Breaking News
Home / ಜಿಲ್ಲೆ / ಮಂಜುನಾಥ ಸೈನಿಕ ತರಬೇತಿ 16 ನೆ ವಾರ್ಷಿಕೋತಸವ

ಮಂಜುನಾಥ ಸೈನಿಕ ತರಬೇತಿ 16 ನೆ ವಾರ್ಷಿಕೋತಸವ

Spread the love

ಮೂಡಲಗಿ: ದೇಶ ನಮ್ಮಗೆ ಏನು ಕೋಟಿದ್ದೆ ಎಂಬ ಭಾವ ತೋರೆದು ದೇಶಕ್ಕಾಗಿ ನಾನೇನು ಮಾಡಿದ್ದೇನೆ, ದೇಶ ನನಗಾಗಿ ಅಲ್ಲ ನಾನು ದೇಶಕ್ಕಾಗಿ ಎಂದು ಮಂಜುನಾಥ ಶಿಕ್ಷಣ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಮೂಡಲಗಿ ಶಿಕ್ಷಣ ಸಂಸ್ಥೇಯ ಅಧ್ಯಕ್ಷರಾದ ವಿಜಯ ಸೊನವಾಲ್ಕರ ಹೇಳಿದರು.

ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮತ್ತು ಎಲ್.ವಾಯ್.ಅಡಿಹುಡಿ ಶಾಲೆ ಹಾಗೂ ಮಂಜುನಾಥ ಮೋಟಾರ ಡ್ರೈವ್ಹಿಂಗ್ ಸ್ಕೂಲ್ ಇವುಗಳ 16 ನೇ ವಾರ್ಷಿಕೋತ್ಸವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ನನ್ನ ದೇಶ ನನ್ನ ಜನವೆಂಬ ಭಾವನೆಯಿಂದಲೆ ನಮಗೆ ನೆಮ್ಮದಿ ಸಿಗುವುದು. ಆರ್ಮಿ ಪೋಲಿಸ್ ಪೂರ್ವಬಾವಿ ತರಬೇತಿ ಪಡೆಯಲು ಕರ್ನಾಟಕ ಅಷ್ಟೇ ಅಲ್ಲದೆ ಬೇರೆ ಬೇರೆ ರಾಜ್ಯಗಳಿಂದ ಈ ಸಂಸ್ಥೆಗೆ ಬರುವುದು ನಮ್ಮ ಜಿಲ್ಲೆಗೆ ಹೆಮ್ಮೇಯ ವಿಷಯ ಎಂದರು.
ಸಿಪಿಐ ವೆಂಕಟೇಶ್ ಮುರನಾಳ ಮಾತನಾಡಿ ಈ ಸಂಸ್ಥೆಯ ಸೈನಿಕ ಸಿಬಿರಾರ್ಥಿಗಳು ನೆರೆ ಪ್ರವಾಹ ಬಂದಾಗ ನಮ್ಮ ಪೋಲಿಸ್ ಸಿಬ್ಬಂದಿಯ ಜೋತೆ ನೆರೆ ಸಂತ್ರಸ್ಥರಿಗೆ ಆಹಾರ, ಬಟ್ಟೆ, ಹಾಸಿಗೆ ಇನ್ನಿತರ ಜನರ ಅವಶ್ಯಕತೆಗಳ ಅನುಸಾರವಾಗಿ ಸಾರ್ವಜನಿಕರಿಂದ ಕೂಡಿಸಿ ನಮ್ಮ ಭಾಗದ ಪ್ರತಿಯೊಂದು ಹಳ್ಳಿಗೆ ಹೋಗಿ ವಿತರಿಸಿದ್ದಾರೆ ಎಂದರು.

ಗ್ರಂಥಪಾಲಕ ಬಿ.ಪಿ. ಬಂದಿ ಸತ್ಕಾರವನ್ನು ಸ್ವಿಕರಿಸಿ ಮಾತನಾಡುತ್ತ್ತ, ಶಿಷ್ಯ ಗುರುವನ್ನು ಮಿರಿಸಬೇಕು ಎಂಬಂತೆ ಈ ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ಅಡಿಹುಡಿ ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಅದರ ಜೊತೆ ಸೈನ್ಯಕ್ಕೆ ಸೇರುವ ಸಿಬಿರಾರ್ಥಿಗಳನ್ನು ತಯಾರು ಮಾಡುವುದರ ಜೊತೆಗೆ ತಮ್ಮನ್ನು ತಾವು ಸಮಾಜ ಸೇವೆಗೆ ಮುಡುಪಾಗಿಟ್ಟಿದ್ದಾರೆ ಎಂದರು.
ಸಭೆಯ ಅದ್ಯಕ್ಷ ಸ್ಥಾನವನ್ನು ಬಿ.ಬಿ ಹಂದಿಗುಂದ ವಹಿಸಿ ಮಾತನಾಡುತ್ತ, ಡ್ರೈವ್ಹೀಂಗ್ ತರಬೇತಿ ಕೊಟ್ಟು ಲೈಸನ್ಸ್ ಕೊಡಿಸುವುದರಿಂದ ಸಾವಿರಾರು ಸಿಬಿರಾರ್ಥಿಗಳು ತಮ್ಮ ಸ್ವಂತ ಜೀವನ ರೂಪಿಸಿಕೊಳ್ಳಲು ಈ ಸಂಸ್ಥೆ ಮಾರ್ಗದರ್ಶಿಯಾಗಿದೆ ಎಂದರು.
ದಿವ್ಯಸಾನಿದ್ಯ ವಹಿಸಿದ ಸುಣಧೊಳಿಯ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಸ್ವಾಮಿಗಳು ಮಾತನಾಡುತ್ತ, ಗಿಡ ಮರಗಳನ್ನು ಬೆಳೆಸಬೇಕಾಗಿದೆ ಅದರಿಂದ ವಾತಾವರಣದಲ್ಲಿ ಆಮ್ಲಜನಕ ಸರಿಯಾದ ಪ್ರಮಾಣದಲ್ಲಿ ಸಿಗುವುದರಿಂದ ಮನುಷ್ಯನಿಗೆ ಯಾವುದೆ ರೀತಿ ತೊಂದರೆಯಾಗುವುದಿಲ್ಲ ಮಕ್ಕಳಿಗೆ ಮೋದಲ ಪಾಠ ಶಾಲೆ ಮನೆ ಎರಡನೇಯ ಪಾಠ ಶಾಲೆ ಶಿಕ್ಷಣ ಸಂಸ್ಥೆಯಾಗಿರುತ್ತದೆ ಆದ್ದರಿಂದ ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಿ ಎಂದರು.
ಕಾರ್ಯಕ್ರಮದಲ್ಲಿ ಸುಧಿರ ನಾಯರ, ರಾಮಣ್ಣಾ ಮಂಟೂರ, ಯಲ್ಲಪ್ಪಾ ಕಂಕಣವಾಡಿ ಸತ್ಕರಿಸಲಾಯಿತು. ವೇದಿಕೆಯಲ್ಲಿ ಎ.ಸಿ.ಮನ್ನಿಕೇರಿ, ಕೆ.ಪಿ.ಮಗದುಮ್ ಶಿವಪ್ಪಾ ಜೊಡಟ್ಟಿ ಆಯ್.ಎಮ್.ಹಿರೇಮಠ ಪಿ.ಎಸ್.ಮಲ್ಲಾಪೂರ ವಿ.ಸಿ. ಗಾಡವಿ ವಿ.ಕೆ.ಪಾಟೀಲ ಸುಧಾಕರ ಉಂದ್ರಿ ಶಿವಾನಂದ ಮುಧೋಳ ಪುಟ್ಟು ಗಾಡವಿ ಕೆ.ಬಿ.ಗಿರೆನ್ನವರ, ಎ.ಎಚ್.ಹಾವಲ್ದಾರ್ ಎಸ್.ಎಚ್.ಗೋಡ್ಯಾಗೋಳ ಸತೀಶ ಲಂಕೆಪ್ಪನವರ ಭಗವಂತ ಉಪ್ಪಾರ ಈಶ್ವರ ಡವಳೇಶ್ವರ ರಾಜಶೇಖರ ಮಗದುಮ್, ಶ್ರೀಕಾಂತ ಮೊರೆ ಎಚ್.ಎಮ್. ಕಂಕಣವಾಡಿ ಅಜ್ಜಪ್ಪಾ ಕಂಕಣವಾಡಿ ಹಾಲಪ್ಪಾ ಅಂತರಗಟ್ಟಿ ಶಿವ¨ಸು ಕಂಕಣವಾಡಿ ಉಪಸ್ಥೀತರಿದ್ದರು. ಸಂಸ್ಥೇಯ ಸಂಸ್ಥಾಪಕ ಲಕ್ಷ್ಮಣ ಅಡಿಹುಡಿ ಸ್ವಾಗತಿಸಿ, ಪ್ರಧಾನ ಗುರುಮಾತೆ ಪಲ್ಲವಿ ಭಂಡಾರಿ ವರದಿವಾಚನ ಹೇಳಿದರು, ಶಿಲ್ಪಾ ಗಡಾದ ಕಾರ್ಯಕ್ರಮ ನಿರೂಪಿಸಿ, ಸಾರಿಕಾ ಮೋಹಿತೆ ವಂದಿಸಿದರು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಮನರಂಜನೆ ಕಾರ್ಯಕ್ರಮ ಜರುಗಿದವು.


Spread the love

About Laxminews 24x7

Check Also

ಖಾನಾಪುರ ತಾಲೂಕಿನಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆ,ಕಲ್ಲು ತೂರಾಟ !

Spread the love ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳು ಮಧ್ಯೆ ನಡೆದ ಗಲಾಟೆಯಲ್ಲಿ ಕಲ್ಲು ತೂರಾಟ ನಡೆಸಿ ಬಿಗುವಿನ ಸ್ಥಿತಿ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ