ಮೂಡಲಗಿ: ಕೊರೊನಾ ವೈರಸ್ ತಡೆಗೆ ಕೇಂದ್ರ, ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ. ಇದರ ನಡುವೆ ಕೆಲವು ಕಿಡಿಗೇಡಿಗಳು ಪೆಟ್ರೋಲ್ ಬಂಕ್ ಬಂದ್ ಆಗಲಿವೆ ಎಂದು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಹೌದು ಮೂಡಲಗಿ ತಾಲೂಕಾದ್ಯಂತ ಪೆಟ್ರೋಲ್ ಬಂಕ್ ಗಳು ಬಂದಿದೆ ಎಂದು ಮಂಗಳವಾರ ಸುಳ್ಳು ವದಂತಿ ಹಬ್ಬಿಸಿರುವ ಹಿನ್ನೆಲೆ ಬುಧವಾರ ಗುರ್ಲಾಪುರ ಹಾಗೂ ಮೂಡಲಗಿ ಪೆಟ್ರೋಲ್ ಬಂಕ್ ಗಳಲ್ಲಿ ಜನರು ಪೆಟ್ರೋಲ್, ಡಿಸೈಲ್ ಗಾಗಿ ಕ್ಯಾನ್ ಗಳನ್ನು ತಗೆದುಕಂಡು ಬಂದು …
Read More »Yearly Archives: 2020
ಜನರೊಂದಿಗೆ ಪೊಲೀಸರುಸೌಜನ್ಯದಿಂದ ವರ್ತಿಸಬೇಕು: ವಾಟಾಳ್ ನಾಗರಾಜ
ಬೆಂಗಳೂರು: ಜನರೊಂದಿಗೆ ಪೊಲೀಸರು ಸೌಜನ್ಯದಿಂದ ವರ್ತಿಸಬೇಕು. ಲಾಠಿ ಚಾರ್ಜ್ ಮಾಡಬಾರದು ಅಂತಾ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ. ಜನರ ಮೇಲೆ ಲಾಠಿ ಚಾರ್ಜ್ ವಿಚಾರವಾಗಿ ಮಾತನಾಡಿದ ಅವರು, ಜನರಿಗೆ ಆಹಾರ ಧಾನ್ಯ, ದಿನಸಿ ಸುಲಭವಾಗಿ ಸಿಗುವಂತೆ ವ್ಯವಸ್ಥೆಯನ್ನು ಮಾಡಬೇಕು. ಬೀದಿ ಬದಿ ವ್ಯಾಪರ ಮಾಡುವವರಿಗೆ, ಅಟೋ ರಿಕ್ಷಾ ಎಲ್ಲ ಕಾರ್ಮಿಕ ವರ್ಗಕ್ಕೆ ಸರ್ಕಾರ ಹಣ ಸಂದಾಯ ಮಾಡಬೇಕು. ಗಾರ್ಮೆಂಟ್ಸ್ ಕೆಲಸಗಾರರಿಗೆ ಕನಿಷ್ಟ ಎರಡು ತಿಂಗಳು ಹಣ ಸಂದಾಯ …
Read More »ಮನೆ ಮನೆಗೆ ಅಗತ್ಯವಸ್ತುಗಳ ಪೂರೈಕೆ ತಲುಪಿಸುವ ಯೋಜನೆ ಆರಂಭಿಸಲಾಗುವುದು: ಅಭಯ ಪಾಟೀಲ್
ಬೆಳಗಾವಿ: ಕೊರೊನಾ ಸೋಂಕು ತಡೆಗಟ್ಟಲು ಸಲುವಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ನಗರ ಜನತೆಗೆ ಅಗತ್ಯ ಸಾಮಗ್ರಿಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆ ಆರಂಭಿಸಲಾಗುವುದು ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಹೇಳಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು, ಜನರು ಅನಗತ್ಯವಾಗಿ ಹೊರಗೆ ಬರುವುದನ್ನು ತಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಸಂಬಂಧಪಟ್ಟ ವ್ಯಾಪಾರಿಗಳು ಮತ್ತು ಜಿಲ್ಲಾಧಿಕಾರಿ, ಆಹಾರ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಚರ್ಚೆ ಮಾಡಲಾಗಿದೆ. ಮನೆ …
Read More »ಲಾಕ್ ಡೌನ್ ಹಿನ್ನೆಲೆ ಅನವಶ್ಯಕವಾಗಿ ಮನೆಯಿಂದ ಯಾರು ಹೊರಗೆ ಬರಬೇಡಿ ಅಂತಾ ಬೆಳಗಾವಿ ಜನತೆಗೆ ಶಾಸಕ ಅನಿಲ್ ಬೆನಕೆ ಮನವಿ
ಬೆಳಗಾವಿ: ಲಾಕ್ ಡೌನ್ ಹಿನ್ನೆಲೆ ಅನವಶ್ಯಕವಾಗಿ ಮನೆಯಿಂದ ಯಾರು ಹೊರಗೆ ಬರಬೇಡಿ ಅಂತಾ ಬೆಳಗಾವಿ ಜನತೆಗೆ ಶಾಸಕ ಅನಿಲ್ ಬೆನಕೆ ಮನವಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ತಡೆಗಟ್ಟಲು ಪ್ರತಿಯೊಬ್ಬರು ಸಹಕರಿಸಬೇಕು. ಅಗತ್ಯ ಸಾಮಗ್ರಿಗಳ ಅವಶ್ಯಕತೆ ಇದ್ದಾಗ ಮನೆಯ ಒಬ್ಬ ಸದಸ್ಯರು ಮಾತ್ರ ಬಂದು ತಗೆದುಕೊಂಡು ಹೋಗಬೇಕು. ಅಗತ್ಯ ಸಾಮಗ್ರಿಗಳ ಪೂರೈಕೆ ವಿಚಾರವಾಗಿ ಜಿಲ್ಲಾಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಪ್ರತಿಯೊಬ್ಬರು ಲಾಕ್ ಡೌನ್ ಗೆ ಸ್ಪಂದಿಸಬೇಕು …
Read More »ವಿಶ್ವಾದಾದ್ಯಂತ ಕೊರೊನಾ ವೈರಸ್ ವ್ಯಾಪಿಸಿದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.: ಎಸ್ಪಿ ಲಕ್ಷ್ಮಣ ನಿಂಬರಗಿ
ಬೆಳಗಾವಿ: ವಿಶ್ವಾದಾದ್ಯಂತ ಕೊರೊನಾ ವೈರಸ್ ವ್ಯಾಪಿಸಿದೆ. ಜನರು ಸಹ ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸರ್ಕಾರದ ನಿಯಮಾನುಸಾರವಾಗಿ ನಡೆದರೆ ಹರಡುವಿಕೆಯನ್ನು ತಡೆಯಬಹುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ಇಂದು ಕಚೇರಿಯಲ್ಲಿ ವಿಡಿಯೋದರಲ್ಲಿ ಮಾತನಾಡಿದ ಅವರು, ಎಲ್ಲ ದೇಶಗಳಲ್ಲಿ ಕೊರೊನಾ ವ್ಯಾಪಿಸಿಕೊಂಡಿದೆ. ಗುಂಪು ಗುಂಪು ತಿರುಗಾಡುವುದು, ರೈಲು ಸಂಚಾರ ತಿರುಗಾಡುವುದರಿಂದ ಹರಡುವಿಕೆಯನ್ನು ತಡೆಯಬಹುದು. ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದೆ ಆದಲ್ಲಿ ಹತೋಟೆಗೆ ತರಬಹುದಾಗಿದೆ ಎಂದರು. ಸರ್ಕಾರ, ಪೊಲೀಸ್ …
Read More »ನಗರ ಮತ್ತು ಜಿಲ್ಲೆಯ ವಿವಿಧೆಡೆ ದಿನಸಿ ಅಂಗಡಿ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ನಿರ್ದಿಷ್ಟ ಅಂತರದ ಗುರುತು(ಮಾರ್ಕ್) ಮಾಡಲಾಗುತ್ತಿದೆ.
ಬೆಳಗಾವಿ: ನಗರ ಮತ್ತು ಜಿಲ್ಲೆಯ ವಿವಿಧೆಡೆ ದಿನಸಿ ಅಂಗಡಿ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ನಿರ್ದಿಷ್ಟ ಅಂತರದ ಗುರುತು(ಮಾರ್ಕ್) ಮಾಡಲಾಗುತ್ತಿದೆ. ಸಾಮಗ್ರಿಗಳನ್ನು ಖರೀದಿಸಲು ಆಗಮಿಸುವ ಗ್ರಾಹಕರು ಪರಸ್ಪರ ಅಂತರ ಕಾಯ್ದುಕೊಳ್ಳಲು ಇದರಿಂದ ಅನುಕೂಲವಾಗಲಿದೆ. ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್.ಅವರ ನೇತ್ರತ್ವದಲ್ಲಿ ಮಾರ್ಕಿಂಗ್ ಕೆಲಸ ನಡೆದಿದೆ. ಕೃಷ್ಣದೇವರಾಯ ಸರ್ಕಲ್ ಬಳಿ ಇರುವ ಮೋರ್, ರಾಮದೇವ ಹೊಟೇಲ್ ಬಳಿ ಇರುವ ರಿಲಾಯನ್ಸ್ ಮಾಲ್ ಸೇರಿದಂತೆ …
Read More »ಕ್ವಾರಂಟೈನ್ ಇರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಕಂಡು ಬಂದರೆ ತಕ್ಷಣ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು
ಬೆಳಗಾವಿ: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ಇರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಕಂಡು ಬಂದರೆ ತಕ್ಷಣ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲೆಯ ಎಲ್ಲ ತಾಲ್ಲೂಕಗಳ ಅಧಿಕಾರಿಗಳ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಕ್ವಾರಂಟೈನ್ ಒಳಪಟ್ಟಿರುವ ವ್ಯಕ್ತಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅದೇ ರೀತಿ ಸ್ಟ್ಯಾಂಪಿಂಗ್ ಎಲ್ಲರಿಗೂ ಆಗಿಲ್ಲ …
Read More »ಕೂಡ್ಲಿಗಿ ತಾಂಡಾಗಳಲ್ಲಿ ಜಾಗೃತಿ:ಕೊರೋನಾ ಭಯ ಬಿಡಿ,ಮುಂಜಾಗೃತ ಕ್ರಮಗಳನ್ನು ಪಾಲಿಸಿ-ಸ್ವರೂಪಾನಂದ
ಕೂಡ್ಲಿಗಿ ತಾಂಡಾಗಳಲ್ಲಿ ಜಾಗೃತಿ:ಕೊರೋನಾ ಭಯ ಬಿಡಿ,ಮುಂಜಾಗೃತ ಕ್ರಮಗಳನ್ನು ಪಾಲಿಸಿ-ಸ್ವರೂಪಾನಂದ ಎಮ್.<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಿ.ಬಿ.ತಾಂಡಾ ಹಾಗು ದೂಪದಳ್ಳಿ ತಾಂಡಾಗಳಲ್ಲಿ ಜನತೆಗೆ ಆರೋಗ್ಯ ಇಲಾಖೆ.ಪೊಲೀಸ್ ಇಲಾಖೆ ಸಹಯೋಗದೊಂದಿಗೆ ತಾಲೂಕು ಆಡಳಿತ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಯಿತು. ಕೊರೋನಾ ಕುರಿತು ಬರಹಗಾರ ಹಾಗು ಪೊಲೀಸ್ ಪೇದೆ ಸ್ವರೂಪನಂದ ಎಮ್.ಕೊಟ್ಟೂರು ಮಾತನಾಡಿದರು.ರೋಗದ ಬಗ್ಗೆ ಅನಗತ್ಯ ಆತಂಕ ಭಯ ಪಡಬಾರದು.ಅಗತ್ಯ ಮುಂಜಾಗೃತ ಕ್ರಮಗಳನ್ನು ಎಲ್ಲರೂ ಪಾಲಿಸಲೇಬೇಕು ಅಂದಾಗ ರೋಗದ ವಿರುದ್ಧ ಜಯ ಸಾಧಿಸಲು …
Read More »ಚಿತ್ರದುರ್ಗ ಜಿಲ್ಲೆಯಲ್ಲಿ ಓರ್ವರಿಗೆ ಕೋವಿಡ್-19 ಸೊಂಕು , ಭೀಮಸಮುದ್ರ ಸುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟೆಚ್ಚರ : ವಿನೋತ್ ಪ್ರಿಯಾ
ಚಿತ್ರದುರ್ಗ, (ಮಾ. 24) : ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದಲ್ಲಿ ಓರ್ವ ಮಹಿಳೆಗೆ ಕೋವಿಡ್-19 ಸೋಂಕು ತಾತ್ಕಾಲಿಕ ಪಾಸಿಟಿವ್ ಆಗಿದೆ ಎಂಬುದಾಗಿ ವರದಿ ಬಂದಿದ್ದು, ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಭೀಮಸಮುದ್ರದ 5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಬಫರ್ ಜೋನ್ ಎಂದು ಗುರುತಿಸಿ, ಈ ವ್ಯಾಪ್ತಿಯಲ್ಲಿ ಸೋಂಕು ಹರಡದಂತೆ ಸಂಪೂರ್ಣ ಕಟ್ಟೆಚ್ಚರ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಸ್ಥಿತಿಗತಿ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ …
Read More »2 ರೂ.ಗೆ ಗೋಧಿ, 3 ರೂ.ಗೆ ಅಕ್ಕಿ, 80 ಕೋಟಿ ಜನರಿಗೆ ಪಡಿತರ – ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವ ನಿರ್ಣಯ
ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಭಾರತ ಬಂದ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರ್ಧಾರ ಸರಿಯಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇಡ್ಕರ್ ಪ್ರತಿಕ್ರಿಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ದೇಶದ ಹಿತ ದೃಷ್ಟಿಯಿಂದ ಈ ನಿರ್ಧಾರ ಸರಿಯಾಗಿದೆ. ಅಲ್ಲದೇ ಸಾಮಾಜಿಕ ಸಂಪರ್ಕದಿಂದ ಅಂತರ ಕಾಯ್ದುಕೊಳ್ಳುವುದು ಅತಿ ಮುಖ್ಯ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ …
Read More »