Breaking News

ಸುಗಮ ಸಂಚಾರಕ್ಕೆ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ಸ್​ ಅಡ್ಡಿ: ವಾಹನ ಸವಾರರಿಗೆ ಕಿರಿಕಿರಿ

Spread the love

ಚಿತ್ರದುರ್ಗ, ಆಗಸ್ಟ್​ 24: ಸುಗಮ ಸಂಚಾರಕ್ಕಾಗಿ ನಗರ ಪ್ರದೇಶದಲ್ಲಿ ಟ್ರಾಫಿಕ್ ಸಿಗ್ನಲ್ಸ್(traffic signals)ಅಳವಡಿಸಲಾಗುತ್ತದೆ. ಅಂತೆಯೇ ವಾಹನ ಸವಾರರಿಗೆ ಟ್ರಾಫಿಕ್ ಸಿಗ್ನಲ್ಸ್ ಸಹಕಾರಿ ಆಗಿರುತ್ತದೆ. ಆದರೆ ಅದೊಂದು ನಗರದಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ಅಳವಡಿಸಿದ್ದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ವರದಿ ಇಲ್ಲಿದೆ. ಕೋಟೆನಾಡು ಚಿತ್ರದುರ್ಗ ನಗರದಲ್ಲಿ ವಾರದ ಹಿಂದಷ್ಟೇ ಹೊಸದಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಗಾಂಧಿವೃತ್ತದಲ್ಲಿ ಸಿಗ್ನಲ್ ಅಳವಡಿಸಲಾಗಿದೆ. ಅರ್ಧ ಕಿ.ಮೀಟರ್ ಗೂ ಕಡಿಮೆ ಅಂತರದಲ್ಲೇ ಇರುವ ಎಸ್ ಬಿಎಮ್ ಸರ್ಕಲ್ ಬಳಿ ಮತ್ತೆ ಸಿಗ್ನಲ್ ಅಳವಡಿಸಲಾಗಿದೆ.

ಅಂತೆಯೇ ಒನಕೆ ಓಬವ್ವ ಸ್ಟೇಡಿಯಂ ಕ್ರಾಸ್ ಮತ್ತು ಚಳ್ಳಕೆರೆ ಗೇಟ್ ಬಳಿಯೂ ಕಡಿಮೆ ಅಂತರದಲ್ಲೇ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಹೀಗಾಗಿ, ಒಂದು ವೃತ್ತದ ಸಿಗ್ನಲ್ ಪಾಸ್ ಆಗಿರುವ ವಾಹನ್ ಪಿಕ್ ಅಪ್ ತೆಗೆದುಕೊಳ್ಳುವ ಮುನ್ನವೇ ಮತ್ತೆ ಸಿಗ್ನಲ್ ಗಾಗಿ ಕಾಯುವಂತಾಗಿದೆ. ಇಡೀ ದುರ್ಗದ ಮುಖ್ಯ ರಸ್ತೆ ಸದಾ ವಾಹನಗಳಿಂದ ತುಂಬಿರುವ ಸ್ಥಿತಿ ನಿರ್ಮಾಣ ಆಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ