Breaking News
Home / ಅಂತರಾಷ್ಟ್ರೀಯ / ಲವ್​ ಜಿಹಾದ್ : ಮಹಿಳೆ – ಮಗಳನ್ನು ಬಲಿ, ಕೊಂದು ಮನೆಯಲ್ಲಿ ಮುಚ್ಚಿರುವ ಭೂಪ್

ಲವ್​ ಜಿಹಾದ್ : ಮಹಿಳೆ – ಮಗಳನ್ನು ಬಲಿ, ಕೊಂದು ಮನೆಯಲ್ಲಿ ಮುಚ್ಚಿರುವ ಭೂಪ್

Spread the love

ಮೀರತ್​: ಐದು ವರ್ಷಗಳ ಕಾಲ ತಾನು ಹಿಂದು ಎಂದು ಹೇಳಿಕೊಂಡೇ ಆಕೆಯನ್ನು ವಂಚಿಸಿದ. ಆತನ ನಿಜವಾದ ಬಣ್ಣ ಬಯಲಾಗುತ್ತಿದ್ದಂತೆ ತಾಯಿ ಹಾಗೂ ಮಗುವನ್ನು ಕೊಲೆಗೈದು ಆಕೆಯ ಮನೆಯಲ್ಲಿಯೇ ಹೂತು ಹಾಕಿ ಪರಾರಿಯಾಗಿದ್ದಾನೆ.

ದುರಂತವೆಂದರೆ, ಕೈಗೆ ಸಿಕ್ಕ ಆರೋಪಿಯನ್ನು ವಿಚಾರಣೆ ನಡೆಸಿ ಕೈಬಿಟ್ಟ ಪೊಲೀಸರು ಆತನೇ ಕೊಲೆಗಾರ ಎಂಬುದು ತಿಳಿಯುತ್ತಿದ್ದಂತೆ ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ್ದಾರೆ.ಲವ್​ ಜಿಹಾದ್​ನ ಈ ಪ್ರಕರಣ ನಡೆದದ್ದು ಉತ್ತರ ಪ್ರದೇಶದ ಮೀರತ್​ನಲ್ಲಿ. ಬಯಲಿಗೆ ಬಂದದ್ದು ಮಹಿಳೆಯ ಗೆಳತಿ ಚಂಚಲ್​ನಿಂದ. ಗೆಳತಿ ಪ್ರಿಯಾ ಮೂರು ತಿಂಗಳಿನಿಂದ ಕಾಣುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಳು.

ತನಿಖೆ ಕೈಗೊಂಡ ಪೊಲೀಸರಿಗೂ ವಿಷಯ ಏನೆಂಬುದು ಗೊತ್ತಾಗಿರಲಿಲ್ಲ. ಆಕೆಯ ಜತೆ ಸಂಪರ್ಕದಲ್ಲಿದ್ದ ಶಂಷಾದ್​ನನ್ನು ಕರೆಯಿಸಿ ವಿಚಾರಣೆ ನಡೆಸಿ ಕಳುಹಿಸಿ ಕೊಟ್ಟಿದ್ದರು.

ಇದಾದ ಕೆಲ ದಿನಗಳ ಬಳಿಕ ಮಹಿಳೆ ಮನೆಯ ಆವರಣದಲ್ಲಿ ಎರಡು ಅಸ್ಥಿಪಂಜರಗಳು ಪತ್ತೆಯಾಗಿವೆ. ಅದು ನಾಪತ್ತೆಯಾಗಿದ್ದ ಪ್ರಿಯಾ ಹಾಗೂ ಆಕೆಯ ಮಗಳು ಕಶೀಷ್​ಳದ್ದು ಎಂದು ಗೊತ್ತಾಗಿದೆ.

ಪ್ರಿಯಾಳನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿದ್ದ ಶಂಷಾದ್​ ತಾನು ಹಿಂದು ಆಗಿದ್ದು, ಹೆಸರು ಅಮಿತ್​ ಎಂದು ಹೇಳಿಕೊಂಡಿದ್ದ. ಐದು ವರ್ಷಗಳವರೆಗೆ ಆಕೆಯೊಂದಿಗೆ ಸಂಬಂಧ ಹೊಂದಿದ್ದ. ಆದರೆ, ಆತ ಹಿಂದೂ ಅಲ್ಲ, ಮುಸ್ಲಿಂ ಎಂಬುದು ಗೊತ್ತಾಗುತ್ತಿದ್ದಂತೆ ಪ್ರಿಯಾ ಆತನಿಂದ ದೂರಾಗಿದ್ದಳು. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಭಾರಿ ಜಗಳ ನಡೆದಿತ್ತು. ಮಾರ್ಚ್​ 28ರಂದು ಪ್ರಿಯಾ ಹಾಗೂ ಕಶೀಷ್​ಳನ್ನು ಶಂಷಾದ್​ ಕೊಂದು ಹಾಕಿದ್ದ. ಇಬ್ಬರ ಶವವನ್ನು ಮನೆಯಲ್ಲಿಯೇ ಹೂತು ಹಾಕಿದ್ದ.

ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಶಂಷಾದ್​ ಮೂಲತಃ ಬಿಹಾರ್​ದವನಾಗಿದ್ದ, ಕಳೆದ 10 ವರ್ಷಗಳಿಂದ ಮೀರತ್​ನಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ