Breaking News

ಪಕ್ಕದಲ್ಲಿ ಫೆರಾರಿ ಹೋದ್ರು ತಲೆಕೆಡಿಸಿಕೊಳ್ಳಲ್ಲ:ಪುನೀತ್ ರಾಜ್‍ಕುಮಾರ್

Spread the love

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳಿಗೆ ‘ಯುವರತ್ನ’ ಸಿನಿಮಾ ತಂಡ ವರಮಹಾಲಕ್ಷ್ಮಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದೆ.

ಈ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಯುವರತ್ನ ಸಿನಿಮಾದ ನಿರ್ದೇಶಕ ಸಂತೋಷ್ ಅನಂದರಾಮ್ ಅವರು, ಅಭಿಮಾನಿಗಳ ಕೋರಿಕೆಗಾಗಿ “ಯುವರತ್ನ” ಪೋಸ್ಟರ್ ವರಮಹಾಲಕ್ಷ್ಮಿಗೆ ದೊಡ್ಮನೆ ಅಭಿಮಾನಿ ಬಳಗಕ್ಕೆ ಇದು ಸಮರ್ಪಣೆ. ಹಬ್ಬದ ಪ್ರಯುಕ್ತ ಸಿನಿಮಾದ ಪೋಸ್ಟರ್ ಜೊತೆಗೆ ಒಂದು ಡೈಲಾಗ್ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.

ಈ ಇಂದು ಹತ್ತು ಗಂಟೆಗೆ ಟ್ವೀಟ್ ಮಾಡಿರುವ ಸಂತೋಷ್ ಅನಂದರಾಮ್ ಅವರು, ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್ ಅಲ್ಲಿ ಅಪ್ಪು ಕಣ್ಣಿಗೆ ಕನ್ನಡಕ ಹಾಕಿಕೊಂಡು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಾನ್ ಯಾವತ್ತು ಬೇರೆಯವರ ರೂಟ್‍ನಲ್ಲಿ ಟ್ರಾವೆಲ್ ಆಗಲ್ಲ, ನಮ್ದೇ ದಾರಿ ನಮ್ದೇ ಸವಾರಿ. ಪಕ್ಕದಲ್ಲಿ ಫೆರಾರಿ ಹೋದ್ರು ತಲೆಕೆಡಿಸಿಕೊಳ್ಳಲ್ಲ ಎಂದು ಡೈಲಾಗ್ ಬರೆಯಲಾಗಿದೆ. ಈ ಪೋಸ್ಟರ್ ಅನ್ನು ಅಪ್ಪು ಕೂಡ ತಮ್ಮ ಟ್ವಿಟ್ಟರ್ ಅಲ್ಲಿ ಹಾಕಿಕೊಂಡಿದ್ದಾರೆ.

ಕೊರೊನಾ ಭೀತಿ ಎದುರಾಗದಿದ್ದಲ್ಲಿ ಏಪ್ರಿಲ್ 3ಕ್ಕೆ ಯುವರತ್ನ ಸಿನಿಮಾ ಬಿಡುಗಡೆಯಾಗುತ್ತಿತ್ತು. ಸಿನಿಮಾ ಬಿಡುಗಡೆ ಕುರಿತು ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಈ ಹಿಂದೆ ಸ್ಪಷ್ಟನೆ ನೀಡಿದ್ದರು. ಬಹುನಿರೀಕ್ಷಿತ ಯುವರತ್ನ ಸಿನಿಮಾ ಮೇ 21ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ನಮ್ಮ ಪವರ್ ಸ್ಟಾರ್ ಸ್ವಾಗತಿಸಲು ಸಜ್ಜಾಗಿ ಎಂದು ಟ್ವೀಟ್ ಮಾಡಿದ್ದರು. ಆದರೆ ಮತ್ತೆ ಲಾಕ್‍ಡೌನ್ ಆದ ಪರಿಣಾಮ ಮುಂದೂಡಲಾಗಿದ್ದು, ಇನ್ನೂ ರಿಲೀಸ್ ದಿನಾಂಕವನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.

`ರಾಜಕುಮಾರ` ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಿಸಿದ ಸಂತೋಷ್ ಆನಂದ್ ರಾಮ್ ಅವರೇ `ಯುವರತ್ನ` ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ಪವರ್ ಸ್ಟಾರ್ ಗೆ ಜೋಡಿಯಾಗಿ ಸಯೇಷ ಸೈಗಲ್ ಕಾಣಿಸಿಕೊಳ್ಳಲಿದ್ದು, ಇದರ ಜೊತೆಗೆ ಸೋನು, ಡಾಲಿ ಧನಂಜಯ್, ವಸಿಷ್ಠ ಸಿಂಹ ಸಿನಿಮಾದಲ್ಲಿ ನಟಿಸಲಿದ್ದಾರೆ.


Spread the love

About Laxminews 24x7

Check Also

ವೀರಭದ್ರ ನಗರದ ದಶಕಗಳ ಸಮಸ್ಯೆಗೆ ಮುಕ್ತಿ: ಹೊಸ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆಸೀಫ್ ಸೇಠ್ ಚಾಲನೆ!

Spread the loveಬೆಳಗಾವಿಯ ವೀರಭದ್ರ ನಗರದ 0 ಕ್ರಾಸ್ ನಿವಾಸಿಗಳ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿದೆ. ಮಳೆಗಾಲದಲ್ಲಿ ರಸ್ತೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ