Breaking News
Home / Uncategorized / ತುಂಬು ಗರ್ಬಿಣಿಯಾದರೂ ಹಗಲಿರುಳು ದುಡಿಯುತ್ತಿದ್ದ ಆಶಾ ಕಾರ್ಯಕರ್ತೆಗೆ ಸೀಮಂತ ಮಾಡಿ ಕೃತಜ್ಞತೆ:ಶಾಸಕ ಗೌರಿಶಂಕರ

ತುಂಬು ಗರ್ಬಿಣಿಯಾದರೂ ಹಗಲಿರುಳು ದುಡಿಯುತ್ತಿದ್ದ ಆಶಾ ಕಾರ್ಯಕರ್ತೆಗೆ ಸೀಮಂತ ಮಾಡಿ ಕೃತಜ್ಞತೆ:ಶಾಸಕ ಗೌರಿಶಂಕರ

Spread the love

ತುಮಕೂರು: ದೇಶಾದ್ಯಂತ ಕೊರೊನಾ ವಾರಿಯರ್ಸ್‌ಗೆ ಅನೇಕ ರೀತಿಯಲ್ಲಿ ಸನ್ಮಾನ ಮಾಡಲಾಗುತ್ತಿದೆ. ಇದೀಗ ತುಮಕೂರು ಗ್ರಾಮಾಂತರದ ಕೊರೊನಾ ವಾರಿಯರ್ಸ್‌ಗೆ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಗಿದೆ. ತುಂಬು ಗರ್ಬಿಣಿಯಾದರೂ ಹಗಲಿರುಳು ದುಡಿಯುತ್ತಿದ್ದ ಆಶಾ ಕಾರ್ಯಕರ್ತೆಗೆ ಸೀಮಂತ ಮಾಡಿ ಕೃತಜ್ಞತೆ ಸಲ್ಲಿಸಲಾಗಿದೆ.

ಗ್ರಾಮಾಂತರ ಶಾಸಕ ಗೌರಿಶಂಕರ ನೇತೃತ್ವದಲ್ಲಿ ಈ ಅಭಿನಂದನಾ ಕಾರ್ಯಕ್ರಮ ನೆರವೇರಿದೆ. ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಮನೆ ಮನೆಗೂ ತೆರಳಿ ಕೊರೊನಾ ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಅಂತವರ ಸೇವೆಯನ್ನು ಗುರುತಿಸಿ ಸುಮಾರು 300 ಜನ ಆಶಾಕಾರ್ಯಕರ್ತೆಯರಿಗೆ ವಿಶೇಷ ಸನ್ಮಾನವನ್ನು ಏರ್ಪಡಿಸಲಾಗಿತ್ತು.

ತುಮಕೂರು ಗ್ರಾಮಾಂತರದ ಗೂಳೂರಿನಲ್ಲಿ ಜೆಡಿಎಸ್ ಶಾಸಕ ಡಿ.ಸಿ ಗೌರಿಶಂಕರ್ 300 ಜನ ಆಶಾ ಕಾರ್ಯಕರ್ತೆಯರಿಗೆ ಸೀರೆ, ಅರಿಶಿಣ, ಕುಂಕುಮ, ಹೂ, ಬಳೆ ಆಹಾರ ಕಿಟ್, ತರಕಾರಿ ನೀಡಿ ಸನ್ಮಾಸಿಲಾಯಿತು. ಪ್ರತಿಯೊಬ್ಬ ಅಶಾ ಕಾರ್ಯಕರ್ತೆಗೂ ಹೂಮಳೆ ಸುರಿಸುವುದರ ಮೂಲಕ ಅವರ ಕೆಲಸವನ್ನು ಶ್ಲಾಘಿಸಿದರು.

ಆಶಾ ಕಾರ್ಯಕರ್ತೆಯರ ತಾಲೂಕು ಮೇಲ್ವಿಚಾರಕಿ ಭಾರತಿ ಗರ್ಭಿಣಿಯಾಗಿದ್ದು, ಅವರ ಸೀಮಂತ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಅವರಿಗೆ ಆತ್ಮ ಸ್ಥೈರ್ಯ ತುಂಬಿದರು. ಈ ವೇಳೆ ಮಾತನಾಡಿದ ಭಾರತಿ, ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನಾನೆಂದು ಜೊತೆಗಿರುತ್ತೇನೆ. ಸರ್ಕಾರ ಆದಷ್ಟು ಬೇಗ ಆಶಾ ಕಾರ್ಯಕರ್ತೆಯರ ತಿಂಗಳ ವೇತನವನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರು, ಜೆಡಿಎಸ್ ಮಹಿಳಾ ಘಟಕ, ಪದಾಧಿಕಾರಿಗಳು ಭಾಗವಹಿಸಿದ್ದರು.


Spread the love

About Laxminews 24x7

Check Also

ರಾಜ್ಯಕ್ಕೆ ಬರುವ ಮಹಾರಾಷ್ಟ್ರ ಸಚಿವರನ್ನು ಬಂಧಿಸಿ : ವಾಟಾಳ್ ಆಗ್ರಹ

Spread the loveಬೆಂಗಳೂರು : ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರದ ಎನ್‌ಸಿಪಿ ಪಕ್ಷದ ಅಧ್ಯಕ್ಷ ಶರದ್ ಪವಾರ್ ಉದ್ದಟತನದ ಹೇಳಿಕೆಯನ್ನು ನಿಲ್ಲಿಸಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ