Home / Uncategorized / ರಮೇಶ ಜಾರಕಿಹೊಳಿಗೆ ಪರಬಾಲಚಂದ್ರ ಜಾರಕಿಹೊಳಿಭರ್ಜರಿ ಬ್ಯಾಟಿಂಗ್ ಮತ್ತೆ B.S.Y. ಸಂಪುಟ ಸರ್ತಾರಾ ರಮೇಶ್ ಜಾರಕಿಹೊಳಿ…?

ರಮೇಶ ಜಾರಕಿಹೊಳಿಗೆ ಪರಬಾಲಚಂದ್ರ ಜಾರಕಿಹೊಳಿಭರ್ಜರಿ ಬ್ಯಾಟಿಂಗ್ ಮತ್ತೆ B.S.Y. ಸಂಪುಟ ಸರ್ತಾರಾ ರಮೇಶ್ ಜಾರಕಿಹೊಳಿ…?

Spread the love

ಬೆಳಗಾವಿ; ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜತೆಗೆ ಸಿಡಿ ಪ್ರಕರಣ ಬಹಿರಂಗದಿಂದ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ತಂದಿಟ್ಟಿದ್ದರು. ಸಿಡಿ ಪ್ರಕರಣ ತನಿಖೆಯನ್ನು ಎಸ್ ಐಟಿ ತಂಡ ನಡೆಸುತ್ತಿದೆ. ಇತ್ತೀಚೆಗೆ ಪೊಲೀಸರ ವಿಚಾರಣೆ ವೇಳೆ ಸಿಡಿಯಲ್ಲಿ ಕಾಣಿಸಿಕೊಂಡಿ ರುವುದು ನಾನೇ, ಅದು ತಮ್ಮತಿ ಸೆಕ್ಸ್​ ಎಂದು ಒಪ್ಪಿಕೊಂಡಿದ್ದ ರಮೇಶ್ ಜಾರಕಿಹೊಳಿ, ಇದೀಗ ಮತ್ತೆ ಸಿಎಂ ಬಿ ಎಸ್ ಯಡಿಯೂರಪ್ಪ ಸಂಪುಟವನ್ನು ಸೇರಲು ತೆರೆ ಮರೆಯಲ್ಲೇ ಕಸರತ್ತು ಆರಂಭಿಸಿದ್ದಾರೆಎನ್ನಲಾಗು ತ್ತಿದೆ.

Woman's family, Jarkiholi accuse Shivakumar of 'using' her for political ends - The Hindu

ಹಲವು ಹಿರಿಯ ಬಿಜೆಪಿ ನಾಯಕರನ್ನು ಭೇಟಿಯಾಗುವ ಮೂಲಕ ಸಂಪುಟ ಸೇರುವ ಲಾಭಿ ನಡೆಸುತ್ತಿದ್ದಾರೆ. ರಮೇಶ ಜಾರಕಿಹೊಳಿಗೆ ಪರ ಸಹೋದರ ಬಾಲಚಂದ್ರ ಜಾರಕಿಹೊಳಿ ಸಹ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸಿಡಿ ಪ್ರಕರಣ ಸಂಬಂಧ ಇನ್ನೂ ಎಸ್ ಐ ಟಿ ತನಿಖೆ ಮುಂದುವರೆದಿದೆ. ಪ್ರಕರಣ ಆರೋಪಿಗಳು ಇನ್ನು ತಲೆಮರಿಸಿಕೊಂಡಿದ್ದಾರೆ. ಪ್ರಕರಣ ತಾರ್ಕಿಕ ಅಂತ್ಯಕ್ಕೆ ಇನ್ನೂ ಬಂದಿಲ್ಲ

Bengaluru: Congress MLA Ramesh Jarkiholi meets BJP chief Yeddyurappa - Daijiworld.com

 ಈ ನಡುವೆ ರಮೇಶ ಜಾರಕಿಹೊಳಿ ಹಲವು ರಾಜಕೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಕೆಲ ದಿನಗಳಲ್ಲಿ ಮತ್ತೆ ಸಂಪುಟಕ್ಕೆ ಸೇರಿಕೊಳ್ಳುವಂತೆ ಸಿಎಂ ಮೇಲೆ ಪರೋಕ್ಷಕವಾಗಿ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ ಯಾವ ರೀತಿ ಸ್ಪಂಧನೆ ಮಾಡಲಿದ್ದಾರೆ ಎಂಬುದು ಕಾದು ನೋಡಬೇಕು. ರಮೇಶ ಜಾರಕಿಹೊಳಿ ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಭಲ ಜಲಸಂಪನ್ಮೂಲ ಖಾತೆಯನ್ನು ನಿರ್ವಹಣೆ ಮಾಡಿದ್ದರು. ಜಾರಕಿಹೊಳಿ ರಾಜೀನಾಮೆ ನಂತರ ಯಾರಿಗೂ ಖಾತೆಯನ್ನು ಸಿಎಂ ನೀಡಿಲ್ಲ. ಬದಲಾಗಿ ತಮ್ಮ ಬಳಿಯೇ ಜಲಸಂಪನ್ಮೂಲ ಖಾತೆಯನ್ನು ಸಿಎಂ ಉಳಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ ಸಹ ಡಿಸಿಎಂ ಗೋವಿಂದ ಕಾರಜೋಳ ಹೆಗಲಿಗೆ ಹಾಕಲಾಗಿದೆ. ಈ ಬೆಳವಣೆ ಹಿಂದೆ ಸಹ ರಮೇಶ ಜಾರಕಿಹೊಳಿ ಇದ್ದಾರೆ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಓರ್ವ ಡಿಸಿಎಂ ಹಾಗೂ ಮೂರು ಜನ ಸಚಿವರು ಇದ್ದರೂ ಗೋವಿಂದ ಕಾರಜೋಳಗೆ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿದೆ.

ರಮೇಶ ಜಾರಕಿಹೊಳಿ ಮತ್ತೆ ಸಂಪುಟ ಸೇರಲು ಕಸರತ್ತು ಆರಂಭಿಸಿದ ಹಿನ್ನೆಲೆಯಲ್ಲಿ ಹಲವು ಶಾಸಕರು ಹಾಗೂ ಸಚಿವರು ಸಹ ಬೆಂಬಲವಾಗಿ ನಿಂತಿದ್ದಾರೆ. ಜತಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಸಹ ಬೆಂಗಳೂರಿನಲ್ಲಿ ಬಿಡು ಬಿಟ್ಟು ರಮೇಶ ಜಾರಕಿಹೊಳಿ ಪರ ಲಾಭಿಯನ್ನು ಮಾಡುತ್ತಿದ್ದಾರೆ. ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದಿಂದ ಹೆಚ್ಚು ಲಿಡ್ ಬಂದಿದೆ.

ಉಪ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡಿ ಮುಂದೆ ನಿಮಗೆ ಅನಕೂಲ ಮಾಡುವುದಾಗಿ ಸಿಎಂ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ರು. ಸಿಎಂ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತುಕತೆ ವೇಳೆಯಲ್ಲಿ ಭರವಸೆ ನೀಡಿದ್ರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿಯನ್ನು ಮಂತ್ರಿ ಮಾಡಲು ಬಾಲಚಂದ್ರ ಜಾರಕಿಹೊಳಿ ಪ್ರಯತ್ನವನ್ನು ಆರಂಭಿಸಿದ್ದಾರೆ.

 

 


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ