Breaking News

ಸಿಎಂಗೆ ಯಾರೋ ಮಾಟ ಮಂತ್ರ ಮಾಡಿಸಿರಬಹುದು, ಜನ್ರೂ ಮಾತಾಡಿಕೊಳ್ತಿದ್ದಾರೆ: ರಾಜಣ್ಣ

Spread the love

ಬೆಂಗಳೂರು: ಸಿಎಂ ಇಷ್ಟೊಂದು ಅಸಹಾಯಕ ರೀತಿಯಲ್ಲಿದ್ದಾರೆ ಅಂದ್ರೆ ಯಾರೋ ಮಾಟ ಮಂತ್ರ ಮಾಡಿಸಿರಬಹುದಾ ಅಂತ ಯೋಚನೆ ಮಾಡ್ತಿದ್ದೇನೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ  ಹೇಳಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಮನುಷ್ಯನ ಮೇಲೆ ಪ್ರಭಾವ ಬೀರಬೇಕು ಅಂದ್ರೆ ಆಸ್ತಿಕರಾಗಿರಬೇಕು ಅಂತಲೇ ಅಲ್ಲ. ಆಗಿದ್ಯೋ ಇಲ್ವೋ ನನಗೆ ಗೊತ್ತಿಲ್ಲ, ಯೋಚನೆ ಮಾಡ್ತಿದ್ದೇನೆ. ನನ್ನನ್ನ ಸಿಎಂ ಕರೆದು ಮಾತನಾಡಿಸಿದ್ರು. ನಾನು, ಸಿಎಂ ಇಬ್ಬರೂ ಮಾಟ ಮಂತ್ರ ನಂಬಲ್ಲ. ಆದರೆ ಗಟ್ಟಿಯಾಗಿ ನಿಲ್ಲಿ ಅಂತ ಹೇಳಿಸಿಕೊಳ್ಳುವಷ್ಟು ಸಿಎಂ ಅಸಹಾಯಕರಲ್ಲ. ಆದರೆ ಮಾಟ ಮಂತ್ರದ ಬಗ್ಗೆ ಜನ ಮಾತಾಡುತ್ತಿದ್ದಾರೆ ಎಂದಿದ್ದಾರೆ. 

ಸಿಎಂ ಕೆಲ ವಿಚಾರದಲ್ಲಿ ನಡೆದುಕೊಂಡಿದ್ದಕ್ಕೆ ಹಾಗೆ ಮಾತನಾಡ್ತಾರೆ. ಯಾರಾದರೂ ಮಾಟ ಮಂತ್ರ ಮಾಡಿಸಿರಬಹುದೇನೋ ಅಂತ. ನನ್ನ ಮೇಲೆಯೂ ಹಿಂದೆ ಮಾಟಮಂತ್ರ ಆಗಿತ್ತು. ನಾನು ಚುನಾವಣೆ ನಿಂತಾಗೆಲ್ಲಾ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು. ಕೇರಳದಲ್ಲಿ ಮಾಟ ಮಂತ್ರ ಮಾಡ್ತಾರಂತೆ ಅದನ್ನ ನೋಡೋಣ ಅಂತ ಇದ್ದೇನೆ ಅಂತಾ ವ್ಯಂಗ್ಯವಾಡಿದ್ದಾರೆ.

ಇನ್ನೂ ಇದೇ ವೇಳೆ ಮೇ ತಿಂಗಳಲ್ಲಿ ಕೆಲವು ರಾಜಕೀಯ ಬೆಳವಣಿಗೆಗಳು ಆಗ್ತಿವೆ, ರಾಜಕಾರಣ ಪರಿಶುದ್ಧ ಆಗಬೇಕಾದ್ರೆ ಬದಲಾವಣೆಗಳು ಆಗಬೇಕು ಎಂದು ಮಾರ್ಮಿಕವಾಗಿ ಟಾಂಗ್ ಕೊಟ್ಟಿದ್ದಾರೆ. ನೋಟಿಸ್ ಕೊಟ್ಟು ಕೇಳೋದು ಸೌಜನ್ಯ. ಆರೋಪಕ್ಕೆ ನೋಟಿಸ್ ಕೊಡಲೇಬೇಕು ಅಂತಿಲ್ಲ. ಮೌಖಿಕವಾಗಿ ಆದ್ರೂ ಮಾಹಿತಿ ಒಡೆಯಬಹುದಿತ್ತು ಎಂದು ನಜೀರ್, ಜಬ್ಬಾರ್ ವಿರುದ್ಧ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟಿದೆ. ಇದನ್ನ ಒಪ್ಪೋಣ. ಜಮೀರ್ ಮೇಲೆ ಕ್ರಮ ಅಂತ ಬಂದ್ಮೇಲೆ ನೋಡೋಣ. ಆದರೆ ಸಮುದಾಯದಲ್ಲಿ ಕಾಂಗ್ರೆಸ್‌ಗೆ ಜಮೀರ್ ಮೇಲೆ ಕೋಪ ಅಂತ ಭಾವನೆ ಬರಬಾರದು. ಊಹೆ ಮಾಡಿಕೊಳ್ಳಬಾರದು. ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ, ಮುಸ್ಲಿಮರಿಂದ ಕಾಂಗ್ರೆಸ್‌ಗೆ ಸಹಾಯ ಆಗಿದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ: ಹೆಚ್‌ಡಿಕೆ

Spread the loveಬೆಂಗಳೂರು: ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್  ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ