ಹಲವು ಪತ್ರಕರ್ತರಿಗೆ ಕೊರೊನಾ ವೈರಸ್: ಆರೋಗ್ಯ ಇಲಾಖೆ ಸಲಹೆ ಹೀಗಿದೆ.. ಹಲವು ಮಾಧ್ಯಮ ಸಿಬ್ಬಂದಿಗೆ ಕೊರೊನಾ ವೈರಸ್ ಬಂದಿದ್ದು, ಈ ಹಿನ್ನೆಲೆ ಆರೋಗ್ಯ ಸಚಿವಾಲಯವು ಪತ್ರಕರ್ತರಿಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಕೋವಿಡ್ 19 ಹರಡುವುದನ್ನು ತಡೆಯಲು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಲಹೆ ನೀಡಿದ್ದಾರೆ. ಹಲವು ಪತ್ರಕರ್ತರು ಕೋವಿಡ್ – 19 ಸೋಂಕು ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವುದು ಬಹಳ ದುರದೃಷ್ಟಕರ ಸುದ್ದಿ. ಪತ್ರಕರ್ತರು ಕರ್ತವ್ಯ ಮಾಡುತ್ತಿರುವಾಗ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಸಾಮಾಜಿಕ ಅಂತರವನ್ನು …
Read More »Yearly Archives: 2020
ಸಿಎಂ ಕಾರ್ಯವೈಖರಿಗೆ ಕೆಲ ಸಚಿವರಿಂದ ಅಸಮಾಧಾನ
ಬೆಂಗಳೂರು: ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಬಿಎಸ್‍ವೈ ಕಾರ್ಯವೈಖರಿ ಬಗ್ಗೆ ಕೆಲ ಸಚಿವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಾಠಿ ಕೈಗೆತ್ತಿಕೊಳ್ಳಬೇಡಿ ಎಂದು ಪೊಲೀಸರಿಗೆ ಸೂಚಿಸಿದ್ದು ತಪ್ಪು. ಅವತ್ತು ಆಶಾ ಕಾರ್ಯಕರ್ತೆ ಮೇಲೆ ದಾಳಿ ನಡೆದಾಗಲೇ ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದು ಕೆಲ ಸಚಿವರು ಅಸಮಾಧನ ತೋರ್ಪಡಿಸಿದ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಕೊರೊನಾ ಲಾಕ್‍ಡೌನ್ ವಿಚಾರದಲ್ಲಿ ಮೃದು ಧೋರಣೆ ಬೇಡ. ಇನ್ನೇನಿದ್ದರೂ ದಂಡಂ ದಶಗುಣಂ ಇರಬೇಕು ಎಂದು …
Read More »ಪಾದರಾಯನಪುರದ ಪುಂಡರು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್
ರಾಮನಗರ: ಪಾದರಾಯನಪುರ ಗಲಾಟೆ ಪ್ರಕರಣ ಸಂಬಂಧ ಬಂಧಿಸಲಾಗಿದ್ದ 54 ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ರವಾನೆ ಮಾಡಲು ಆದೇಶಿಸಲಾಗಿದೆ. ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಆರೋಪಿಗಳನ್ನು ಪರಪ್ಪನ ಅಗ್ರಹಾರದಿಂದ ಶಿಫ್ಟ್ ಮಾಡಲು ಕಾರಾಗೃಹ ಡಿಜಿಪಿ ಅಲೋಕ್ ಮೋಹನ್ ಆದೇಶಿಸಿದ್ದಾರೆ. ಹಾಗೆಯೇ ರಾಮನಗರ ಜೈಲಿನಲ್ಲಿರುವ 177 ಮಂದಿ ಖೈದಿಗಳು, ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡುವಂತೆ ಕೂಡಾ ಆದೇಶದಲ್ಲಿ ತಿಳಿಸಲಾಗಿದೆ. ಕೊರೊನಾ ಗ್ರೀನ್ ಜೋನ್‍ನಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಇಲ್ಲಿಯ ತನಕ ಯಾವುದೇ …
Read More »ಸೈಕಲ್‍ಗಾಗಿ ಕೂಡಿಟ್ಟ ಹಣವನ್ನು ಸಿಎಂ ಕೊರೊನಾ ನಿಧಿಗೆ ಕೊಟ್ಟ ಬಾಲಕಿ
ಚಿಕ್ಕಮಗಳೂರು: ಅಪ್ಪ-ಅಮ್ಮ ಕೊಟ್ಟ ಹಣವನ್ನು ಸೈಕಲ್ ತೆಗೆದುಕೊಳ್ಳಲು ಕೂಡಿಟ್ಟಿದ್ದ ಐದನೇ ತರಗತಿ ವಿದ್ಯಾರ್ಥಿನಿಯೋರ್ವಳು ಆ ಹಣವನ್ನ ಸಿಎಂ ಕೊರೊನಾ ನಿಧಿಗೆ ನೀಡಿದ್ದಾರೆ. ನಗರದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ವಾಸವಿರುವ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರದೀಪ್ ಹಾಗೂ ಸುಮಿತ್ರ ಪುತ್ರಿ ಪ್ರಣತಿ ತನ್ನ ಹುಂಡಿಯ ಐದು ಸಾವಿರ ಹಣವನ್ನು ಕೊರೊನಾ ನಿಧಿಗೆ ನೀಡಿದ್ದಾರೆ. ಆರಂಭದಲ್ಲಿ ಈ ಹಣವನ್ನು ಪಿಎಂ ನಿಧಿಗೆ ನೀಡಬೇಕೆಂದು ಬಾಲಕಿಯ ಆಸೆ ಇತ್ತು. ಆದರೆ ಪಿಎಂ …
Read More »ಪಾದರಾಯನಪುರವೇನು ಜಮೀರ್ ಅಜ್ಜನಾ ಆಸ್ತಿನಾ: ಪ್ರಮೋದ್ ಮುತಾಲಿಕ್ ಕಿಡಿ
ಧಾರವಾಡ: ಪಾದರಾಯನಪುರವೇನು ಜಮೀರ್ ಅಜ್ಜನಾ ಆಸ್ತಿನಾ? ಶಾಸಕರಾದ ತಕ್ಷಣ ಪಾಳೆಗಾರಿಕೇನಾ? ಶಾಸಕ ಜಮೀರ್ ಅಹ್ಮದ್ ಚಾಮರಾಜ್ ಪೇಟೆಯ ಶಾಸಕ ಅಷ್ಟೇ, ಚಾಮರಾಜ್ ಕೋಟೆಯ ಶಾಸಕ ಅಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಪಾದರಾಯನಪುರದಂತ ಘಟನೆಗಳು ಪದೇ ಪದೇ ನಡೆದಿರುವುದು ಖಂಡನೀಯ. ಇದರ ಹಿಂದೆ ಒಂದು ಕೈವಾಡವಿದೆ ಎಂದು ಸಂಶಯ ವ್ಯಕ್ತಪಡಿಸಿದರು. ಪಾದರಾಯನಪುರ ಪಾಕಿಸ್ತಾನದಲ್ಲಿ ಇಲ್ಲ, ನಮ್ಮ ದೇಶದಲ್ಲೇ ಇದೆ. …
Read More »ಕನ್ನಡ ಸೇನೆ ವತಿಯಿಂದ ಕರ್ತವ್ಯ ನಿರತ ಪೋಲಿಸ,ಪಂಚಾಯತ, ಆರೋಗ್ಯ ಇಲಾಖೆ, ಮತ್ತು ಆಶಾ ಕಾರ್ಯಕರ್ತೆಯರಿಗೆ ಅಲ್ಪೋಪಹಾರ ವ್ಯವಸ್ಥೆ
ಗೋಕಾಕ ತಾಲೂಕಿನ ಮಲ್ಲಾಪೂರ ಪಿಜಿ ಹಾಗೂ ದುಪದಾಳ ಗ್ರಾಮದಲ್ಲಿ ಕನ್ನಡ ಸೇನೆ ವತಿಯಿಂದ ಕರ್ತವ್ಯ ನಿರತ ಪೋಲಿಸ,ಪಂಚಾಯತ, ಆರೋಗ್ಯ ಇಲಾಖೆ, ಮತ್ತು ಆಶಾ ಕಾರ್ಯಕರ್ತೆಯರಿಗೆ ಅಲ್ಪೋಪಹಾರ ವ್ಯವಸ್ಥೆ ದೇಶಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೋನಾವನ್ನು ನಿಯಂತ್ರಿಸುವ. ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೋಲಿಸ,ಪಂಚಾಯತ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು,ಪೌರಕಾರ್ಮಿಕರಿಗೆ ಕನ್ನಡ ಸೇನೆ ಸಂಘಟನೆಯ ವತಿಯಿಂದ ಮುಂಜಾನೆಯ ಅಲ್ಪೋಪಹಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ರಾಘವೇಂದ್ರ ಪತ್ತಾರ. ಗೋಕಾಕ ತಾಲೂಕಾಧ್ಯಕ್ಷರಾದ. ಅಪ್ಪಾಸಾಬ ಮುಲ್ಲಾ. …
Read More »:ರೋಟರಿ ಸಂಸ್ಥೆಯ ಸದಸ್ಯರಾದ ರೋ. ಪ್ರಕಾಶ ಗಂಗಾಧರ ವರದಾಯಿ ಅವರ ವೈವಾಹಿಕ ವಾರ್ಷಿಕೋತ್ಸವದ ಅಂಗವಾಗಿ ಕೊರೋನಾ ತಡೆಗಟ್ಟುವ ಕಾಯಕದಲ್ಲಿ ನಿರತರಾದವರಿಗೆ ಮಧ್ಯಾಹ್ನ ಊಟ ನೀಡಲಾಯಿತು
ಗೋಕಾಕ:ರೋಟರಿ ಸಂಸ್ಥೆಯ ಸದಸ್ಯರಾದ ರೋ. ಪ್ರಕಾಶ ಗಂಗಾಧರ ವರದಾಯಿ ಅವರ ವೈವಾಹಿಕ ವಾರ್ಷಿಕೋತ್ಸವದ ಅಂಗವಾಗಿ ಕೊರೋನಾ ತಡೆಗಟ್ಟುವ ಕಾಯಕದಲ್ಲಿ ನಿರತರಾದ ಪೊಲೀಸ, ನಗರಸಭೆ, ಅಗ್ನಶಾಮಕದಳ, ಕೆ. ಎಸ್. ಅರ್. ಟಿ. ಸಿ. ಸಿಬ್ಬಂದಿಗಳಿಗೆ ಮಧ್ಯಾನ್ಹದ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ರೋ. ಪ್ರಕಾಶ ವರದಾಯಿ,ರೋ. ಗಣೇಶ ವರದಾಯಿ, ರೋ. ಸತೀಶ ಬೆಳಗಾವಿ, ರೋ. ಸುರೇಶ ರಾಠೋಡ, ರೋ. ಕೆಂಚಪ್ಪ ಭರಮಣ್ಣವ ರ, ರೋ. ಬಸವರಾಜ ಗಂಜಿ, ಸಂತೋಷ ಹುಂಡೇಕಾರ, …
Read More »ಲಾಕ್ ಡೌನ್ ಹಿನ್ನೆಲೆ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳು ನೀಡುತ್ತಿರುವ ನಟ ಪ್ರಥಮ್ : ಸಾಥ್ ನೀಡಿದ ಸರ್ವೋತ್ತಮ ಜಾರಕಿಹೊಳಿ, ಸನತ್ ಜಾರಕಿಹೊಳಿ
ಲಾಕ್ ಡೌನ್ ಹಿನ್ನೆಲೆ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳು ನೀಡುತ್ತಿರುವ ನಟ ಪ್ರಥಮ್ : ಸಾಥ್ ನೀಡಿದ ಸರ್ವೋತ್ತಮ ಜಾರಕಿಹೊಳಿ, ಸನತ್ ಜಾರಕಿಹೊಳಿ ಬೆಳಗಾವಿ: ಲಾಕ್ ಡೌನ್ ಹಿನ್ನೆಲೆ ಬಡ ಜನರು ಆಹಾರಕ್ಕೆ ಪರದಾಡುವಂತ ಪರಿಸ್ಥಿತಿ ನಿರ್ಮಾಣ ವಾಗಿದೆ. ಅಂತಹ ಬಡ ಕುಟುಂಬಕ್ಕೆ ನಟ, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ದಿನಸಿ ವಸ್ತುಗಳನ್ನು ನೀಡುತ್ತಿದ್ದಾರೆ. ಇವರ ತಂಡಕ್ಕೆ ಭೀಮಶಿ ಜಾರಕಿಹೊಳಿ ಪುತ್ರ ಸರ್ವೋತ್ತಮ ಜಾರಕಿಹೊಳಿ ಅವರು ಸಾಥ್ ನೀಡಿದ್ದಾರೆ. ಪ್ರಥಮ್ …
Read More »ಸಕಲೇಶಪುರ:ನಡುರಸ್ತೆಯಲ್ಲಿ ಕಾಡಾನೆಗಳ ಕಿತ್ತಾಟ..!
ಸಕಲೇಶಪುರ: ಕಾಡಾನೆಗಳ ಗುಂಪಿನ ಹಿಡಿತ ಸಾಧಿಸಲು ಎರಡು ಕಾಡಾನೆಗಳು ತೀವ್ರವಾಗಿ ಗುದ್ದಾಟ ನಡೆಸಿದ ಘಟನೆ ನಡೆದಿದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇಷ್ಟು ದಿನಗಳು ರೈತರ ಬೆಳೆಗಳು ಹಾಗೂ ಮನುಷ್ಯರ ಮೇಲೆ ಎರಗುತ್ತಿದ್ದ ಕಾಡಾನೆಗಳು, ಇದೀಗ ಕಾಡಾನೆಗಳ ಜಿದ್ದಾಜಿದ್ದಿಗೆ ಬಿದ್ದಿವೆ. ತಾಲೂಕಿನ ಇಬ್ಬಡಿ ಸುಳ್ಳಕ್ಕಿ ಗ್ರಾಮದ ರಸ್ತೆಯಲ್ಲಿ ಎರಡು ಸಲಗಗಳು ಒಂದಕ್ಕೊಂದು ತನ್ನ ಕೋರೆಗಳಿಂದ ತಿವಿದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಹಿರಿಯ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ …
Read More »ಲಾಕ್ ಡೌನ್ ಉಲ್ಲಂಘಿಸಿದವರಿಗೆ ಬಸ್ಕಿ ಶಿಕ್ಷೆ
ಹಾಸನ ; ಲಾಕ್ ಡೌನ್ ಸಂಬಂಧ ಸರಕಾರ ಹಾಗೂ ಪೊಲೀಸ್ ಇಲಾಖೆ ಎಷ್ಟೇ ಕಠಿಣ ಕ್ರಮ ಕೈಗೊಂಡರು ಪುಂಡ ಯುವಕರು ಪ್ರತಿದಿನ ರಸ್ತೆಗಿಳಿಯುವುದು ಸಾಮಾನ್ಯವಾಗಿದೆ. ಇವರಿಗೆ ಇಂದು ವಿಶೇಷ ರೀತಿಯಲ್ಲಿ ಹಾಸನ ನಗರದ ಪೊಲೀಸರು ಶಿಕ್ಷೆ ವಿಧಿಸಿದರು. ನಗರದ ಡೈರಿ ವೃತ್ತದಲ್ಲಿ ಯಾವುದೇ ಪಾಸ್ ಹಾಗೂ ಅನುಮತಿ ಇಲ್ಲದೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಯುವ ಸವಾರರಿಗೆ ಬಸ್ಕಿ ಹೊಡೆಸಿದ ಪೊಲೀಸರು ದಂಡ ವಿಧಿಸಿ ವಾಹನ ವಶಕ್ಕೆ ಪಡೆದು ಮನೆಗೆ ಕಳುಹಿಸಿದ್ದಾರೆ. ಹಾಸನ …
Read More »