Breaking News

ಇಸ್ಪೀಟ್ ಅಡ್ಡೆ ಮೇಲೆ ಯಮಕನಮರಡಿ ಪೊಲೀಸರ ದಾಳಿ: 9 ಜನರ ಬಂಧನ

Spread the love

ಬೆಳಗಾವಿ: ಜಿನರಾಳ ಗ್ರಾಮದ ಬ್ಯಾಡರಟ್ಟಿ ಕ್ರಾಸ್ ಹತ್ತಿರವಿರುವ ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಯಮಕನಮರಡಿ ಪೊಲೀಸರು ದಾಳಿ ನಡೆಸಿದ್ದು, ಜೂಜಾಟದಲ್ಲಿ ನಿರತರಾಗಿದ್ದ ಒಂಬತ್ತು ಜನರನ್ನು ಬಂಧಿಸಿದ್ದಾರೆ.

ಯಮಕನಮರ್ಡಿ ಸಿಪಿಐ ಜಾವೀದ್ ಮುಶಾಪುರೆ ನೇತೃತ್ವದ ಪೊಲೀಸ್ ತಂಡವು ಜಿನರಾಳ ಗ್ರಾಮದ ಹದ್ದಿಯಲ್ಲಿರುವ ಬ್ಯಾಡರಟ್ಟಿ ಕ್ರಾಸ್ ಬಳಿಯ ಡೈಕ್ ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಮಿಂಚಿನ ದಾಳಿ ನಡೆಸಿದೆ. ಬಂಧಿತರಲ್ಲಿ ಹುಕ್ಕೇರಿ ತಾಲೂಕಿನ ಹೊಸೂರು, ಯರನಾಳ ನಿವಾಸಿಗಳು ಹಾಗೂ ನೆರೆಯ ಗಡಹಿಂಗ್ಲಜ ತಾಲೂಕಿನ ಹಿಟ್ಟಿ ಮತ್ತು ಕಡಲಗಿ ಗ್ರಾಮದವರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ ಬಂಧಿತರಿಂದ ಒಟ್ಟು 23,730 ರೂಪಾಯಿ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಬಂಧಿತರನ್ನು ಸುಭಾಷ ಅಕ್ಕತಂಗೇರಹಾಳ, ಸಚಿನ ಪಾಟೀಲ, ಆಯುಬ ಖಲೀಪ, ರಾಜು ಘಸ್ತಿ, ಭರಮಪ್ಪಾ ಫಸ್ತಿ, ನಿಂಗಪ್ಪಾ ಪಾಟೀಲ, ರಾಜು ಪಟೋಲಿ, ಮಹಾವೀರ ಚೌಗಲಾ ಮತ್ತು ಮಹಮ್ಮದ ಸನದಿ ಎಂದು ಗುರುತಿಸಲಾಗಿದೆ. ಈ ಕುರಿತು ಯಮಕನಮರ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.”


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ