ಗೋಕಾಕ: ಧರಣಿ ನಿರತ ಬೀದಿ ವ್ಯಾಪಾರಾಸ್ಥರಿಗೆ ನಗರಸಭೆ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ ಸೂಕ್ತ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.
ನಗರಸಭೆ ಕಚೇರಿಯಲ್ಲಿ ಪ್ರತಿಭಟನಾನಿರತ ವ್ಯಾಪಾರಸ್ಥರ ಮನವೊಲಿಸಿದ ಮುಖ್ಯಾಧಿಕಾರಿ, ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ನಿಮ್ಮ ವ್ಯಾಪಾರ ಸುಗಮವಾಗಿ ನಡೆಸಲು ಅವಕಾಶ ಮಾಡಿಕೊಡುತ್ತೇನೆ ಸೂಕ್ತ ಭರವಸೆ ನೀಡಿದರು.
ಪಾರ್ಕಿಂಗ್ ವ್ಯವಸ್ಥೆಯಿಂದ ಹೀಗಾಗಿರಬೇಕು ಎಂದು ಸಮಜಾಯಷಿ ಹೇಳಿದ ಇನ್ನೆರಡು ದಿನಗಳಲ್ಲಿ ಎಲ್ಲ ಸರಿಪಡುತ್ತೇನೆ ಎಂದರು. ಕೊರೋನಾ ವಿರುದ್ಧ ಹೋರಾಟಕ್ಕೆ ನಿಮ್ಮ ಸಹಕಾರವು ಅಗತ್ಯವಿದೆ. ನೀವು ಜನದಟ್ಟಣೆ ಆಗದಂತೆ ಕ್ರಮವಹಿಸಿ ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ವ್ಯಾಪಾರಸ್ಥರಿಗೆ ತಿಳಿ ಹೇಳಿದರು.
ಮುಖ್ಯಾಧಿಕಾರಿಗಳ ಭರವಸೆ ಬಳಿಕ ಧರಣಿ ವ್ಯಾಪಾರಸ್ಥರು ಪ್ರತಿಭಟನೆ ಹಿಂಪಡೆದರು.