Breaking News
Home / Uncategorized / ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆ: ಜನರ ಬಂಧನ

ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆ: ಜನರ ಬಂಧನ

Spread the love

ಬೆಳಗಾವಿ: ಮಹಾರಾಷ್ಟ್ರದಿಂದ ಬಂದ ಜನರನ್ನು ಕ್ವಾರಂಟೈನ್ ಆಗಿ ಎಂದು ಹೇಳಲು ಹೋದ ಕೊರೋನಾ ವಾರಿಯರ್ಸ್‌ ಮೇಲೆ ರಾಷ್ಟ್ರೀಯ ಪಕ್ಷದ ಮುಖಂಡನ ಕುಮ್ಮಕ್ಕಿನಿಂದ ಹಲ್ಲೆ‌ ನಡೆದಿರುವ ಘಟನೆ ಹುಕ್ಕೇರಿ ತಾಲೂಕಿನ ಮರಣಹೋಳ ಗ್ರಾಮದಲ್ಲಿ ಜರುಗಿದೆ.

ನೀವು ಮಹಾರಾಷ್ಟ್ರದಿಂದ ಬಂದಿದ್ದೀರಾ,ನೀವು ಹೋಮ್ ಕ್ವಾರಂಟೈನ್ ಆಗಬೇಕು,ಎಂದು ತಿಳುವಳಿಕೆ ಹೇಳಲು ಹೋದ,ಪಿಡಿಓ ಮತ್ತು ಗ್ರಾಮ‌ಲೆಕ್ಕಾಧಿಕಾರಿ ಮೇಲೆ ಹಲ್ಲೆ ಮಾಡಲಾಗಿದೆ.

ಮರಣಹೋಳ ಗ್ರಾಮದಲ್ಲಿ ಮಹಾರಾಷ್ಟ್ರದಿಂದ ಹನ್ನೆರಡು ಜನ ಬಂದಿರುವ ಸುದ್ಧಿ ಜಿಲ್ಲಾಡಳಿತಕ್ಕೆ ಗೊತ್ತಾಗಿದೆ.ಮಾಹಿತಿ ಗೊತ್ತಾದ ಬಳಿಕ ತಾಲೂಕಾ ಆರೋಗ್ಯ ಅಧಿಕಾರಿ ಡೂಮಗಳ ,ಮತ್ತು ತಹಶೀಲ್ದಾರ ಇಬ್ಬರೂ ಅಧಿಕಾರಿಗಳು ಮರಣಹೋಳ ಗ್ರಾಮಕ್ಕೆ ಭೇಟಿ ನೀಡಿ ಮಹಾರಾಷ್ಟ್ರದಿಂದ ಬಂದಿರುವ ಹನ್ನೆರಡು ಜನರನ್ನು ಕೂಡಿಸಿ ಸರ್ಕಾರದ ನಿಯಮಗಳನ್ನು ಪಾಲಿಸಿ ಆರೋಗ್ಯ ಇಲಾಖೆಯ ನಿಗಾದಲ್ಲಿ ಇರುವಂತೆ ತಾಕೀತು ಮಾಡಿ ಬಂದಿದ್ದಾರೆ.

ನಂತರ ಪಿಡಿಓ,ತಲಾಠಿ,ಮತ್ತು ಆರೋಗ್ಯ ಸಹಾಯಕಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಮರಣಹೋಳ ಗ್ರಾಮಕ್ಕೆ ಹೋಗಿ ಮಹಾರಾಷ್ಟ್ರದಿಂದ ಬಂದಿರುವ ಹನ್ನೆರಡು ಜನರನ್ನು ಕ್ವಾರಂಟೈನ್ ನಲ್ಲಿ ಇರುವಂತೆ ಹೇಳಿದಾಗ,ಪಿಡಿಓ ಮತ್ತು ತಲಾಠಿಯ ಮೇಲೆ ಹಲ್ಲೆ ಮಾಡಿದ್ದಾರೆ.ಈ ಗದ್ದಲದ ನಡುವೆ ಆರೋಗ್ಯ ಸಹಾಯಕಿ ಅಲ್ಲಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ ಎಂದು ತಿಳಿದು ಬಂದಿದೆ‌ .

ಈ ಕುರಿತು ಯಮಕನಮರಡಿ ಪೊಲೀಸ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ರಾಷ್ಟ್ರೀಯ ಪಕ್ಷದ ಮುಖಂಡ ಸೇರಿ 8 ಜನರನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ಪಕ್ಷದ ಮುಖಂಡನಾದ ಲಕ್ಷ್ಮಣ ಪಾಟೀಲ ಕುಮ್ಮಕ್ಕಿನಿಂದ ಈ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.


Spread the love

About Laxminews 24x7

Check Also

ಸಾರ್ವಜನಿಕರೇ ಮಳೆಗಾಲದಲ್ಲಿ ಹರಡಲಿದೆ ಈ ರೋಗಗಳು,ಇರಲಿ ಎಚ್ಚರ..!

Spread the love ಬೆಂಗಳೂರು : ರಾಜ್ಯಾದ್ಯಂತ ಮಳೆ ಶುರುವಾಗಿದ್ದು, ಬಿಸಿಲಿನ ಬೇಗೆಗೆ ತಂಪೆರೆದಿದೆ. ಈ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ