ಮಂಗಳೂರು: ಬ್ಯಾಂಕ್ನ ಹಿರಿಯ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ. ಬ್ಯಾಂಕ್ ಅಧಿಕಾರಿ ವಾದಿರಾಜ್(55) ಆತ್ಮಹತ್ಯೆ ಮಾಡಿಕೊಂಡವರು. ವಾದಿರಾಜ್ ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಯವರು ಬಂದು ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ವಾದಿರಾಜ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ಬೆಳಗ್ಗೆ ಮಕ್ಕಳು ಕಾಲೇಜಿಗೆ ತೆರಳಿದ್ದರು. ಪತ್ನಿ ಕೂಡಾ …
Read More »ಕಿಯೋನಿಕ್ಸ್ನಲ್ಲಿ 500 ಕೋಟಿ ರೂ ಅವ್ಯವಹಾರ:ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಬಿಜೆಪಿಯವರು ಮೊದಲೇ ಮಾತನಾಡಿದ್ದರೆ ಪ್ರತಿಪಕ್ಷದ ನಾಯಕರು ಸಿಗುತ್ತಿದ್ದರೇನೋ, ಹಲವು ನಾಯಕರು ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಅವರ ಮಾತು ಕೇಳಿ ಸಂತೋಷವಾಗಿದೆ. ಅವರು ನನಗೆ ಖೆಡ್ಡಾ ತೋಡಲು ಹೊರಟಿದ್ದಾರೆ. ಆದರೆ, ಅವರೇ ಖೆಡ್ಡಾಕ್ಕೆ ಬೀಳುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೇವಡಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರೇ ತಿಂದು ತೇಗಿದವರು. ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಬಿಜೆಪಿಯವರದ್ದು ಸುಳ್ಳಿನ …
Read More »ನಾನೊಬ್ಬ ಸ್ವಾಭಿಮಾನಿ ರಾಜಕಾರಣಿ, ಸ್ವಾರ್ಥ ರಾಜಕಾರಣಿ ನಾನಲ್ಲ:D.V.S.
ಮಂಡ್ಯ: ನಾನೊಬ್ಬ ಸ್ವಾಭಿಮಾನಿ ರಾಜಕಾರಣಿ, ಸ್ವಾರ್ಥ ರಾಜಕಾರಣಿ ನಾನಲ್ಲ. ಸಾಯುವವರೆಗೂ ಹೆಣದ ಮೇಲೆ ಫ್ಲಾಗ್ ಹಾಕುವವರಗೆ ರಾಜಕಾರಣದಲ್ಲಿರಬೇಕು ಎನ್ನುವವರ ಸಂಖ್ಯೆ ಹೆಚ್ಚಾಗ್ತಿದೆ. ನನ್ನ ಚುನಾವಣಾ ರಾಜಕೀಯ ನಿವೃತ್ತಿ ಸಯಂಪ್ರೇರಿತ ನಿರ್ಧಾರ ಯಾರ ಒತ್ತಡವು ಇಲ್ಲ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ ತಿಳಿಸಿದ್ದಾರೆ. ಬರ ಅಧ್ಯಯನ ಮಾಡಲು ಮಂಡ್ಯಕ್ಕೆ ಆಗಮಿಸಿದ ವೇಳೆ ಮದ್ದೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮನುಷ್ಯನಿಗೆ ಕೆಲವು ಇತಿಮಿತಿ ಇರಬೇಕು. ಮೂವತ್ತು ವರ್ಷದಿಂದ ಎಲ್ಲ ಸ್ಥಾನಮಾನ …
Read More »ಹುಬ್ಬಳ್ಳಿ ಧಾರವಾಡ ಅವಳಿ ನಗರ ಧೂಳಿನಿಂದ ಮುಕ್ತ ಮಾಡಲು ಮಹಾನಗರ ಪಾಲಿಕೆ ದಿಟ್ಟ ಹೆಜ್ಜೆ..!
ಹುಬ್ಬಳ್ಳಿ:ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಗಳಿಸಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಬೆಳೆಯುತ್ತಲೇ ಇದೆ. ಆದ್ರೆ ನಗರದಲ್ಲಿ ಉಸಿರಾಡಲು ಸ್ವಚ್ಛ ಗಾಳಿ ಸಿಗದಂತಾಗಿದೆ. ಅವಳಿ ನಗರದಲ್ಲಿ ಧೂಳಿನ ಸಮಸ್ಯೆಯಿಂದ ಜನರು ಹೈರಾಣ ಆಗಿದ್ದಾರೆ. ಅವಳಿ ನಗರದಲ್ಲಿ ಧೂಳು ಹೆಚ್ಚಾಗಿರುವ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಜನರಿಗೆ ವಿವಿಧ ಅಲರ್ಜಿಗಳು ಕಾಡುತ್ತಿವೆ. ಹೀಗಾಗಿ ಅವಳಿನಗರ ಧೂಳುಮುಕ್ತ ಮಾಡಲು ಹಾಗೂ ಧೂಳು ತೆಗೆಯಲು ಈಗ ಪಾಲಿಕೆ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಧೂಳು …
Read More »ಜಾಮೀನು ರಹಿತ ವಾರಂಟ್ನಿಂದ ರಣ್ದೀಪ್ ಸುರ್ಜೇವಾಲಾಗೆ 5 ವಾರ ಬಿಗ್ ರಿಲೀಫ್
ನವದೆಹಲಿ : ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲಾ ಅವರಿಗೆ ಸುಪ್ರೀಂ ಕೋರ್ಟ್ ಇಂದು ರಿಲೀಫ್ ನೀಡಿದೆ. 23 ವರ್ಷಗಳ ಹಿಂದಿನ ಪ್ರಕರಣದಲ್ಲಿ ಅವರ ವಿರುದ್ಧ ಜಾರಿಯಾಗಿದ್ದ ಜಾಮೀನು ರಹಿತ ವಾರಂಟ್ನಿಂದ ಸರ್ವೋಚ್ಛ ನ್ಯಾಯಾಲಯವು ಐದು ವಾರಗಳ ಕಾಲ ರಕ್ಷಣೆ ನೀಡಿದೆ. ವಾರಾಣಸಿಯ ವಿಭಾಗೀಯ ಆಯುಕ್ತರ ನ್ಯಾಯಾಲಯ ಮತ್ತು ಕಚೇರಿ ಆವರಣದಲ್ಲಿ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 7ರಂದು ವಾರಾಣಸಿಯ ವಿಶೇಷ ನ್ಯಾಯಾಧೀಶರು (ಸಂಸದರು, ಶಾಸಕರ ಪ್ರಕರಣಗಳ ನ್ಯಾಯಾಲಯ) ಜಾಮೀನು …
Read More »21 ದಿನಕ್ಕೆ 21 ಲಕ್ಷ ರೂ ಕರೆಂಟ್ ಬಿಲ್..
ಮೈಸೂರು: ನಾಡ ಹಬ್ಬ ಮೈಸೂರು ದಸರಾ ನಿಮಿತ್ತ ಮೈಸೂರಿನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ದೀಪಾಲಂಕಾರದಿಂದ ಇಡೀ ಮೈಸೂರನ್ನು ಝಗಮಗಿಸುವಂತೆ ಮಾಡಲಾಗಿತ್ತು. ಇದು ದಿನಕ್ಕೆ ಒಂದು ಲಕ್ಷ ರೂಪಾಯಿಯಂತೆ ಕರೆಂಟ್ ಬಿಲ್ ಬಂದಿದ್ದು. ಒಟ್ಟು 21 ದಿನಕ್ಕೆ 21 ಲಕ್ಷ ರೂಪಾಯಿ ವಿದ್ಯುತ್ ವೆಚ್ಚವಾಗಿದೆ. ಇದು ಎಲ್ಲಾ ರಸ್ತೆಗಳು, ವೃತ್ತಗಳು, ಹಲವು ಕಲಾಕೃತಿಗಳ ದೀಪಾಲಂಕಾರ ಸೇರಿದಂತೆ ನಗರದ ದೀಪಾಲಂಕಾರಕ್ಕೆ ತಗುಲಿದೆ ಒಟ್ಟು ಖರ್ಚಾಗಿದೆ. ಈ ಬಾರಿಯ ದಸರಾ ದೀಪಾಲಂಕಾರಕ್ಕೆ ಒಟ್ಟು 1.45 ಲಕ್ಷ ಯುನಿಟ್ …
Read More »ಜಿಲ್ಲಾ, ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆ; ಮೀಸಲು ನಿಗದಿಗೆ ಅಂತಿಮ ಗಡುವು ನೀಡಿದ ಹೈಕೋರ್ಟ್
ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳ ಚುನಾವಣೆಗಾಗಿ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆಗೆ ಹೈಕೋರ್ಟ್ ಅಂತಿಮ ಗಡುವು ನೀಡಿದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ‘ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆ’ಗೆ ತಿದ್ದುಪಡಿ ತಂದಿರುವುದನ್ನು …
Read More »ಚಿಕ್ಕೋಡಿ ತಾಲೂಕಿನಲ್ಲಿ ಸರಣಿ ಎಟಿಎಂ ಕಳ್ಳತನದಿಂದ ಸಾರ್ವಜನಿಕರ ಆತಂಕ
ಚಿಕ್ಕೋಡಿ (ಬೆಳಗಾವಿ) : ತಡರಾತ್ರಿ ಚಿಕ್ಕೋಡಿ ತಾಲೂಕಿನ ಪ್ರತ್ಯೇಕ ಕಡೆ ಎರಡು ಎಟಿಎಂಗಳಲ್ಲಿ ಕಳ್ಳರು ಲಕ್ಷಾಂತರ ರೂಪಾಯಿ ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಎಸ್‌ಬಿಐ ಎಟಿಎಂ ಬುಧವಾರ ತಡರಾತ್ರಿ ಕಳ್ಳರು ಗ್ಯಾಸ್ ಕಟರ್ ಬಳಸಿಕೊಂಡು ಸರಿಸುಮಾರು 10 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ದರೋಡೆ ಮಾಡಿದ್ದಾರೆ. ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ. ಎಟಿಎಂನಲ್ಲಿ ನಿಖರವಾಗಿ ಎಷ್ಟು ಹಣ …
Read More »ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ
ಬೆಂಗಳೂರು : ನಗದು ಹಾಗೂ ಚೆಕ್ ರೂಪದಲ್ಲಿ ಲಂಚ ಸ್ವೀಕರಿಸುತ್ತಿದ್ದ ದಾಸನಪುರದ ಕಂದಾಯ ನಿರೀಕ್ಷಕ ಮತ್ತು ಮತ್ತು ಆತನ ಆಪ್ತನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಕಂದಾಯ ನಿರೀಕ್ಷಕನನ್ನು ವಸಂತ್ ಎಂದು ಗುರುತಿಸಲಾಗಿದೆ. ವಸಂತ್ 3.5 ಲಕ್ಷ ರೂ. ನಗದು ಹಾಗೂ 4 ಲಕ್ಷ ಚೆಕ್ ರೂಪದಲ್ಲಿ ಪಡೆದಿದ್ದ ಎಂದು ತಿಳಿದುಬಂದಿದೆ. ಕಂದಾಯ ನಿರೀಕ್ಷಕ ವಸಂತ್ ಅವರು ಬೆಟ್ಟಸ್ವಾಮಿ ಗೌಡ ಎಂಬುವವರಿಗೆ ಖಾತೆ ಪೋಡಿ ಮಾಡಿ ಕೊಡಲು 28 ಲಕ್ಷ ರೂ …
Read More »ಗ್ರಾಮ ಪಂಚಾಯಿತಿಗಳಿಗೂ ಬಂತು ಕ್ಯೂಆರ್ ಕೋಡ್ ವ್ಯವಸ್ಥೆ!, ಈ ಕ್ರಾಂತಿಕಾರಕ ಬದಲಾವಣೆಗೆ ಗ್ರಾಮಸ್ಥರು ಮೆಚ್ಚುಗೆ
ಮೈಸೂರು: ಈವರೆಗೆ ಕೇವಲ ನಗರ ಪ್ರದೇಶಗಳಿಗಷ್ಟೇ ಸಿಮಿತವಾಗಿದ್ದ ಡಿಜಿಟಲ್ ಪೇ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆ ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ತೆರಿಗೆ ಸೇರಿದಂತೆ ಇತರ ಸೇವಾ ಶುಲ್ಕವನ್ನು ಕ್ಯೂಆರ್ ಕೋಡ್ ಮೂಲಕ ಪಾವತಿಸಲಾಗುತ್ತಿದೆ. ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಚಯಿಸಿದ ಪ್ರಥಮ ಪ್ರಯೋಗ ಇದಾಗಿದ್ದು, ಈ ವಿನೂತನ ಸೌಲಭ್ಯದಿಂದ ಸ್ಥಳೀಯರಿಗೆ ತುಂಬಾ ಅನುಕೂಲವಾಗಿದೆ. ಈ ಕ್ರಾಂತಿಕಾರಕ …
Read More »
Laxmi News 24×7