Breaking News

ಹೆಲ್ಮೆಟ್ ರಹಿತರಿಗೆ ಪೆಟ್ರೋಲ್ ಇಲ್ಲ ಅಭಿಯಾನ

Spread the love

ಬೆಳಗಾವಿ: ಹೆಲ್ಮೆಟ್ ರಹಿತ ಬೈಕ್ ಚಾಲನೆ ಹೆಚ್ಚಾಗುತ್ತಿರುವುದರಿಂದ ಜೂ.15ರಿಂದ 21ರವರೆಗೆ ನಗರ ಪೊಲೀಸ್ ಕಮೀಷ್ನರೇಟ್ ಹಾಗೂ ನಗರ ಸಂಚಾರ ಪೊಲೀಸರಿಂದ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಹೆಲ್ಮೆಟ್ ರಹಿತರಿಗೆ ಪೆಟ್ರೋಲ್ ಇಲ್ಲ ಎಂಬ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.
ಸೋಮವಾರ ಬೆಳಗ್ಗೆ 11ಕ್ಕೆ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ರಾಣಿ ಚನ್ನಮ್ಮ ವೃತ್ತದಲ್ಲಿ ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಸಂದೀಪ ಪಾಟೀಲ ಚಾಲನೆ ನೀಡುವರು. ಜಿಪಂ ಸಿಇಒ ರಾಹುಲ ಶಿಂಧೆ, ಎಸ್ಪಿ ಕೆ.ರಾಮರಾಜನ್, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಇತರರು ಪಾಲ್ಗೊಳ್ಳುವರು.
ಅಭಿಯಾನದ ಪ್ರಯುಕ್ತ ಒಂದೊಂದು ದಿನ ಒಂದೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ.16ರಂದು ಹೆಲ್ಮೆಟ್ ರಹಿತರೊಂದಿಗೆ ಸಂವಹನ, 17ರಂದು ಶಾಲಾ-ಕಾಲೇಜ್‌ಗಳಲ್ಲಿ ಜಾಗೃತಿ, 19ರಂದು ಹೆಲ್ಮೆಟ್ ಧರಿಸದವರಿಗೆ ಇಂಧನ ಇಲ್ಲ ಎಂಬ ಕಾರ್ಯಕ್ರಮ.
ಜೂ.20ರಂದು ವಿವಿಧ ವೇಷಧಾರಿಗಳಿಂದ ಅರಿವು ಹಾಗೂ ಜೂ.21ರಂದು ಹೆಲ್ಮೆಟ್ ಧರಿಸಿದವರ ಮತ್ತು ಧರಿಸದವರ ಅಂಕಿ-ಅಂಶ  ಸಂಗ್ರಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ