ಬೆಂಗಳೂರು, ಜೂ.17- ಒಡಹುಟ್ಟಿದ ಇಬ್ಬರು ಸಹೋದರರನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ತಮ್ಮನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಬಂಧಿತ ಕೊಲೆ ಪ್ರಕರಣದ ಆರೋಪಿ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಎಸ್. ಅವರು ಈ ಸಂಜೆಗೆ ತಿಳಿಸಿದ್ದಾರೆ. ಈತ ತನ್ನ ಅಣ್ಣಂದಿರಾದ ಸಹದೇವ ಮತ್ತು ದಂಡಪಾಣಿ ಎಂಬುವರ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದನು. ಈ ಬಗ್ಗೆ ಪ್ರಕರಣ …
Read More »Monthly Archives: ಜೂನ್ 2020
ವಿಶ್ವದಾದ್ಯಂತ ಕ್ರೂರಿ ಕೊರೋನಾಗೆ 4.47 ಲಕ್ಷ ಬಲಿ, 82.65 ಲಕ್ಷ ಮಂದಿಯಲ್ಲಿ ಸೋಂಕು…………..
ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜೂ.17- ಜಗವೇ ಒಗ್ಗೂಡಿದ್ದರೂ ಜಗ್ಗದಜಗಮೊಂಡ ಕೋಡ್-19 ವೈರಸ್ ಹಾವಳಿ ಮುಂದುವರಿದಿದೆ. ನಾಶಕಾರಿ ಮಹಾಮಾರಿ ದಾಳಿಯಿಂದ ವಿಶ್ವಕಂಗಾಲಾಗಿದ್ದು, ಸಾವಿನ ಸಂಖ್ಯೆ 4.47ಲಕ್ಷಹಾಗೂ ಸೋಂಕಿತರ ಸಂಖ್ಯೆ82.65 ಲಕ್ಷಮೀರಿದೆ. ಇದರ ನಡುವೆಯೂ ವಿಶ್ವದಲ್ಲಿ ಸುಮಾರು 43.21 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ. ಡೆಡ್ಲಿಕೊರೊನಾ ಹಾವಳಿಯಿಂದ ಜಗತ್ತಿನ ನಾನಾ ದೇಶಗಳಲ್ಲಿ ಸೋಂಕು ಮತ್ತು ಸಾವು ಸಂಖ್ಯೆಯಲ್ಲಿಮತ್ತೆಭಾರೀ ಏರಿಕೆ ಕಂಡುಬಂದಿದೆ. ಇನ್ನು ಕೆಲವು ರಾಷ್ಟ್ರಗಳಲ್ಲಿ ಹಾವಳಿ ಕಡಿಮೆಯಾಗಿದೆ. 10ಕ್ಕೂ ಹೆಚ್ಚು ದೇಶಗಳು ಪೀಡೆಯಿಂದ ಮುಕ್ತವಾಗಿರುವುದು …
Read More »ಬ್ರೇಕಿಂಗ್ : ಹರಿಪ್ರಸಾದ್ ಮತ್ತು ನಜೀರ ಅಹಮದ್ ಗೆ ಕಾಂಗ್ರೆಸ್ ಪರಿಷತ್ ಟಿಕೆಟ್ ಘೋಷಣೆ
ಬೆಂಗಳೂರು, ಜೂ.17- ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ವಿಧಾನ ಪರಿಷತ್‍ನ ಮಾಜಿ ಸದಸ್ಯ ನಜೀರ ಅಹಮದ್, ರಾಜ್ಯಸಭೆ ಮಾಜಿ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ಟಿಕೆಟ್ ನೀಡಿದೆ. ಬಿಜೆಪಿ ಮಾದರಿಯಲ್ಲೇ ಕಾಂಗ್ರೆಸ್ ಹೈಕಮಾಂಡ್ ಕೂಡ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೂಚಿಸಿದ ಹೆಸರಗಳನ್ನು ಹೊರತು ಪಡಿಸಿ ಬಿ.ಕೆ.ಹರಿಪ್ರಸಾದ್ ಅವರಿಗೆ ಹೈಕಮಾಂಡ್‍ಗೆ ಮಣೆ …
Read More »ಅತ್ತ ಗಡಿಯಲ್ಲಿ ಚೀನಿಯರ ಕಿರಿಕ್ ಬೆನ್ನಲ್ಲೇ ಇತ್ತ ಪಾಕ್ ಪುಂಡಾಟಿಕೆ………….
ಶ್ರೀನಗರ, ಜೂ.17- ಇಂಡೋ-ಚೀನಾ ಗಡಿಯಲ್ಲಿ ಉಭಯ ಸೇನಾ ಪಡೆಗಳ ನಡುವೆ ಬಿಕ್ಕಟ್ಟು ಉಲ್ಬಣಗೊಂಡಿರುವಾಗಲೇ ಅತ್ತ ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲೂ ಪಾಕಿಸ್ತಾನ ಸೇನಾಪಡೆಗಳ ಪುಂಡಾಟ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ನೌಗಂ ಬಳಿ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಉದ್ದಕ್ಕೂ ಪಾಕಿಸ್ತಾನ ಸೇನಾ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನಾ ಪಡೆಗಳನ್ನು ಗುರಿಯಾಗಿಟ್ಟುಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ನಿನ್ನೆ ರಾತ್ರಿ ಪಾಕಿಸ್ತಾನ ಸೈನಿಕರು ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ …
Read More »ದಂಡುಪಾಳ್ಯ ರೀತಿಯಲ್ಲಿ ಕೊಲೆ ನಡೆದಿದೆ..ಎಲ್ಲಿ ಗೊತ್ತಾ?
ಮಂಡ್ಯ: ಮಹಿಳೆಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.ಜಿಲ್ಲೆಯ ಶ್ರೀರಂಗಪಟ್ಟಣದ ಲಾಡ್ಜ್ ನಲ್ಲಿ ಘಟನೆ ನಡೆದಿದ್ದು, ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಜೋಡಿಯೊಂದು ಲಾಡ್ಜ್ ಗೆ ಆಗಮಿಸಿದೆ. ರಾತ್ರಿ ವೇಳೆಗೆ ಮಹಿಳೆಯನ್ನು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ. ಜೋಡಿ ಇದ್ದ ರೂಮ್‍ನಿಂದ ರಕ್ತ ಹೊರ ಬರುತ್ತಿದ್ದದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಕತ್ತು ಕೊಯ್ದು ಚಾಕು ಸ್ಥಳದಲ್ಲೇ …
Read More »ಗೋಕಾಕ ತಾಲೂಕಿನ ಸರ್ಕಾರದ ವಿವಿದ ಕಾರ್ಯಕ್ರಮಗಳ ಅನುಷ್ಟಾನದ ಪ್ರಗತಿ ಪರಿಶೀಲನಾ ಸಭೆ:ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ.
ಗೋಕಾಕ:ಗೋಕಾಕ ತಾಲೂಕಿನ ಸರ್ಕಾರದ ವಿವಿದ ಕಾರ್ಯಕ್ರಮಗಳ ಅನುಷ್ಟಾನದ ಪ್ರಗತಿ ಪರಿಶೀಲನಾ ಸಭೆಯನ್ನು ಗೋಕಾಕ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಜಲಸಂಪನ್ಮೂಲ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಅದ್ಯಕ್ಷತೆಯಲ್ಲಿ ಸಭೆ ನಡೆಯಿತು ಈ ಸಂದರ್ಭದಲ್ಲಿ ವಿವಿದ ಇಲಾಖೆಗಳ ಅಧಿಕಾರಿಗಳಿಗೆ ಸಚಿವರು ಅವರ ಪ್ರಗತಿಯ ಬಗ್ಗೆ ವಿವರ ಕೇಳುತ್ತಿರುವಾಗ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕೆನಾಲ ಗೆಟಗಳನ್ನೆ ದುರಸ್ತಿಯಾಗದೆ ನೀರು ಹೇಗೆ ರೈತರಿಗೆ ಮುಟ್ಟುತ್ತದೆ ,ಎಂದು ಜಿಲ್ಲಾ ಪಂಚಾಯತ ಸದಸ್ಯ ತುಕಾರಾಮ ಕಾಗಲ್ …
Read More »ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಜಾಗೃತಿ ಮೂಡಿಸಿ. ಆರ.ಎಸ್ ಎಸ್.
ನವದೆಹಲಿ: ಸರ್ಕಾರಗಳ ಟೆಂಡರ್ ಗಳಲ್ಲಿ ಭಾಗವಹಿಸಿರುವ ಚೀನಾದ ಎಲ್ಲ ಕಂಪನಿಗಳಿಗೆ ನಿಷೇಧ ಹೇರಬೇಕು. ಅಲ್ಲದೆ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಜನರಿಗೆ ಪ್ರೋತ್ಸಾಹ ನೀಡಬೇಕು ಎಂದು ಆರ್‍ಎಸ್‍ಎಸ್ ಸಂಯೋಜಿತ ಸ್ವದೇಶಿ ಜಾಗರಣ್ ಮಂಚ್(ಎಸ್‍ಜೆಎಂ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಚೀನಾ ಉಪಟಳ ಹೆಚ್ಚುತ್ತಿದ್ದು, ಜೂನ್ 15 ಹಾಗೂ 16ರಂದು ಪೂರ್ವ ಲಡಾಕ್‍ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ ಹಾಗೂ ಚೀನಾ ಮಧ್ಯೆ ನಡೆದ ದಾಳಿ, ಪ್ರತಿ ದಾಳಿಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. …
Read More »ಶಿವಮೊಗ್ಗದಲ್ಲಿ ಕೊರನ್ ಮಹಾಮಾರಿಗೆ ಮೊದಲ ಬಲಿ
ಶಿವಮೊಗ್ಗ: ಕೊರೊನಾ ಮಹಾಮಾರಿಗೆ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದ ಮೊದಲ ಘಟನೆಯಾಗಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ಮೂಲದ 70 ವರ್ಷದ ವೃದ್ಧೆ ಮೂಲವ್ಯಾಧಿ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆಗೆಂದು ಕಳೆದ ಮೂರು ದಿನದ ಹಿಂದೆ ಮೆಗ್ಗಾನ್ ಆಸ್ಪತ್ರೆಗೆ ಸ್ವತಃ ಅವರೇ ಆಗಮಿಸಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ಆದರೆ ಈ …
Read More »507 ವೈದ್ಯರು ಬುಧವಾರ ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.
ಬೆಂಗಳೂರು: ಹಲವು ಬಾರಿಯ ಮನವಿ ನಂತರವೂ ರಾಜ್ಯ ಸರ್ಕಾರ ವೇತನ ಹೆಚ್ಚಳ ಮಾಡದ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ 507 ವೈದ್ಯರು ಬುಧವಾರ ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಕೋರಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದರು. ಆದರೆ ಇದಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ರಾಜೀನಾಮೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ. …
Read More »ಹೊಸದಾಗಿ ಅಧಿಕಾರ ವಹಿಸಿಕೊಂಡ ತಹಶಿಲ್ದಾರ ಹಾಗೂ ಉಪ-ತಹಶಿಲ್ದಾರರಿಗೆ ಸತ್ಕಾರ
ಘಟಪ್ರಭಾ- ಬೆಂಗಳೂರಿನಲ್ಲಿ ಹೊಸದಾಗಿ ತಹಶಿಲ್ದಾರ ಆಗಿ ಅಧಿಕಾರ ವಹಿಸಿಕೊಂಡಿರುವ ವಿಠ್ಠಲ ಚೌಗಲಾ ಹಾಗೂ ಬೆಳಗಾವಿ ಜಿಲ್ಲೆಯ ತೇರದಾಳ ತಾಲೂಕಿನ ಉಪ-ತಹಶಿಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕಾಂತ ಮಾಯನ್ನವರ ಇವರಿಗೆ ಘಟಪ್ರಭಾದ ಶ್ರೀ ಸರಸ್ವತಿ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ಅಖಿಲ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮಿತಿ ವತಿಯಿಂದ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಸರಸ್ವತಿ ಇಂಟರ್ ನ್ಯಾಷನಲ್ ಸ್ಕೂಲಿನ ಅಧ್ಯಕ್ಷರಾದ ಶಂಕರ ಕುರಣಗಿ.ವಿಶ್ವ ಕರ್ಮ ಹೋರಾಟಗಾರ ಸಮಿತಿಯ ಉಪಾಧ್ಯಕ್ಷ ರಾದ …
Read More »