Breaking News
Home / ಜಿಲ್ಲೆ / ಬೆಂಗಳೂರು / ವಿದ್ಯಾರ್ಥಿನಿಯರ ಜೊತೆ ನೃತ್ಯ ಮಾಡಿದ ರಾಹುಲ್​ ಗಾಂಧಿ

ವಿದ್ಯಾರ್ಥಿನಿಯರ ಜೊತೆ ನೃತ್ಯ ಮಾಡಿದ ರಾಹುಲ್​ ಗಾಂಧಿ

Spread the love

ಕಾಂಗ್ರೆಸ್​ ನಾಯಕ ಹಾಗೂ ಸಂಸದ ರಾಹುಲ್​ ಗಾಂಧಿ ದಿನಕ್ಕೊಂದು ವಿಚಾರಕ್ಕಾಗಿ ಟ್ರೋಲ್​ ಆಗ್ತಾನೇ ಇರ್ತಾರೆ.

50 ವರ್ಷದ ರಾಹುಲ್​ ಗಾಂಧಿ ಮೀನುಗಾರರ ಜೊತೆ ಈಜಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿತ್ತು. ಇದಾದ ಬಳಿಕ ಅವರು ಟೀ ಶರ್ಟ್​ ಧರಿಸಿ ಸಮುದ್ರದಲ್ಲಿ ಈಜಾಡುತ್ತಿರುವ ಫೋಟೋ ಕೂಡ ಸುದ್ದಿ ಮಾಡಿತ್ತು.

ಇದೀಗ ರಾಹುಲ್​ ಗಾಂಧಿಯ ಮತ್ತೊಂದು ವಿಡಿಯೋ ಸಾಕಷ್ಟು ಸುದ್ದಿಯಲ್ಲಿದೆ. ಇದರಲ್ಲಿ ತಮಿಳುನಾಡಿನ ಮುಲ್ಗಮುಡುಬನ್​​ನ ಸೇಂಟ್​ ಜೋಸೆಫ್​ ಮ್ಯಾಟ್ರಿಕ್​ ಶಾಲೆಯ ವಿದ್ಯಾರ್ಥಿಗಳ ಜೊತೆ ಸೇರಿ ಪುಶಪ್ಸ್ ಮಾಡಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದು ಮಾತ್ರವಲ್ಲದೇ ಇದೇ ಶಾಲೆಯ ವಿದ್ಯಾರ್ಥಿನಿಯರ ಜೊತೆ ನೃತ್ಯ ಮಾಡುವ ವಿಡಿಯೋ ಕೂಡ ಸಾಕಷ್ಟು ಟ್ರೆಂಡಿಂಗ್​ನಲ್ಲಿದೆ. ಈ ವಿಡಿಯೋದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಕೂಡ ರಾಹುಲ್​ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

Spread the love ಚಿಕ್ಕಬಳ್ಳಾಪುರ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ, ಹೈನುಗಾರಿಕೆ, ದ್ರಾಕ್ಷಿ ಮತ್ತು ತರಕಾರಿ ಉತ್ಪಾದನೆಯಲ್ಲಿ ಅಗ್ರಸ್ಥಾನ ಹೊಂದಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ