಷದ ಮಗು ವಿನೋದ್ ನನ್ನು ಅಲ್ಲೆ ಹತ್ತಿರದಲ್ಲಿರುವ ದೊಡ್ಡ ನಾಲಾಕ್ಕೆ ಎಸೆದು ಬಂದಿದ್ದಾಳೆ.

ಸ್ವಲ್ಪ ಹೊತ್ತಿನ‌ ಬಳಿಕ ಈ ಘಟನೆಯಿಂದ ಮಾನಸಿಕವಾಗಿ ಅಘಾತಗೊಂಡ ಸಾವಿತ್ರಿ ಮಗುವನ್ನು ಎಸೆದು ಬಂದಿರುವುದನ್ನು ಸ್ಥಳೀಯರಿಗೆ ತಿಳಿಸಿದ್ದಾಳೆ.

ತಕ್ಷಣವೇ ಸ್ಥಳೀಯರು ನಾಲಾದ ಹತ್ತಿರ ಬಂದು ಮಗುವಿಗಾಘಿ ಹುಡುಕಾಟ ನಡೆಸಿ, ಕೂಡಲೇ ದಾಂಡೇಲಿಯ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಸಹಕಾರದಲ್ಲಿ ಹಾಗೂ ಸ್ಥಳೀಯ ಮುಳುಗು ತಜ್ಞರ ಮತ್ತು ಸ್ಥಳೀಯರ ನೆರವಿನೊಂದಿಗೆ ಮಗುವಿನ ಶೋಧ ಕಾರ್ಯ‌ ನಡೆಸಲಾಗಿದೆ.

ಶೋಧ ಕಾರ್ಯಾಚರಣೆ ಭಾನುವಾರವು ಮುಂದುವರೆದಿದೆ. ಇದೀಗ ಮಗು ಮೊಸಳೆಯ ಬಾಯಲ್ಲಿದ್ದು ಆಗೊಮ್ಮೆ ಈಗೊಮ್ಮೆ ಮೊಸಳೆ ಮಗುವನ್ನು ಬಾಯಲ್ಲಿಟ್ಟು ಪ್ರತ್ಯಕ್ಷವಾಗುತ್ತಿದೆ.


Spread the love

About Laxminews 24x7

Check Also

ಹೆಂಡತಿಯ ಹತ್ಯೆಗೈದ BSF ಯೋಧ – ಮಹಡಿಯಿಂದ ಬಿದ್ದು ಸಾವು ಎಂದು ಬಿಂಬಿಸಲು ಯತ್ನ

Spread the loveಚಂಡೀಗಢ: ರಜೆ ಮೇಲೆ ಮನೆಗೆ ಬಂದಿದ್ದ ಗಡಿ ಭದ್ರತಾ ಪಡೆ ಯೋಧನೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ