Breaking News

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಯಾರ ಪರವೂ ಅಲ್ಲ, ಯಾರ ವಿರೋಧವೂ ಅಲ್ಲ: ಅನಿಲ್​ ಬೆನಕೆ

Spread the love

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಯಾರ ಪರವೂ ಅಲ್ಲ, ಯಾರ ವಿರೋಧವೂ ಅಲ್ಲ ಎಂದು ಹೇಳುವ ಮೂಲಕ ಶಾಸಕ ಅನಿಲ್​ ಬೆನಕೆ ಅಚ್ಚರಿ ಮೂಡಿಸಿದ್ದಾರೆ. ಇಷ್ಟು ದಿನಗಳ ಕಾಲ ಯಡಿಯೂರಪ್ಪರೇ ನಮ್ಮ ನಾಯಕ ಎಂತಿದ್ದ ಅನಿಲ್​ ಬೆನಕೆ ಇದೀಗ ಸಡನ್​ ಯೂ ಟರ್ನ್​ ಹೊಡೆದಿದ್ದಾರೆ.

ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್​ ಯಾವ ನಾಯಕನ ಹೆಸರನ್ನ ಸೂಚಿಸುತ್ತೋ ಅವರ ಪರವಾಗಿ ನಾನು ಕೆಲಸ ಮಾಡುತ್ತೇನೆ. ಅದು ಯಡಿಯೂರಪ್ಪರೇ ಆಗಿರಬಹುದು ಅಥವಾ ಬೇರೆ ನಾಯಕರೂ ಸಹ ಆಗಿರಬಹುದು. ಬಿಜೆಪಿ ಹೈಕಮಾಂಡ್​ ತುಂಬಾನೇ ಸ್ಟ್ರಾಂಗ್​ ಆಗಿದೆ. ಅದು ಸೂಕ್ತವಾದ ನಿರ್ಣಯವನ್ನೇ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಇನ್ನು ಶಾಸಕರ ಜೊತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್ ಸಭೆ ವಿಚಾರವಾಗಿಯೂ ಮಾತನಾಡಿದ ಅವ್ರು, ಬೆಳಗಾವಿಯಲ್ಲಿ ಸೋಮವಾರದವರೆಗೂ ಲಾಕ್​ಡೌನ್​ ಮುಂದುವರಿದಿದೆ. ನಾನು ಬೆಂಗಳೂರಿಗೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಒಂದು ಹೈಕಮಾಂಡ್​ ಇದೆ. ಭಿನ್ನಾಭಿಪ್ರಾಯ ಇದ್ದವರು ನೇರವಾಗಿ ಹೈಕಮಾಂಡ್​ ಬಳಿ ಹೋಗಬೇಕು. ಅದನ್ನ ಬಿಟ್ಟು ಒಟ್ಟಾಗಿ ಭಿನ್ನಮತ ವ್ಯಕ್ತಪಡಿಸೋದು ತಪ್ಪು ಎಂಬ ಅಭಿಪ್ರಾಯ ಹೊರಹಾಕಿದ್ರು.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ