Breaking News

Daily Archives: ಜುಲೈ 15, 2026

ಜಮೀರ್ ಅಹ್ಮದ್ ಆಸ್ತಿ ಪ್ರಕರಣ – ರಾಜ್ಯಪಾಲರ ನಿರ್ಧಾರ ಕಾದು ನೋಡಬೇಕು: ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ

ರಾಯಚೂರು: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಪ್ರಕರಣದ ದೂರು ನಮ್ಮಲ್ಲಿ ದಾಖಲಾಗಿದೆ. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಕೇಳಬೇಕಾಗಿದೆ. ಅನುಮತಿ ಕೇಳಿದ್ದೇವೆ. ರಾಜ್ಯಪಾಲರ ನಿರ್ಧಾರ ಏನು ಎಂದು ಕಾದು ನೋಡೋಣ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ  ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ದೂರು ದಾಖಲಾಗಿದ್ದು, ತನಿಖೆ ಆಗಿದೆ. ಚಾರ್ಜ್ಶೀಟ್ ಸಲ್ಲಿಸಲು ಲೋಕಾಯುಕ್ತ ಪೊಲೀಸರು ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದೇವೆ. …

Read More »

ಸಚಿವ ಸಂಪುಟ ವಿಸ್ತರಣೆ; ಜುಲೈ 19ಕ್ಕೆ ದೆಹಲಿಯಲ್ಲಿ ಹೈಕಮಾಂಡ್ ಸಭೆ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಯಾವಗ ಎನ್ನುವ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಿದೆ. ಆಷಾಢದಲ್ಲಿ ಸಂಪುಟ ವಿಸ್ತರಣೆಗೆ ನಿರ್ಧರಿಸಿರುವ ಹೈಕಮಾಂಡ್ ಜುಲೈ 19 ರಂದು ರಾಜ್ಯ ನಾಯಕರಿಗೆ ಬುಲಾವ್ ನೀಡುವ ಸಾಧ್ಯತೆ ಇದೆ. ಈ ಬಾರಿಯ ಸಂಪುಟದಲ್ಲಿ ಹೈಕಮಾಂಡ್ ಟ್ವಿಸ್ಟ್‌ವೊಂದು ಕೊಡುವ ಸಾಧ್ಯತೆಯೂ ಇದೆ. ರಾಜ್ಯ ಕಾಂಗ್ರೆಸ್ ಶಾಸಕರು ಕುತೂಹಲದಿಂದ ಎದುರು ನೋಡುತ್ತಿರುವ ಆ ದಿನ ಕಡೆಗೂ ಬಂದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಈ …

Read More »

ಬೆಳಗಾವಿಯ ಪೊಲೀಸ್ ಕಮಿಷನರ್ ಕಚೇರಿ ಪಕ್ಕದಲ್ಲೇ ಫೈರಿಂಗ್

ಬೆಳಗಾವಿ: ನಗರದ ಪೊಲೀಸ್‌ ಕಮಿಷನರ್‌ ಕಚೇರಿ ಪಕ್ಕದಲ್ಲೇ ಫೈರಿಂಗ್‌ ನಡೆದಿದ್ದು, ವ್ಯಕ್ತಿ ಕೂದಲೆಳೆ ಅಂತರದಿಂದ ಪಾರಾಗಿದ್ದಾನೆ. ನಗರದ ಜಿಮಖಾನ್ ಕ್ಲಬ್‌ನಲ್ಲಿ ಫೈರಿಂಗ್ ಮಾಡಿ ವ್ಯಕ್ತಿಯ ಹತ್ಯೆಗೆ ಯತ್ನ ನಡೆದಿತ್ತು. ಸುರೇಶ್ ಜಾಲಗಾರ ಎಂಬಾತನ ತಲೆಗೆ ಗನ್‌ನಿಂದ ಕುಕ್ಕಿ ದುಷ್ಕರ್ಮಿಗಳು ಬಳಿಕ ಫೈರಿಂಗ್ ಮಾಡಿದ್ದಾರೆ. ಫೈರಿಂಗ್ ಮುನ್ನವೇ ತಳ್ಳಿ ಸುರೇಶ್ ಎಸ್ಕೇಪ್ ಆಗಿದ್ದಾರೆ. ಸುರೇಶ್ ಪರಾರಿಯಾದ ಬಳಿಕ ಹೊರ ಬಂದು ಮತ್ತೆ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಐದು …

Read More »

ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ವಂಚನೆ ಗ್ರಾಹಕರ ಗೋಳು

ಬೀಳಗಿ: ಪಟ್ಟಣದ ಗಾಂಧಿ ನಗರದ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಘದಲ್ಲಿ ಹಣ ಹೂಡಿಕೆ ಮಾಡಿದ ಗ್ರಾಹಕರು ತಮ್ಮ ಹಣ ಮರಳಿ ಕೊಡುವಂತೆ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಸುಮಾರು ಒಂದು ವರ್ಷದಿಂದ ಕೇಳುತ್ತ ಬಂದರು ಕೂಡ ಮರಳಿ ಹಣ ಕೊಡದ ಕಾರಣ ತಾಲೂಕಿನ ಹಲವು ಗ್ರಾಮಗಳಿಂದ ಆಗಮಿಸಿದ ಸಂಘದ ಮಹಿಳಾ ಸದಸ್ಯ ಗ್ರಾಹಕರಿಂದ ಸಂಘದ ಕಚೇರಿಗೆ ಘೇರಾವ ಹಾಕಿ ಪೊಲೀಸ್ ಠಾಣೆಗೆ ದೂರು ನೀಡಲು ನೂರಾರು …

Read More »

ಮಹಮ್ಮದ ಪೈಗಂಬರ್ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ಮುಧೋಳದಲ್ಲಿ ತೀವ್ರ ಪ್ರತಿಭಟನೆ

ಮುಧೋಳ : ಪ್ರವಾದಿ ಮಹಮ್ಮದ ಪೈಗಂಬರ್ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡಿದ ಪಶ್ಚಿಮ ಬಂಗಾಳದ ನಾಜಿಯಾ ಇಲಾಹಿ ಖಾನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಗುರುವಾರ ನಗರದಲ್ಲಿ ತೀವ್ರ ಪ್ರತಿಭಟನೆ ನಡೆಸಿದವು. ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ನಾಜಿಯಾ ಇಲಾಹಿ ಅವರ ವಿಡಿಯೋ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ದೇಶದ ಸೌಹಾರ್ದತೆಗೆ ಧಕ್ಕೆ …

Read More »

ಪರಿಶ್ರಮದಿಂದ ಅಧ್ಯಯನ ಮಾಡಿ

ಹಾರೂಗೇರಿ: ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಮತ್ತು ಸ್ಪಷ್ಟ ಗುರಿಯೊಂದಿಗೆ ಅಧ್ಯಯನ ಮಾಡಿದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು. ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಜಿಲ್ಲಾ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಚನ್ನದಾಸರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿಶ್ರಮ …

Read More »

ರಸ್ತೆ ಪ್ರಗತಿಯಿಂದ ಜನರಿಗೆ ಅನುಕೂಲ

ಅಥಣಿ ಗ್ರಾಮೀಣ: ಗ್ರಾಮಗಳ ಅಭಿವೃದ್ಧಿ ಕಾಮಗಾರಿ ಯಶಸ್ವಿಯಾಗಬೇಕಾದರೆ, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ಜಿಪಂ ವತಿಯಿಂದ ಹಮ್ಮಿಕೊಂಡಿದ್ದ 1.45 ಕೋಟಿ ರೂ. ವೆಚ್ಚದ ರಸ್ತೆ, ಸಮುದಾಯ ಭವನ ನಿರ್ಮಾಣ ಹಾಗೂ ಕಟ್ಟಡ ಅಡಿಗಲ್ಲು ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಜನರ ಜೀವನಮಟ್ಟ ಉತ್ತಮಗೊಳಿಸುವುದರ ಜತೆಗೆ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನಿರ್ಮಿಸುವುದೇ ನಿಜವಾದ ಅಭಿವೃದ್ಧಿಯಾಗಿದೆ. ಸರ್ಕಾರದಿಂದ …

Read More »

ವಿದ್ಯಾರ್ಥಿನಿ ಮಾನಭಂಗಕ್ಕೆ ಯತ್ನಿಸಿದ ಆಟೋ ಚಾಲಕನಿಗೆ ಜೈಲು ಶಿಕ್ಷೆ

ಬೆಳಗಾವಿ: ಹಾಡಹಗಲೇ ಕಾಲೇಜ್ ವಿದ್ಯಾರ್ಥಿನಿ ಮಾನಭಂಗಕ್ಕೆ ಯತ್ನಿಸಿದ ಆಟೋ ಚಾಲಕನಿಗೆ 2ನೇ ಜೆಎಂಎಫ್ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿದೆ. ಜಾಫರ್ ಸಾದಿಕ್ ಮೈನುದ್ದೀನ್ ಕಂಚಿ ಶಿಕ್ಷೆಗೊಳಗಾದ ಅಪರಾಧಿ. 2019ರ ಜೂ.23ರಂದು ಕೇಂದ್ರ ಬಸ್ ನಿಲ್ದಾಣದಿಂದ ಕೋಟೆ ಕೆರೆ ರಸ್ತೆಯತ್ತ ನಡೆದುಕೊಂಡು ಹೊರಟಿದ್ದಾಗ ಮಳೆ ಬಂದ ಕಾರಣಕ್ಕೆ ವಿದ್ಯಾರ್ಥಿನಿ ಈತನ ಆಟೋ ಹತ್ತಿದ್ದಳು. ಈಕೆ ಒಂಟಿಯಾಗಿದ್ದನ್ನೇ ದುರುಪಯೋಗಪಡಿಸಿಕೊಂಡಿದ್ದ ಚಾಲಕ ಕೆಇಬಿ ಪವರ್ ಗ್ರೀಡ್ …

Read More »

ಬೀಳಗಿಯಲ್ಲಿ ₹43.40 ಲಕ್ಷಕ್ಕೂ ಅಧಿಕ ಹಣ ವಂಚನೆ ; ಇಬ್ಬರು ಆರೋಪಿಗಳ ಬಂಧನ

ಬಾಗಲಕೋಟೆ ಜಿಲ್ಲೆ ಬಿಳಗಿ ಪೊಲೀಸ್ ಠಾಣೆಯಲ್ಲಿ ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವಿರುದ್ಧ ಸಾರ್ವಜನಿಕರಿಗೆ ಆಕರ್ಷಕ ಲಾಭಾಂಶದ ಭರವಸೆ ನೀಡಿ ಹಣ ಸಂಗ್ರಹಿಸಿ ವಂಚನೆ ನಡೆಸಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಸಂಸ್ಥೆಯು ವಿವಿಧ ಮುಖಬೆಲೆಯ ಯೋಜನೆಗಳ ಮೂಲಕ, ವಿಶೇಷವಾಗಿ ಮಹಿಳೆಯರನ್ನು ಸಣ್ಣ-ಸಣ್ಣ ಗುಂಪುಗಳಾಗಿ ಸೇರಿಸಿ, ಮೂರು ವರ್ಷಗಳ ನಂತರ ಹೆಚ್ಚಿನ ಹಣ ಮರಳಿ ನೀಡುವುದಾಗಿ ಭರವಸೆ ನೀಡಿ ವಾರದ/ತಿಂಗಳ ಕಂತುಗಳ ರೂಪದಲ್ಲಿ ಹಣ ಸಂಗ್ರಹಿಸಿರುವುದು ತನಿಖೆಯಲ್ಲಿ ಬೆಳಕಿಗೆ …

Read More »

ಸಾಲದ ಕಿರುಕುಳಕ್ಕೆ ಮಗನ ಕೊಂದು ತಾನೂ ಆತ್ಮಹತ್ಯೆ

ಬೆಳಗಾವಿ: ತಾಲೂಕಿನ ಪೀರನವಾಡಿ ಪಟ್ಟಣದಲ್ಲಿ ಮೂರು ವರ್ಷದ ಮಗನಿಗೆ ನೇಣು ಹಾಕಿ ಬಳಿಕ ತಾಯಿಯೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ, ಅತ್ತೆ, ಮೈದುನ, ವಾರಗಿತ್ತಿ ಸೇರಿದಂತೆ ಆರು ಜನರ ವಿರುದ್ಧ ಸೋಮವಾರ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಘಟನೆ?: ಅವಿಭಕ್ತ ಕುಟುಂಬದಲ್ಲಿ ಮಾಡಿದ ಸಾಲವನ್ನು ಬೇರೆಯಾದ ಬಳಿಕ ಹಿರಿ ಮಗ ಹಾಗೂ ಆಕೆಯ ಪತ್ನಿಯೇ ತೀರಿಸಬೇಕೆಂದು ಒತ್ತಡ ಹಾಕಿದ್ದರಿಂದ ಮನನೊಂದ ಪ್ರೇಮಾ ನಾಗೇಶ ತಳವಾರ(28) …

Read More »