Breaking News

ಹುಲ್ಲು ತಿನ್ನಲು ಹೋಗಿ ಸೆಪ್ಟಿಕ್ ಟ್ಯಾಂಕನಲ್ಲಿ ಬಿದ್ದ ಎಮ್ಮೆ

Spread the love

ಹುಲ್ಲು ತಿನ್ನಲು ಹೋಗಿದ್ದ ಎಮ್ಮೆಯೊಂದು ಗೃಹ ಬಳಕೆ ಸೆಪ್ಟಿಕ್ ಟ್ಯಾಂಕನಲ್ಲಿ ಬಿದ್ದು ಕೆಲಕಾಲ ಒದ್ದಾಡಿದ ಘಟನೆ ಧಾರವಾಡದ ಯರಿಕೊಪ್ಪ ಗ್ರಾಮದಲ್ಲಿಂದು ನಡೆದಿದ್ದು, ಕೊನೆಗೆ ಅಗ್ನಿ ಶಾಮಕದಳದ ಸಿಬ್ಬಂದಿ ಎಮ್ಮೆಯನ್ನು ರಕ್ಷಣೆ ಮಾಡಿದ್ದಾರೆ.

ಧಾರವಾಡ ತಾಲ್ಲೂಕಿನ ಯರಿಕೊಪ್ಪ ಗ್ರಾಮದ ಈ ದುರ್ಘಟನೆ ನಡೆದಿದೆ. ಗ್ರಾಮದ ನಿವಾಸಿ ಶಿವಪುತ್ರಪ್ಪಾ ಅಂಗಡಿಯವರು ಪ್ರತಿದಿನದಂತೆ ಇವತ್ತು ಕೂಡಾ ಹುಲ್ಲು ತಿನ್ನಲು ಎಮ್ಮೆಯನ್ನು ಮನೆಯಿಂದ ಬಿಚ್ಚಿ ಹೊರಗಡೆ ಹೊಡೆದಿದ್ದಾರೆ.

ಈ ಸಮಯದಲ್ಲಿ ಹುಲ್ಲು ತಿನ್ನುತ್ತಲೇ ಹೋದ ಎಮ್ಮೆ ಗೃಹ ಬಳಕೆ ಸೆ್ಟಿಕ್ ಟ್ಯಾಂಕನಲ್ಲಿ ಬಿದ್ದಿದೆ. ಇನ್ನೂ ಎಮ್ಮೆಯ ಬಿದ್ದ ಶಬ್ದ ಹಾಗೂ ಅದರ ಚಿರಾಟ ಕೇಳಿ ಸ್ಥಳೀಯರು ರಕ್ಷಣೆ ಮುಂದಾಗಿದ್ದಾರೆ.

ಆದರೆ ಎಮ್ಮೆ ಮೇಲಕ್ಕೆ ಎತ್ತಲಾಗದೇ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿಯವರು ಹಲವು ಗಂಟೆ ಹರಸಾಹಸಟ್ಟು ಕೊನೆ ಎಮ್ಮೆಯನ್ನು ಸುರಕ್ಷಿತವಾಗಿ ಮೇಲೆಕ್ಕೆ ತಂದು ರಕ್ಷಣೆ ಮಾಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ