Breaking News

ಬತ್ತಿದ ಕೃಷ್ಣಾ ನದಿ,ಒಣಗಿದ ಬೆಳೆಗಳು

Spread the love

ವಾಡಿಕೆಯಂತೆ ಮುಂಗಾರು ಮಳೆ‌ ಆಗದೆ ಇರುವುದರಿಂದ ಹಾಗೂ ರಣ ಬಿಸಿಲಿನ ತಾಪಕ್ಕೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಕೃಷ್ಣಾ ನದಿ ಬತ್ತಿಹೋಗಿದ್ದು, ಜಮೀನಗಳಿಗಷ್ಟೇ ಅಲ್ಲದೇ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ.

.ಉತ್ತರ ಕರ್ನಾಟಕ ಜೀವನಾಡಿಯಾಗಿರುವ ಕೃಷ್ಣಾ ನದಿಯು ನೀರಿಲ್ಲದೆ ಬತ್ತಿಹೋಗಿದ್ದು,ಇದರಿಂದಾಗಿ ಜನಜಾನುವಾರುಗಳಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ರೈತರು ಹಗಲು ರಾತ್ರಿ ಎನ್ನದೇ ಸಾಲಸೂಲ ಮಾಡಿ ಕಷ್ಟಪಟ್ಟು ದುಡಿದು‌ ಬೆಳೆದ ಬೆಳೆಗಳು ಸಂಪೂರ್ಣವಾಗಿ ಒಣಗಿ‌ ಹೋಗಿದ್ದು ರೈತರಿಗೆ ಗಾಯದ ಬರೆ ಎಳೆದಂತಾಗಿದೆ.ಕೂಡಲೇ ಜನಪ್ರನಿಧಿಗಳು ಮಹಾರಾಷ್ಟ್ರದ ಸರ್ಕಾರದ ಜೊತೆಗೆ ಮಾತನಾಡಿ‌ ಕೃಷ್ಣಾ ನದಿಗೆ ನೀರು ಹರಿಸುವಂತೆ ರೈತರು ಆಗ್ರಹಿಸಿದಾರೆ.

ಕುಡಚಿ ಪಟ್ಟಣದ ‌ಕೃಷ್ಣಾನದಿಯು ಸಂಪೂರ್ಣವಾಗಿ ಬತ್ತಿ‌ಹೋಗಿದ್ದು,ನೀರಿನ ಸಮಸ್ಯೆ ತಲೆದೂರಿದೆ.ಈ ಹಿನ್ನೆಲೆಯಲ್ಲಿ ‌ರೈತ ಸಂಘದ ಸದಸ್ಯರು ನೀರು‌ ಬತ್ತಿದ್ದ ಪ್ರದೇಶಕ್ಕೆ ಭೇಟಿ ನೀಡಿ‌ದರು.ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟಿದರಿಂದ ನದಿಯು ಸಂಪೂರ್ಣವಾಗಿ ಬತ್ತಿ ಹೋಗಿದೆ.ಇದರಿಂದಾಗಿ ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.

ಕೂಡಲೇ ‌ಜನಪ್ರತಿನಿಧಗಳು ಮಹಾರಾಷ್ಟ್ರದ ‌ಸರ್ಕಾರದ ಜೊತೆ ಮಾತನಾಡಿ ಕೃಷ್ಣಾನದಿಗೆ ನೀರು ಹರಿಸುವಂತೆ ‌ಮನವಿಯನ್ನು‌ ಮಾಡಿಕೊಂಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ