Home / 2021 (page 22)

Yearly Archives: 2021

ಇಂದು ವಿಧಾನಸಭೆಯಲ್ಲಿ ವಿವಾದಿತ ಮತಾಂತರ ವಿರೋಧಿ ಮಸೂದೆಯ ಬಗ್ಗೆ ಚರ್ಚೆ

ಬೆಂಗಳೂರು:ಕರ್ನಾಟಕ ವಿಧಾನಸಭೆಯು ಬುಧವಾರ ವಿವಾದಿತ ಮತಾಂತರ ವಿರೋಧಿ ಮಸೂದೆಯ ಬಗ್ಗೆ ಚರ್ಚಿಸಲಿದೆ.ಕಾಂಗ್ರೆಸ್‌ನ ತೀವ್ರ ವಿರೋಧದ ನಡುವೆಯೇ ಧರ್ಮದ ಸ್ವಾತಂತ್ರ್ಯದ ಹಕ್ಕು ಕರ್ನಾಟಕ ರಕ್ಷಣೆ ಮಸೂದೆ 2021 ಅನ್ನು ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ಮಸೂದೆಯು ಧರ್ಮದ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸಲು ಮತ್ತು ತಪ್ಪಾಗಿ ನಿರೂಪಿಸುವಿಕೆ, ಬಲವಂತ, ಅನಗತ್ಯ ಪ್ರಭಾವ,ಆಮಿಷ ಅಥವಾ ಯಾವುದೇ ಮೋಸದ ವಿಧಾನದಿಂದ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನುಬಾಹಿರವಾಗಿ ಮತಾಂತರವನ್ನು ನಿಷೇಧಿಸಲು ಒದಗಿಸುತ್ತದೆ. ರಾಜ್ಯ ಕಾಂಗ್ರೆಸ್ …

Read More »

ನಿನ್ನೆಯ ಅಬ್ಬರದ ಹೇಳಿಕೆಗೆ ಇಂದು ಕ್ಷಮೆಯಾಚಿಸಿದ ಸಿ.ಎಂ.ಇಬ್ರಾಹಿಂ

ಬೆಳಗಾವಿ, ಡಿ 21: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹಾವೇರಿ ಭಾಷಣಕ್ಕೆ ವ್ಯಂಗ್ಯವಾಡುತ್ತಾ ಸೋಮವಾರದಂದು (ಡಿ 20) ನೀಡಿದ್ದ ಹೇಳಿಕೆಗೆ ಇಂದು, ವಿಧಾನಪರಿಷತ್ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಕ್ಷಮೆಯಾಚಿಸಿದ್ದಾರೆ. “ಅಳಬ್ಯಾಡ ತಂಗಿ ಅಳಬ್ಯಾಡ, ಬೊಮ್ಮಣ್ಣ ಅಳಬೇಡ. ಈಗ ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ. ಜಾಗ ಖಾಲಿ ಮಾಡುವ ಎನ್ನುವ ಸೂಚನೆ ಅವರಿಗೆ ಸಿಕ್ಕಿದೆ, ಅದಕ್ಕೆ ಯಾವುದೂ ಶಾಸ್ವತವಲ್ಲ ಎಂದು ಅವರು ಹೇಳುತ್ತಿದ್ದಾರೆ” ಎಂದು ಬೊಮ್ಮಾಯಿ ಭಾಷಣವನ್ನು ಇಬ್ರಾಹಿಂ ಲೇವಡಿ ಮಾಡಿದ್ದರು. …

Read More »

ಮಹಾರಾಷ್ಟ್ರದ 40 ಗ್ರಾಮಗಳು ಕರ್ನಾಟಕಕ್ಕೆ ಸೇರಿಸುವಂತೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ

ಬೆಳಗಾವಿ: ಮಹಾರಾಷ್ಟ್ರದ 40 ಗ್ರಾಮಗಳು ಕರ್ನಾಟಕಕ್ಕೆ ಸೇರಿಸುವಂತೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಈ ಬಗ್ಗೆ ಸದನದಲ್ಲಿ ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿಯವರು ಮಾತನಾಡುತ್ತ, ಈ ಬಗ್ಗೆ ಹೇಳಿದರು. ಇದೇ ವೇಳೆ ಅವರು ಮಾತನಾಡಿ, ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿರೂಪಗೊಳಿಸಿದವರು ಹಾಗೂ ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದಂತ ಬಂಧಿತರ ವಿರುದ್ಧ ಗುಂಡಾ ಕಾಯ್ದೆ ಹಾಗೂ ದೇಶದ್ರೋಹ ಕಾಯ್ದೆಗಳಡಿಯಲ್ಲಿ ಕೇಸ್ ದಾಖಲಿಸಿ, ತನಿಖೆಯ ಮೂಲಕ …

Read More »

ರಾಜ್ಯ ವಿಧಾನಸಭೆಯಲ್ಲಿ ‘ಮತಾಂತರ ನಿಷೇಧ ವಿಧೇಯಕ’ ಮಂಡನೆ

ಬೆಂಗಳೂರು: ನಿನ್ನೆ ರಾಜ್ಯ ಸಚಿವ ಸಂಪುಟದಲ್ಲಿ ವಿಧಾನಸಭೆಯಲ್ಲಿ ಮಂಡಿಸಲು ಒಪ್ಪಿಗೆ ಸೂಚಿಸಲಾಗಿದ್ದಂತ ಮತಾಂತರ ವಿಧೇಯಕ ಮಸೂಧೆಯನ್ನು ಅಂತೂ ಇಂತೂ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಇದೀಗ ಮಂಡಿಸಿದೆ. ಇಂದು ವಿಧಾನಸಭೆಯ ಕಲಾಪದ ಪಟ್ಟಿಯಲ್ಲಿ ಮತಾಂತರ ನಿಷೇಧ ವಿಧೇಯಕದ ಮಂಡನೆಯನ್ನು ಸೇರಿಸಿರಲಿಲ್ಲ. ಇದರ ನಡುವೆಯೂ ಮಧ್ಯಾಹ್ನದ ಭೋಜನದ ವಿರಾಮದ ನಂತ್ರ ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರವು ಮತಾಂತರ ನಿಷೇಧದ ವಿಧೇಯಕವನ್ನು ಮಂಡನೆ ಮಾಡಲಾಯಿತು. ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದಂತ ವಿಪಕ್ಷ ನಾಯಕ …

Read More »

ಕ್ರಿಸ್‌ಮಸ್‌, ಹೊಸ ವರ್ಷಾಚರಣೆ ಹೇಗೆ? ಯಾವ್ಯಾವುದಕ್ಕೆ, ಎಷ್ಟು ದಿನ ಬ್ರೇಕ್‌? ಅಪಾರ್ಟ್‌ಮೆಂಟ್‌ಗಳಿಗೇನು ರೂಲ್ಸ್‌?

ಬೆಂಗಳೂರು: ಕರೊನಾ, ಒಮಿಕ್ರಾನ್‌ ಭೀತಿಯ ನಡುವೆ ಮತ್ತೊಂದು ಹೊಸ ವರ್ಷ ಕಾಲಿಡುತ್ತಿದೆ. ಕಳೆದ ವರ್ಷದಂತೆಯೇ ನೂತನ ವರ್ಷದ ಆಚರಣೆಗೆ ಈ ಬಾರಿಯೂ ಬ್ರೇಕ್‌ ಹಾಕಲಾಗಿದೆ. ಕ್ಷಣಕ್ಷಣಕ್ಕೂ ಕರೊನಾ ಜತೆ ಒಮಿಕ್ರಾನ್‌ ಭೀತಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಆಚರಣೆಗೆ ಕೆಲವೊಂದು ಕಟ್ಟುನಿಟ್ಟಿನ ನಿಯಮ ಮಾಡಲಾಗಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಲವೊಂದು ಮಾಹಿತಿ ನೀಡಿದ್ದಾರೆ. ತಜ್ಞರ ಜತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ನಂತರ ಕ್ರಿಸ್‌ಮಸ್‌ ಮತ್ತು …

Read More »

200 ಕೋಟಿ ರೂ. ವೆಚ್ಚದಲ್ಲಿ ಹೊಸ ಪೊಲೀಸ್ ಠಾಣೆ ನಿರ್ಮಾಣ: ಅರಗ ಜ್ಞಾನೇಂದ್ರ

ಬೆಳಗಾವಿ,ಡಿ.21- ರಾಜ್ಯದಲ್ಲಿ ಕಟ್ಟಡವಿಲ್ಲದ ಪ್ರಮುಖ ಪೊಲೀಸ್ ಠಾಣೆಗಳಿಗೆ ನೂತನ ಕಟ್ಟಡಗಳನ್ನು ಮಂಜೂರು ಮಾಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 100 ಠಾಣೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನಸಭೆ ತಿಳಿಸಿದರು.   ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಎಸ್.ಕುಮಾರಬಂಗಾರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 200 ಕೋಟಿ ರೂ. ವೆಚ್ಚದಲ್ಲಿ ಹೊಸ ಪೊಲೀಸ್ ಠಾಣೆ ನಿರ್ಮಾಣ ಮಾಡಲಾಗುತ್ತಿದೆ. ಉಪಠಾಣೆಗಳ ನಿರ್ಮಾಣದ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು. ಪೊಲೀಸ್ ಗೃಹ …

Read More »

‘ನಾನು ಇಲ್ಲದೆ ಮೈಸೂರಿನಲ್ಲಿ ನೀವು ಸಭೆ ಮಾಡಬೇಡಿ. ಅದು ಸರಿಯಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ

ಬೆಳಗಾವಿ (ಸುವರ್ಣ ವಿಧಾಸೌಧ): ‘ನಾನು ಇಲ್ಲದೆ ಮೈಸೂರಿನಲ್ಲಿ ನೀವು ಸಭೆ ಮಾಡಬೇಡಿ. ಅದು ಸರಿಯಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.   ಮೇಕೆದಾಟು ಯೋಜನೆಯ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಹಮ್ಮಿಕೊಳ್ಳಲಿರುವ ಪಾದಯಾತ್ರೆಗೆ ಪೂರ್ವಭಾವಿಯಾಗಿ ಇದೇ 23ರಂದು ಮೈಸೂರಿನಲ್ಲಿ ಪಕ್ಷದ ಶಾಸಕರ ಸಭೆ ನಡೆಸಲು ಶಿವಕುಮಾರ್‌ ನಿರ್ಧರಿಸಿದ್ದರು. ಸದನ ನಡೆಯುತ್ತಿರುವ ಮಧ್ಯೆ ಸಭೆ ನಡೆಸಲು ಮುಂದಾಗಿರುವ ಶಿವಕುಮಾರ್ ಕ್ರಮಕ್ಕೆ ಮೈಸೂರು ಭಾಗದ …

Read More »

ಮಾನ್ಯತೆ ನವೀಕರಣ ಗುಮ್ಮಕ್ಕೆ ಖಾಸಗಿ ಶಾಲೆ ತತ್ತರ!

ರಾಯಚೂರು: ಮಾನ್ಯತೆ ನವೀಕರಣಕ್ಕೆ ಸರ್ಕಾರ ಒಡ್ಡಿದ ಷರತ್ತುಗಳಿಂದ ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು ತತ್ತರಿಸಿವೆ. ಪ್ರತಿ ವರ್ಷಬೆಣ್ಣೆಯಲ್ಲಿ ಕೂದಲು ತೆಗೆದಷ್ಟು ಸುಲಭದಲ್ಲಿ ಕೆಲಸಮಾಡಿಕೊಳ್ಳುತ್ತಿದ್ದವರಿಗೆ ಈಗ ಕಬ್ಬಿಣದ ಕಡಲೆ ತಿನ್ನುವಂತಾಗಿದೆ.   ಸರ್ಕಾರ ಇಷ್ಟು ವರ್ಷ ಮಾನ್ಯತೆ ನವೀಕರಣ ಎನ್ನುವುದನ್ನು ಸಂಪ್ರದಾಯದಂತೆ ಮಾಡಿಕೊಂಡು ಬರುತ್ತಿತ್ತು. ಖಾಸಗಿ ಸಂಸ್ಥೆಗಳಿಗೆ ಅದೇನು ದೊಡ್ಡಕೆಲಸ ಎನ್ನುವಂತಿರಲಿಲ್ಲ. ಆದರೆ, ಈಗ ಸರ್ಕಾರ ಸುಮಾರು 62 ನಿಯಮ ಒಳಗೊಂಡ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಕೆಲವೊಂದು ನಿಯಮಗಳುಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ …

Read More »

ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗಕ್ಕೆ ಸಚಿವ ಸಂಪುಟದಿಂದ ಆಡಳಿತಾತ್ಮಕ ಅನುಮೋದನೆ

ಬೆಳಗಾವಿ: ಕಿತ್ತೂರು ಮೂಲಕ ಹಾದುಹೋಗುವ ಬೆಳಗಾವಿ-ಧಾರವಾಡ ನಡುವಿನ 73 ಕಿ.ಮೀ ಉದ್ದದ ಹೊಸ ರೈಲು ಮಾರ್ಗಕ್ಕೆ ಮಂಗಳವಾರ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. 927.4 ಕೋಟಿ ರೂ. ವೆಚ್ಚದ ಈ ಹೊಸ ರೈಲ್ವೆ ಯೋಜನೆಯು ಬೆಳಗಾವಿ ಮತ್ತು ಧಾರವಾಡ ನಡುವಿನ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಈ ಹೊಸ ರೈಲು ಮಾರ್ಗದಲ್ಲಿ ಐತಿಹಾಸಿಕ ಕಿತ್ತೂರು ಪಟ್ಟಣ ಸೇರಿದಂತೆ 11 ಹೊಸ ರೈಲು ನಿಲ್ದಾಣಗಳನ್ನು ಹೊಂದಿರುತ್ತದೆ. ಪ್ರಸ್ತುತ ಎರಡು ನಗರಗಳ …

Read More »

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಂತೃಪ್ತಿಗೊಳಿಸಲು ಎಂಇಎಸ್ ಪುಂಡರ ಪರ ಮಾತನಾಡುತ್ತಿದ್ದಾರೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಂತೃಪ್ತಿಗೊಳಿಸಲು ಎಂಇಎಸ್ ಪುಂಡರ ಪರ ಮಾತನಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದಿದ್ದಾರೆ. ಮಂಗಳವಾರ ಆನಗೋಳದಲ್ಲಿ ಭಗ್ನಗೊಂಡಿದ್ದ ರಾಯಣ್ಣ ಮೂರ್ತಿ ಮರುಸ್ಥಾಪನೆ ಮಾಡಿದ ಕನಕದಾಸ ಕಾಲೋನಿಗೆ ಭೇಟಿ ನೀಡಿ ಸಂಗೊಳ್ಳಿ ರಾಯಣ್ಣನವರ ಮೂರ್ತಿಗೆ ಸಚಿವ ಕೆ.ಎಸ್.ಈಶ್ವರಪ್ಪ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮುಕ್ಕಾಲು ಭಾಗ …

Read More »