Breaking News

ವಶಕ್ಕೆ ಪಡೆದ ಕಾರುಗಳು, ಗುಂಡೇಟು ತಿಂದ ಆರೋಪಿ

Spread the love

ದಾವಣಗೆರೆ : ಸಿನಿಮೀಯ ರೀತಿಯಲ್ಲಿ ದರೋಡೆಗೆ ಬಂದಿದ್ದ ಉತ್ತರ ಪ್ರದೇಶದ ದರೋಡೆಕೋರರ ತಂಡದ ನಾಲ್ವರನ್ನು ದಾವಣಗೆರೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್​ ಮಾತನಾಡಿ, “ನ್ಯಾಮತಿ ಕಡೆಗೆ ಎರಡು ವಾಹನಗಳಲ್ಲಿ ದರೋಡೆ ಮಾಡುವುದಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಶನಿವಾರ ನಮಗೆ ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡು ಎಲ್ಲೆಡೆ ಚೆಕ್​ಪೋಸ್ಟ್​ಗಳನ್ನು ಹಾಕಿದ್ದೆವು. ಉತ್ತರ ಪ್ರದೇಶ ನಂಬರ್​ ಪ್ಲೇಟ್​ ಹೊಂದಿರುವ ಎರಡು ಕಾರುಗಳಲ್ಲಿದ್ದ ದರೋಡೆಕೋರರು ಹರಿಹರದಿಂದ ಕಡದಕಟ್ಟೆ ಕಡೆಗೆ ಕ್ರಾಸ್​ ಆಗಿದ್ದರು. ಅಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಅವರನ್ನು ತಡೆಯಲು ಹೋದಾಗ, ಅವರು ಕಾರು ನಿಲ್ಲಿಸದೆ ವೇಗವಾಗಿ ಬರುತ್ತಾರೆ. ಇದರಿಂದ ಸಿಬ್ಬಂದಿ ನ್ಯಾಮತಿ ​ಠಾಣೆ ಇನ್ಸ್​ಪೆಕ್ಟರ್​ ರವಿ ಅವರಿಗೆ ಫೋನ್​ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದರು” ಎಂದರು.

“ನಂತರ ದರೋಡೆಕೋರರು ಕಡದಕಟ್ಟೆಯಿಂದ ಅರಬಗಟ್ಟೆ ಕಡೆಗೆ ಬರುತ್ತಾರೆ. ಅಷ್ಟೊತ್ತಿಗಾಗಲೇ ನಮ್ಮ ಇನ್ಸ್​ಪೆಕ್ಟರ್​ ಮತ್ತು ಸಿಬ್ಬಂದಿ ಅಲ್ಲಿಗೆ ಆಗಮಿಸಿದ್ದರು. ಉತ್ತರ ಪ್ರದೇಶದ ನಂಬರ್​ ಪ್ಲೇಟ್​ ಇದ್ದ ಎರಡು ವಾಹನಗಳನ್ನು ತಡೆದು ನಿಲ್ಲಿಸಿ, ಆರೋಪಿಗಳನ್ನು ಬಂಧಿಸಲು ಹೋದಾಗ ಗುಂಪಿನಲ್ಲಿದ್ದ ಓರ್ವನು ಪೊಲೀಸ್​ ಸಿಬ್ಬಂದಿಯ ಮೇಲೆಯೇ ದಾಳಿ ಮಾಡಲು ಮುಂದಾಗುತ್ತಾನೆ. ಈ ವೇಳೆ ಇನ್ಸ್​ಪೆಕ್ಟರ್​ ಎಚ್ಚರಿಕೆ ನೀಡಿದ್ದಾರೆ. ಆದರೂ ಕೇಳದೇ ಸಿಬ್ಬಂದಿಯನ್ನು ಕೆಳಗೆ ಬೀಳಿಸಿ ದಾಳಿ ಮಾಡಲು ಪ್ರಯತ್ನಿಸಿದಾಗ ಇನ್ಸ್​ಪೆಕ್ಟರ್​ ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ, ಆರೋಪಿಯ ಕಾಲಿಗೆ ಫೈರಿಂಗ್​ ಮಾಡಿದ್ದಾರೆ. ನಂತರ ಆತನನ್ನು ನ್ಯಾಮತಿ ಆಸ್ಪತ್ರೆ ರವಾನಿಸಿ, ನಂತರ ಅಲ್ಲಿಂದ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ದಿದ್ದೇವೆ” ಎಂದು ಎಸ್​ಪಿ ತಿಳಿಸಿದರು-.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ