Breaking News

ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್​​ನಿಂದ ಹೊಡೆದ ಸೊಸೆ,

Spread the love

ಮಂಗಳೂರು, ಮಾರ್ಚ್​ 11: ವೃದ್ಧ ಮಾವ (father-in-law) ನಿಗೆ ವಾಕಿಂಗ್ ಸ್ಟಿಕ್​​ನಲ್ಲಿ ಸೊಸೆ ಹೊಡೆದಿರುವಂತಹ ಅಮಾನವೀಯ ಘಟನೆಯೊಂದು ನಗರದಲ್ಲಿ ನಡೆದಿದೆ. ಮಾರ್ಚ್ 9 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಉಮಾಶಂಕರಿ ಎಂಬುವವರಿಂದ ಕೃತ್ಯವೆಸಲಾಗಿದೆ. ಮಾವ ಪದ್ಮನಾಭ ಸುವರ್ಣ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ. ಪತಿ ವಿದೇಶದಲ್ಲಿದ್ದು ಮನೆಯಲ್ಲಿ ಮಾವ ಅತ್ತೆ ಮಾತ್ರ ಇದ್ದರು. ಸಿಸಿಟಿವಿ ಆಧರಿಸಿ ಪತಿ ಠಾಣೆಗೆ ದೂರು ನೀಡಿದ್ದು, ಕಂಕನಾಡಿ ಪೊಲೀಸರಿಂದ ಉಮಾಶಂಕರಿಯನ್ನು ಬಂಧಿಸಲಾಗಿದೆ.

ಶರ್ಟ್​ನ್ನು ಸೋಫಾ ಮೇಲೆ ಇಟ್ಟ ವಿಚಾರಕ್ಕೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಮಾವ ಪದ್ಮನಾಭ ಸುವರ್ಣ (87) ತಮ್ಮ ಶರ್ಟ್ ಬಿಚ್ಚಿ ಸೋಫಾ ಮೇಲೆ ಇಟ್ಟಿದ್ದರು. ಅದನ್ನು ನೋಡಿ ಕೆಂಡವಾಗಿದ್ದ ಪಾಪಿ ಸೊಸೆ‌. ‘ಹೋಗಿ ಸಾಯಿ’ ಎಂದು ಹಲ್ಲೆ‌ ಮಾಡಿದ್ದಾರೆ. ಸದ್ಯ ಉಮಾಶಂಕರಿ ವಿರುದ್ಧ ವೃದ್ಧರ ಮಗಳು ಪ್ರಿಯಾ ಎಂಬುವವರಿಂದ ಕೊಲೆಯತ್ನ ದೂರು ದಾಖಲು ಮಾಡಲಾಗಿದೆ


Spread the love

About Laxminews 24x7

Check Also

ಶೀಲ ಶಂಕಿಸಿ ಪತಿಯಿಂದ ಪತ್ನಿಯ ಭೀಕರ ಹತ್ಯೆ

Spread the loveಮಂಡ್ಯ: ಪತ್ನಿಯ ಶೀಲ ಶಂಕಿಸಿ ಪತಿಯೇ  ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ