Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಗೋಕಾಕ ತಾಲೂಕಿನ ಸರ್ಕಾರದ ವಿವಿದ ಕಾರ್ಯಕ್ರಮಗಳ ಅನುಷ್ಟಾನದ ಪ್ರಗತಿ ಪರಿಶೀಲನಾ ಸಭೆ:ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ.

ಗೋಕಾಕ ತಾಲೂಕಿನ ಸರ್ಕಾರದ ವಿವಿದ ಕಾರ್ಯಕ್ರಮಗಳ ಅನುಷ್ಟಾನದ ಪ್ರಗತಿ ಪರಿಶೀಲನಾ ಸಭೆ:ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ.

Spread the love

ಗೋಕಾಕ:ಗೋಕಾಕ ತಾಲೂಕಿನ ಸರ್ಕಾರದ ವಿವಿದ ಕಾರ್ಯಕ್ರಮಗಳ ಅನುಷ್ಟಾನದ ಪ್ರಗತಿ ಪರಿಶೀಲನಾ ಸಭೆಯನ್ನು ಗೋಕಾಕ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಜಲಸಂಪನ್ಮೂಲ ಸಚಿವರು‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಅದ್ಯಕ್ಷತೆಯಲ್ಲಿ ಸಭೆ ನಡೆಯಿತು

ಈ ಸಂದರ್ಭದಲ್ಲಿ ವಿವಿದ ಇಲಾಖೆಗಳ‌ ಅಧಿಕಾರಿಗಳಿಗೆ ಸಚಿವರು ಅವರ ಪ್ರಗತಿಯ ಬಗ್ಗೆ ವಿವರ ಕೇಳುತ್ತಿರುವಾಗ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕೆನಾಲ ಗೆಟಗಳನ್ನೆ ದುರಸ್ತಿಯಾಗದೆ ನೀರು ಹೇಗೆ ರೈತರಿಗೆ ಮುಟ್ಟುತ್ತದೆ ,ಎಂದು ಜಿಲ್ಲಾ ಪಂಚಾಯತ ಸದಸ್ಯ ತುಕಾರಾಮ‌ ಕಾಗಲ್ ಇವರು ಸಚಿವರ ಸಮ್ಮುಖದಲ್ಕಿ ತರಾಟೆಗೆ ತೆಗೆದುಕೊಂಡರು. ಇದನ್ನು ಆಲಿಸಿದ ಸಚಿವರು ರೈತರಿಗೆ ಯಾವುದೇ ತೊಂದರೆಯಾಗದಂತೆ ನಡೆದುಕೊಳ್ಳಲು ಸೂಚಿಸಿದರು.

ಎರಡು ದಿನಗಳಲ್ಲಿ ಮಾರ್ಕಂಡೆ ಮತ್ತು ಜೆ ಆರ್,ಬಿ,ಸಿ, ಕಾಮಗಾರಿ ಪೂರ್ಣಗೋಳಿಸಿರಿ ನಿಮ್ಮ ಕಾಮಗಾರಿಯನ್ನು ವಿಕ್ಷಿಸಲು ಇಬ್ಬರನ್ನು ಕಳಿಸುತ್ತೇನೆಂದು ಎಚ್ಚರಿಸಿದರು.

ಇದರ ಜೊತೆಗೆ ಪ್ರವಾಹದಿಂದ ತಾಲೂಕಿನ ಜನತೆಗೆ ಯಾವುದೆ ತೊಂದರೆಯಾಗದಂತೆ ಎಲ್ಲ ಅಧಿಕಾರಿಗಳೂ ಎಚ್ಚರವಹಿಸಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಗೋಕಾಕ ತಹಶೀಲ್ದಾರ ಸೇರಿದಂತೆ ತಾಲೂಕಿನ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.

 


Spread the love

About Laxminews 24x7

Check Also

“ಮಹಾಪರಿನಿರ್ವಾಣ” ದಿನ ನಿಮಿತ್ಯ ಕೇ೦ದ್ರ ಕಾರಾಗೃಹದಲ್ಲಿ ಕಾರ್ಯಕ್ರಮ

Spread the love ಕೇ೦ದ್ರ ಕಾರಾಗೃಹ ಬೆಳಗಾವಿಯಲ್ಲಿ “ಮಾಹಾಪರಿನಿರ್ವಾಣ” ದಿನ ನಿಮಿತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರಾಗೃಹದ ಮುಖ್ಯ ಅಧಿಕ್ಷಕರಾದ ಶ್ರೀ ಕೃಷ್ಣಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ