ವಿಜಯನಗರ: ಹೂವಿನ ಹಡಗಲಿ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಸಹೋದರ ಮತ್ತು ಬಿಜೆಪಿ ಮುಖಂಡ ಪಿ.ಟಿ ಶಿವಾಜಿ ನಾಯ್ಕ್ ನಡುವೆ ಮತ್ತೆಗೂಂಡಾಗಿರಿ ಮುಂದುವರಿದಿದೆ ಎನ್ನಲಾಗಿದೆ. ನನ್ನ ಮೇಲೆಯೇ ಕೇಸ್ ಮಾಡ್ತೀಯಾ? ಎಂದು ಶಿವಾಜಿ ನಾಯ್ಕ್ ತನ್ನ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರಂತೆ. ಇಂದು ಬೆಳಿಗ್ಗೆಯೇ ಜೈಲಿನಿಂದ ಬೇಲ್ ಮೇಲೆ ಹೊರ ಬಂದ ಶಿವಾಜಿ ನಾಯ್ಕ್, ದೂರುದಾರರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹರಪನಹಳ್ಳಿ ತಾಲೂಕಿನ …
Read More »Monthly Archives: ಜುಲೈ 2021
ಕೆ-ಸೆಟ್ ಪರೀಕ್ಷೆ: ದಿನ ನಿಗದಿಗೆ ಪರದಾಟ
ಮೈಸೂರು: ಕೋವಿಡ್ ಕಾರಣ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯನ್ನು (ಕೆ-ಸೆಟ್) ಈಗಾಗಲೇ ಎರಡು ಬಾರಿ ಮುಂದೂಡಿರುವ ಮೈಸೂರು ವಿಶ್ವವಿದ್ಯಾಲಯವು ಹೊಸದಾಗಿ ದಿನಾಂಕ ನಿಗದಿ ಮಾಡಲು ಪರದಾಡುತ್ತಿದೆ. ಸುಮಾರು 85 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಮೂರು ತಿಂಗಳಾಗಿದ್ದು, ಪರೀಕ್ಷೆಯ ದಿನಾಂಕ ಪ್ರಕಟಣೆ ಆಗುವುದನ್ನೇ ಕಾಯುತ್ತಿದ್ದಾರೆ. ಈ ನಡುವೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿಗಾಗಿ ಸದ್ಯದಲ್ಲೇ ಅರ್ಜಿ ಆಹ್ವಾನಿಸುವ ಸೂಚನೆಯನ್ನು ರಾಜ್ಯ ಸರ್ಕಾರ …
Read More »2011ರ ಕೆಪಿಎಸ್ಸಿ ನೇಮಕಾತಿ ರದ್ದು: ಹಿಂಪಡೆಯಲು ಆಗ್ರಹ
ಬೆಂಗಳೂರು: 2011ರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನೇ ರದ್ದುಗೊಳಿಸಿ 2014ರ ಆಗಸ್ಟ್ 14ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆದು, ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿ ಆದೇಶ ವಿತರಿಸುವಂತೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಹಲವು ಸದಸ್ಯರು ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಪಿ.ಆರ್. ರಮೇಶ್, ಆಯನೂರು ಮಂಜುನಾಥ, ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ. …
Read More »ಭ್ರಷ್ಟಾಚಾರ ಆರೋಪಿಗಳಿಗೆ ರಾಜ್ಯಪಾಲರ ರಕ್ಷಣೆ: ವಿ.ಎಸ್. ಉಗ್ರಪ್ಪ
ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ವಿಚಾರಣೆಗೆ ಅನುಮತಿ ನಿರಾಕರಿಸುವ ಮೂಲಕ ರಾಜ್ಯಪಾಲ ವಜುಭಾಯಿ ವಾಲಾ ಅವರು ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಆರೋಪಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬಹುಮಹಡಿ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರನಿಂದ ಯಡಿಯೂರಪ್ಪ ಅವರ ಮಗ ಮತ್ತು ಮೊಮ್ಮಗ …
Read More »ಡಿವೋರ್ಸ್ ಘೋಷಿಸಿದ ನಟ ಅಮೀರ್ ಖಾನ್-ಕಿರಣ್ ರಾವ್ ದಂಪತಿ
ಮುಂಬೈ : ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕಿರಣ್ ರಾವ್ ದಾಂಪತ್ಯ ಜೀವನ ಮುರಿದು ಬಿದ್ದಿದ್ದು, 15 ವರ್ಷಗಳ ವಿವಾಹ ಬಂಧನಕ್ಕೆ ಗುಡ್ ಬೈ ಹೇಳಿದ್ದಾರೆ. ನಟ ಅಮೀರ್ ಖಾನ್ ಹಾಗು ಕಿರಣ್ ರಾವ್ ಪರಸ್ಪರ ಸಮ್ಮತಿ ಮೂಲಕ ಇಂದು ( ಜುಲೈ 03) ವಿಚ್ಛೇಧನ ಘೋಷಿಸಿದ್ದಾರೆ. ತಮ್ಮ ಡಿವೋರ್ಸ್ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿರುವ ಈ ದಂಪತಿ, ಪರಸ್ಪರ ಒಪ್ಪಿಗೆ ಮೂಲಕವೇ ದೂರವಾಗಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಇನ್ನು …
Read More »ದಾರಿತಪ್ಪಿ ಪಾಳುಬಾವಿಗೆ ಬಿದ್ದ 80 ವರ್ಷದ ವೃದ್ಧ: ಮೂರು ದಿನಗಳ ಬಳಿಕ ರಕ್ಷಣೆ ಮಾಡಿದ್ದೇ ರೋಚಕ!
ಸಿದ್ದಿಪೇಟೆ: ಜೂನ್ 29 ರಂದು 80 ವರ್ಷದ ನಾರಾಯಣ ಎಂಬುವರು ತೆಲಂಗಾಣದ ಸಿದ್ದಿಪೇಟೆ ಸಮೀಪದ ಗ್ರಾಮವೊಂದರಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಸಿದ್ದಿಪೇಟೆಗೆ ಹಿಂದಿರುಗುವಾಗ ದಾರಿತಪ್ಪಿದ ನಾರಾಯಣ ಜಮೀನಿನಲ್ಲಿದ್ದ ಪಾಳುಬಾವಿಗೆ ಆಕಸ್ಮಿಕವಾಗಿ ಬಿದ್ದು ಮೂರು ದಿನಗಳ ಬಳಿಕ ರಕ್ಷಣೆ ಒಳಗಾದ ಘಟನೆ ನಡೆದಿದೆ. ಬಾವಿಯಲ್ಲಿ ಬಿದ್ದಿದ್ದ ನಾರಾಯಣ ಮೂರು ದಿನಗಳ ಕಾಲ ನೆರವಿಗಾಗಿ ಕೂಗಾಡಿ, ಕಣ್ಣೀರಾಕಿದರು ಯಾರೊಬ್ಬರಿಗೂ ಅವರ ಸುಳಿವು ಸಿಗಲಿಲ್ಲ. ಮೂರು ದಿನಗಳ ಕಾಲವೂ ಊಟ ಇಲ್ಲದೆ ಹಿರಿಯ ಜೀವ ಸಾಕಷ್ಟು …
Read More »ಶಿವಮೊಗ್ಗ: ಸಿನಿಮೀಯ ಶೈಲಿಯಲ್ಲಿ ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ ಯುವಕರು
ಶಿವಮೊಗ್ಗ: ದರೋಡೆ ಮಾಡಿ ಓಡಿ ಹೋಗುತ್ತಿದ್ದವರನ್ನು ಬೆನ್ನಟ್ಟಿದ ಯುವಕರನ್ನು ಅವರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಿನಿಮೀಯ ಶೈಲಿಯ ಘಟನೆ ನಗರದ ಕುವೆಂಪು ನಗರದಲ್ಲಿ ನಡೆದಿದೆ. ಶಿವಮೊಗ್ಗದ ಕುವೆಂಪು ರಸ್ತೆಯ ನಂದಿ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು, ಬೈಕ್ ನಲ್ಲಿ ಚೇಸ್ ಮಾಡಿದ ಯುವಕರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಡಹಗಲೇ ದರೋಡೆಗೆ ಇಳಿದ ಇಬ್ಬರು ಖದೀಮರು ಸ್ಮಾರ್ಟ್ ಸಿಟಿ ಕಾಮಗಾರಿ ಮಾಡುತ್ತಿದ್ದವರಿಂದ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು. ಅಷ್ಟೇ ಅಲ್ಲದೆ …
Read More »ಪಕ್ಷ ಬಿಟ್ಟು ಹೋದವರು ಬೇಕಾದರೆ ಮತ್ತೆ ಪಕ್ಷ ಸೇರಲು ಅರ್ಜಿ ಹಾಕಬಹುದು: ಡಿ ಕೆ ಶಿವಕುಮಾರ್
ಬೆಂಗಳೂರು: ಕಾಂಗ್ರೆಸ್ ಪಕ್ಷ, ಸಿದ್ಧಾಂತ, ನಾಯಕತ್ವ, ಕೆಲಸದ ಮೇಲೆ ನಂಬಿಕೆ ಇದೆಯೋ ಅಂತಹ ಯಾರೂ ಬೇಕಾದರೂ ಕಾಂಗ್ರೆಸ್ ಪಕ್ಷ ಸೇರಿಕೊಳ್ಳಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆ ಕುರಿತು ಆಪರೇಷನ್ ಕಮಲ ಕಾರ್ಯಾಚರಣೆಯಡಿ ಬಿಜೆಪಿಗೆ ಹೋದವರು ನಮ್ಮನ್ನು ಸಂಪರ್ಕಿಸಿಲ್ಲ. ಆದರೆ ಅವರೂ ಸೇರಿದಂತೆ ಯಾರು ಬೇಕಾದರೂ ಕಾಂಗ್ರೆಸ್ ಸೇರ್ಪಡೆಗೆ ಅರ್ಜಿ ಹಾಕಬಹುದು. ಸ್ಥಳೀಯ ನಾಯಕರು ಒಪ್ಪಿದರೆ ಅವರನ್ನು ಸೇರಿಸಿಕೊಳ್ಳಲಾಗುವುದು ಎಂದರು. ಯಾರು …
Read More »ಭಾರತೀಯ ಕ್ರೈಸ್ತ ದಿನಾಚರಣೆಯ ನಿಮಿತ್ಯ ವಾಗಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ.
ಗೋಕಾಕ ಭಾರತೀಯ ಕ್ರೈಸ್ತ ದಿನಾಚರಣೆಯ ನಿಮಿತ್ಯ ವಾಗಿ ಗೋಕಾಕ ನ ಗರದಲ್ಲಿ ಇಂದು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಲಾಯಿತು . ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರು ಸತೀಶ ಜಾರಕಿಹೊಳಿ ವಹಿಸಿದರು ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಆಂಟಿನ ಕಾಯ೯ಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಮತ್ತು ಡಾಕ್ಟರ್ ಬಿ.ಹೆಚ್ ಬಾಗಲಕೋಟ ಹಾಗೂ ದಲಿತ ಮುಖಂಡರಾದ ಸತ್ಯಪ್ಪ ಕರವಾಡಿ ಹಾಜರಿದ್ದರು ಪ್ರಾಸ್ತಾವಿಕವಾಗಿ ಪಾಸ್ಟರ ವಾಯ್.ಆರ್ .ಕರಬನ್ನವರ …
Read More »ನೌಕರಿ ತೊರೆದು ಸಾವಯವ ರೈತರಾದ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ
ಹುಬ್ಬಳ್ಳಿ: ಸಾವಯವ ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಪತ್ನಿಯ ಉತ್ಸಾಹದಿಂದ ಪ್ರೇರಣೆ ಪಡೆದ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರೊಬ್ಬರು ಸಾವ ಯವ ಕೃಷಿಕರಾಗಿ ಯಶಸ್ವಿ ಹೆಜ್ಜೆಗಳನ್ನಿರಿಸಿದ್ದಾರೆ. ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಇನ್ನಿತರ ಉತ್ಪನ್ನಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಇಲ್ಲಿನ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ, ಗದುಗಿನ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ| ಪ್ರಕಾಶ ಹುಬ್ಬಳ್ಳಿ ಅವರು ಹುದ್ದೆ ತೊರೆದು ಕೃಷಿಯಲ್ಲಿ ತೊಡಗಿ ಸಾವಯವ ಕೃಷಿಯ …
Read More »