Breaking News

ಗಾಂಜಾ ಮಾರುತ್ತಿದ್ದವ ಪೊಲೀಸ್ ವಶಕ್ಕೆ

Spread the love

ರಾಮದುರ್ಗ: ನಗರದ ಸಮೀಪದ ಹಲಗತ್ತಿ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ರಾಮದುರ್ಗ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ ಪೊಲೀಸರು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಕೆರೂರ ಗ್ರಾಮದ ನವೀನ ಲಕ್ಷ್ಮಣ ಹೆದ್ದೇರಿ (21) ಎಂಬಾತನಿಂದ 180 ಗ್ರಾಂ ಗಾಂಜಾ, ಬೈಕ್, ಒಂದು ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಪಿಐಎಸ್ ಸವಿತಾ ಮುನ್ಯಾಳ, ಗ್ರೇಡ್-2 ತಹಸೀಲ್ದಾರ್ ಸಂಜಯ ಖಾತೇದಾರ, ಪೊಲೀಸ್ ಸಿಬ್ಬಂದಿ ಹಣಮಂತ ವಾಸನ, ಕಷ್ಣಾ ಮಾದರ, ಸುರೇಶ ಕೋತಿನ, ಶ್ರೀಕಾಂತ ಜಾಧವ, ಶೇಷಪ್ಪ ಕಮಕೇರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ