ಚಾಮರಾಜನಗರ, ಮಾರ್ಚ್ 16: ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿಯ (Wife) ಕಿರುಕುಳಕ್ಕೆ ಬೇಸತ್ತು ಡೆತ್ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆಗೆ (death) ಶರಣಾಗಿರುವಂತಹ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ. ಪರಶಿವಮೂರ್ತಿ(32) ಮೃತ ಪತಿ. ತಲೆಯಲ್ಲಿ ಕೂದಲಿಲ್ಲ ಎಂದು ಪರಶಿವಮೂರ್ತಿಗೆ ಪತ್ನಿ ಮಮತಾ ಅಪಹಾಸ್ಯ ಮಾಡುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಚಾಮರಾಜನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದ ಹಿಂದೆ ಪರಶಿವಮೂರ್ತಿ ಮತ್ತು ಮಮತಾ ಮದುವೆಯಾಗಿದ್ದರು. ವೃತ್ತಿಯಲ್ಲಿ ಪರಶಿವಮೂರ್ತಿ …
Read More »Daily Archives: ಮಾರ್ಚ್ 16, 2025
ಬೆಳಗಾವಿ: ೧೬-೩-೨೪ ಲಿಂಗಾಯತ ಸ೦ಘಟನೆ ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಭವನ ಬೆಳಗಾವಿ ಶರಣರ ಕಾಯಕ ದಾಸೋಹ ಸಂಸ್ಕೃತಿ ಲೋಕಕ್ಕೆ ಮಾದರಿ- ಸಾಹಿತಿ,ಬಸವರಾಜ ಕುಪ್ಪಸ ಗೌಡ್ರ
ಬೆಳಗಾವಿ: ೧೬-೩-೨೪ ಲಿಂಗಾಯತ ಸ೦ಘಟನೆ ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಭವನ ಬೆಳಗಾವಿ ಶರಣರ ಕಾಯಕ ದಾಸೋಹ ಸಂಸ್ಕೃತಿ ಲೋಕಕ್ಕೆ ಮಾದರಿ- ಸಾಹಿತಿ,ಬಸವರಾಜ ಕುಪ್ಪಸ ಗೌಡ್ರ ಶರಣರ ಕಾಯಕ, ದಾಸೋಹ, ಸಂಸ್ಕೃತಿ ಲೋಕಕ್ಕೆ ಮಾದರಿ ಉಪನ್ಯಾಸಕ, ಸಾಹಿತಿ ಬಸವರಾಜ ಕುಪ್ಪಸಗೌಡ್ರ , ಪ್ರಾರಂಭದಲಿೢ ಸುರೇಶ ನರಗುಂದ ಪ್ರಾಥ೯ನೆ ನಡೆಸಿಕೊಟ್ಟರು ಶರಣ ಬಿಬ್ಬಿ ಬಾಚಯ್ಯ ನವರ ಕುರಿತು ಉಪನ್ಯಾಸ ನೀಡಿದ ಸಾಹಿತಿ ಬಸವರಾಜ ಕುಪ್ಪಸಗೌಡ್ರ, ಕಾಯಕ, ದಾಸೋಹ ಪ್ರಸಾದದ ಮಹತ್ವವನ್ನು 12ನೇ …
Read More »75 ಕೋಟಿ ರೂಪಾಯಿಯ MDMA ವಶಕ್ಕೆ ಪಡೆದ ಮಂಗಳೂರು ಪೊಲೀಸರು
ಮಂಗಳೂರು: ಮಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 75 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ರಾಜ್ಯ ಪೊಲೀಸ್ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ಮಾದಕ ವಸ್ತು ವಶಕ್ಕೆ ಪಡೆದ ಕಾರ್ಯಾಚರಣೆ ಇದಾಗಿದೆ. ಈ ಕಾರ್ಯಾಚರಣೆಯಲ್ಲಿ ದೇಶಾದ್ಯಂತ ಎಂಡಿಎಂಎ ಮಾರಾಟ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಮಹಿಳಾ ಪ್ರಜೆಗಳಿಬ್ಬರನ್ನು ಬಂಧಿಸಲಾಗಿದೆ. ಬೆಂಬಾ ಫೆಂಟಾ ಅಲಿಯಾಸ್ ಅಡೋನಿಸ್ (31) ಮತ್ತು ಅಬಿಗಾಲಿ ಅಡೋನಿಸ್ (30) ಬಂಧಿತರು.ಡ್ರಗ್ಸ್ ಫ್ರಿ ಮಂಗಳೂರು” ಮಾಡುವ …
Read More »ಮೃತ ಯುವತಿಯ ಮನೆಗೆ ಸಂಸದ ಬಸವರಾಜ ಬೊಮ್ಮಾಯಿ ಭೇಟಿ
ಹಾವೇರಿ : ಇದೇ ತಿಂಗಳ 3 ರಂದು ಮೂವರು ಯುವಕರಿಂದ ಕೊಲೆಯಾದ ಯುವತಿ ಸ್ವಾತಿ ಮನೆಗೆ ಮಾಜಿ ಸಿಎಂ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಶನಿವಾರ ಭೇಟಿ ನೀಡಿದ್ದರು. ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಮಾಸೂರು ಗ್ರಾಮದಲ್ಲಿರುವ ಸ್ವಾತಿ ಬ್ಯಾಡಗಿ ನಿವಾಸಕ್ಕೆ ಭೇಟಿ ನೀಡಿದ ಬೊಮ್ಮಾಯಿ ಅವರು ಸ್ವಾತಿ ತಾಯಿ ಮತ್ತು ಸಂಬಂಧಿಕರಿಗೆ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಅವರು, ಸ್ವಾತಿ ಬ್ಯಾಡಗಿ ಹತ್ಯೆ ಆಘಾತ ಉಂಟು ಮಾಡಿದೆ. ಸ್ವಾತಿ ತಾಯಿ …
Read More »ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಒಂದರಲ್ಲೇ 150ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಮಕ್ಕಳು ತೊರೆದ ಪ್ರಕರಣಗಳವರದಿ
ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ವೃದ್ಧ ಪೋಷಕರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಅದೂ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಗೆ ಬಿಟ್ಟು ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. ಈ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ ವಿಲ್‌ಗಳು ಮತ್ತು ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸುವಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಇಂದಿನ ಯಾಂತ್ರೀಕೃತ ಹಾಗೂ ತಂತ್ರಜ್ಞಾನ ಜೀವನದಲ್ಲಿ ಜನ್ಮ ನೀಡಿದ ತಂದೆ-ತಾಯಂದಿರನ್ನೇ ಅನಾಥರನ್ನಾಗಿ …
Read More »ವಶಕ್ಕೆ ಪಡೆದ ಕಾರುಗಳು, ಗುಂಡೇಟು ತಿಂದ ಆರೋಪಿ
ದಾವಣಗೆರೆ : ಸಿನಿಮೀಯ ರೀತಿಯಲ್ಲಿ ದರೋಡೆಗೆ ಬಂದಿದ್ದ ಉತ್ತರ ಪ್ರದೇಶದ ದರೋಡೆಕೋರರ ತಂಡದ ನಾಲ್ವರನ್ನು ದಾವಣಗೆರೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, “ನ್ಯಾಮತಿ ಕಡೆಗೆ ಎರಡು ವಾಹನಗಳಲ್ಲಿ ದರೋಡೆ ಮಾಡುವುದಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಶನಿವಾರ ನಮಗೆ ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡು ಎಲ್ಲೆಡೆ ಚೆಕ್ಪೋಸ್ಟ್ಗಳನ್ನು ಹಾಕಿದ್ದೆವು. ಉತ್ತರ ಪ್ರದೇಶ ನಂಬರ್ ಪ್ಲೇಟ್ ಹೊಂದಿರುವ ಎರಡು ಕಾರುಗಳಲ್ಲಿದ್ದ ದರೋಡೆಕೋರರು ಹರಿಹರದಿಂದ ಕಡದಕಟ್ಟೆ ಕಡೆಗೆ …
Read More »ಕಾಂಗ್ರೆಸ್ ಗ್ಯಾರಂಟಿಗಳಿಗೆ ಯಾವುದೇ ಅರ್ಥ ಇಲ್ಲ : ಮಾಜಿ ಸಿಎಂ ಯಡಿಯೂರಪ್ಪ
ಬೆಳಗಾವಿ : ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಅರ್ಥ ಇಲ್ಲ. ಜನರನ್ನು ತೃಪ್ತಿ ಪಡಿಸಲು ಘೋಷಣೆ ಮಾಡಿದ್ದರು. ಆದರೆ, ಅವು ಯಾವೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಒಂದು ರೀತಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಎಷ್ಟು ದಿವಸ ಮಾಡ್ತಾರೆ ಮಾಡಲಿ ಎನ್ನುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು. ಬೆಳಗಾವಿಗೆ ವಿಶೇಷವಾದ ಕಾರ್ಯಕ್ರಮಕ್ಕೆ …
Read More »ಸಿದ್ದರಾಮಯ್ಯ ಜಾತಿ-ಜಾತಿಗಳ ಮಧ್ಯ ಜಗಳ ತಂದಿಡುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ : ವಿಜಯೇಂದ್ರ
ಬೆಳಗಾವಿ : ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಮೂಲಕ ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ, ಒಡಕು ಮೂಡಿಸುವ ದುಸ್ಸಾಹಸ ಮತ್ತು ಷಡ್ಯಂತ್ರಕ್ಕೆ ಸಿಎಂ ಸಿದ್ದರಾಮಯ್ಯ ಕೈಹಾಕಿದ್ದಾರೆ. ಮುಸ್ಲಿಂರ ಓಲೈಕೆ ದುರ್ದೈವದ ಸಂಗತಿ. ಇದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಸದನದ ಹೊರಗೆ ಮತ್ತು ಒಳಗೆ ಎರಡೂ ಕಡೆ ಇದರ ವಿರುದ್ಧ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಎಚ್ಚರಿಸಿದರು. ಇಂದು ನಗರದ ಸಾಂಬ್ರಾ ವಿಮಾನ …
Read More »ಜಮೀನುಗಳಿಗೆ ನುಗ್ಗಿ ಬೆಳೆ ನೆಲಸಮಗೊಳಿಸಿದ ಕಾಡಾನೆಗಳು
ಹಾವೇರಿ : ಜಿಲ್ಲೆಯ ಶಿಗ್ಗಾಂವಿ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇದೀಗ ಆನೆಗಳ ಕಾಟ ಶುರುವಾಗಿದೆ. ರೈತರ ಜಮೀನುಗಳಿಗೆ ನುಗ್ಗಿ ಸಾಕಷ್ಟು ಪ್ರಮಾಣದ ಬೆಳೆ ನಷ್ಟ ಮಾಡಿವೆ. ವೀಳ್ಯದೆಲೆ, ಅಡಿಕೆ, ಬಾಳೆ ತೋಟಗಳತ್ತ ನುಗ್ಗಿ ಕಾಡಾನೆಗಳು ಬೆಳೆಗಳನ್ನು ನೆಲಸಮ ಮಾಡಿವೆ. ಇದರಿಂದಾಗಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಶಿಗ್ಗಾಂವಿ ಪಟ್ಟಣಕ್ಕೆ ನೀರು ಪೂರೈಸುವ ನಾಗನೂರು ಕೆರೆಯಲ್ಲಿ ಎರಡು ಕಾಡಾನೆಗಳು ಜಲಕ್ರೀಡೆಯಾಡಿರುವ ದೃಶ್ಯಗಳನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ. …
Read More »ಮೊ ರಾರ್ಜಿ ದೇಶಯಿವಸತಿ ಶಾಲೆ ಪರೀಕ್ಷೆ ಯಲ್ಲಿ 100ಕ್ಕೆ 97 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾ ನ ಪಡೆದ ಬಾಲಕ
ಬೆಳಗಾವಿ:2025ನೇ ಸಾಲಿ ನಲ್ಲಿ ನಡೆದ ಮೊರಾರ್ಜಿ ದೇಸಾಯಿಪರೀಕ್ಷೆ ಯಲ್ಲಿ ರಾಜ್ಯಕ್ಕೆ ದ್ವಿತೀಯ ಹಾಗೂ ನಮ್ಮ ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಸಿಕ್ಕಿದೆ ಅದಕ್ಕೆ ಕಾರಣ ಗುರು ಬಸವಕನ್ನಡ ಹಿರಿಯ ಪ್ರಾ ಥ ಮಿಕ ಶಾಲೆವೀರನ ಗಡ್ಡಿ ಶಾಲೆಯ ಬಾಲಕವಿನಾಯಕ ಸಿದ್ದಪ್ಪ ಪೋಟಿ ಇವನ್ ಸಾಧನೆ ಅಪಾರ್ ಹಾಗೂ ಇಂಥ ಬೆಳೆಯುವ ಹಾ ಹಾಗೂ ಶಿಕ್ಷಣದ ಬಗ್ಗೆ ಆಸಕ್ತ ತೆ ಹೊಂದಿರುವ ಮಕ್ಕಳಿಗೆ ಜಾರಕಿ ಹೊಳಿ ಕುಟುಂಬ ಸದಾ ಬೆಂಬಲ ವಾಗಿರುತ್ತೇ …
Read More »