Home / Uncategorized / ವಿದ್ಯಾರ್ಥಿಗಳು ಬಸ್‌ಪಾಸ್‌ ಇದ್ದರೂ ಹಣ ನೀಡಿ ಟಿಕೆಟ್‌ ಖರೀದಿಸಬೇಕಾದ ಪರಿಸ್ಥಿತಿ

ವಿದ್ಯಾರ್ಥಿಗಳು ಬಸ್‌ಪಾಸ್‌ ಇದ್ದರೂ ಹಣ ನೀಡಿ ಟಿಕೆಟ್‌ ಖರೀದಿಸಬೇಕಾದ ಪರಿಸ್ಥಿತಿ

Spread the love

ಚಿಂತಾಮಣಿ: ಪ್ರಸಿದ್ಧ ವಾಣಿಜ್ಯ ಮತ್ತು ಶೈಕ್ಷಣಿಕ ಕ್ಷೇತ್ರ ಚಿಂತಾಮಣಿಯ ಗ್ರಾಮೀಣ ಮತ್ತು ಪಟ್ಟಣ ವಿದ್ಯಾರ್ಥಿಗಳು ಬಸ್‌ಪಾಸ್‌ ಇದ್ದರೂ ಹಣ ನೀಡಿ ಟಿಕೆಟ್‌ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯಿಂದ ತಾಲೂಕಿನ ಬಸ್‌ ನಿಲ್ದಾಣಕ್ಕೆಬರುವ ಬಸ್‌ಗಳಲ್ಲಿ ವಿದ್ಯಾರ್ಥಿಗಳ ಬಳಿ ಪಾಸ್‌ ಇದ್ದರೂ ಹಣ ಪಡೆದು ಟಿಕೆಟ್‌ ನೀಡಲಾಗುತ್ತಿದೆ.

ವಿದ್ಯಾರ್ಥಿಗಳ ಅಳಲೇನು?: ತಾಲೂಕಿನಿಂದ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರಿಗೆವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ತೆರಳುತ್ತಾರೆ.ಆದರೆ, ಬಸ್‌ ನಿಲ್ದಾಣದಲ್ಲಿ ಸ್ಥಳೀಯ ಡಿಪೋಗೆಸೇರಿದ ಬಸ್‌ಗಳ ಕೊರತೆ ಉಂಟಾಗುತ್ತಿದೆ. ಇದರಿಂ ದಾಗಿ ಬೇರೆ ಜಿಲ್ಲೆಯಿಂದ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಪಾಸ್‌ ಇದ್ದರೂ ಟಿಕೆಟ್‌ ಖರೀದಿಸಬೇಕಾಗಿದೆ.ಚಿಂತಾಮಣಿ ಸಾರಿಗೆ ಘಟಕದಿಂದ ಬಸ್‌ಗಳು 129 ಮಾರ್ಗಗಳಿಗೆ ಸಂಚರಿಸುತ್ತವೆ. ಅದು ಅಲ್ಲದೆ ಹೊರ ಜಿಲ್ಲೆ, ತಾಲೂಕು ವಿಭಾಗದ ಬಸ್‌ ಸಹ ಚಿಂತಾಮಣಿ ನಗರ ನಿಲ್ದಾಣಕ್ಕೆ ಬರುತ್ತವೆ. ಆದರೂ, ಬೆಳಗ್ಗೆ 8 ಗಂಟೆಯಿಂದ ಮೇಲ್ಪಟ್ಟು 10 ಗಂಟೆ ಒಳಗೆಸಮರ್ಪಕವಾಗಿ ಬಸ್‌ ವ್ಯವಸ್ಥೆ ಇಲ್ಲದಿರುವುದು ವಿದ್ಯಾಥಿಗಳಿಗೆ ತುಂಬಾ ತೊಂದರೆಯಾಗಿದೆ.

ಬಸ್‌ ಸಂಚಾರ ಕಡಿಮೆ: ಬೆಂಗಳೂರಿನ ಮಾರ್ಗದಲ್ಲಿ ಪ್ರತಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಚಿಂತಾಮಣಿಯಿಂದ ಹೊರಗಡೆ ಸಂಚರಿಸುವರು ಮತ್ತು ಹೊರಗಿನಿಂದ ಚಿಂತಾಮಣಿ ನಗರಕ್ಕೆ ಆಗಮಿಸುವ ವಿದ್ಯಾರ್ಥಿ, ನೌಕರರ ಸಂಖ್ಯೆಸಾವಿರಕ್ಕೂ ಹೆಚ್ಚಿದೆ. ಆದರೆ, ವಿದ್ಯಾರ್ಥಿಗಳು ಸರ್ಕಾರಿ ನೌಕರರು ಬೆಳಗ್ಗೆ ಕಚೇರಿ ಮತ್ತು ಶಾಲಾ ಕಾಲೇಜುಗಳಿಗೆ ತೆರಳುವ ಸಮಯ ಒಂದೇ ಆಗಿದೆ. ಬೆಳಗ್ಗೆ 8-10 ಗಂಟೆ ವೇಳೆ ಬಸ್‌ ಸಂಚಾರ ಹೆಚ್ಚಿರಬೇಕು. ಆದರೆ, ಈ ಸಮಯದಲ್ಲೇ ಬಸ್‌ಗಳ ಸಂಚಾರ ತೀರಾ ಕಡಿಮೆ ಇರುತ್ತದೆ.

ಪಾಸ್‌ ಪರಿಗಣನೆ ಇಲ್ಲ: ಇನ್ನು ಚಿಂತಾಮಣಿಯಿಂದ ಚಿಕ್ಕಬಳ್ಳಾಪುರಕ್ಕೆ, ಬೆಂಗಳೂರು ಮತ್ತಿತರ ಕಡೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಪಾಸ್‌ ನಿರ್ವಹಣೆ ತುಂಬಕಷ್ಟವಾಗಿದೆ. ಚಿಕ್ಕಬಳ್ಳಾಪುರಕ್ಕೆ ಬೆಳಗೆ 7.20-30ರೊಳಗೆ ಚಿಂತಾಮಣಿ ನಿಲ್ದಾಣದಿಂದ ತೆರಳುವ ಶಿರಾ ಬಸ್‌ ವಿದ್ಯಾರ್ಥಿಗಳ ಪಾಸ್‌ ಪರಿಗಣನೆ ಮಾಡದೆ ಹಣ ಪಡೆದು ಟಿಕೆಟ್‌ ಪಡೆಯುತ್ತಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನೇತಾಡಿಕೊಂಡು ಪ್ರಯಾಣ: ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು ಡೋರ್‌ನಲ್ಲಿ ನಿಂತು ಪ್ರಯಾಣಿಸುತ್ತಿರುವ ದೃಶ್ಯಗಳನ್ನು ಕಂಡು ಸಾರ್ವಜನಿಕರು ಸಾರಿಗೆ ಅಧಿಕಾರಿಗಳ ವಿರುದ್ಧಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ.

ಎಲ್ಲಾ ಬಸ್‌ಗಳಲ್ಲಿ ಪಾಸ್‌ ಪರಿಗಣನೆ: ಅಪ್ಪಿರೆಡ್ಡಿ :

ಎಲ್ಲಾ ಬಸ್‌ಗಳಲ್ಲೂ ವಿದ್ಯಾರ್ಥಿ ಪಾಸ್‌ ಪರಿಗಣನೆಗೆ ತೆಗೆದುಕೊಳ್ಳಬೇಕು. ಈ ಹಿಂದೆ ಕೋವಿಡ್ ದಿಂದ ಬಸ್‌ಗಳ ಸಂಖ್ಯೆ ಕಡಿಮೆ ಇತ್ತು. ಆದರೆ, ಈಗ ಎಲ್ಲವೂ ಸರಿ ಹೋಗಿವೆ. ಚಾಲಕರ ಕೊರತೆ ಇದ್ದಾಗ ಮಾತ್ರ ಬಸ್‌ನ ಕೊರತೆ ಕಂಡು ಬಂದಿದೆ. ಅಷ್ಟೇ ಎಲ್ಲಾ ಮಾರ್ಗಗಳಿಗೂ ಬಸ್‌ ವ್ಯವಸ್ಥೆ ಇದೆ. ಸಮಸ್ಯೆ ಇರುವ ಕಡೆ ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಚಿಂತಾಮಣಿ ನಗರದ ಸಾರಿಗೆ ಘಟಕದ ವ್ಯವಸ್ಥಾಪಕ ಅಪ್ಪಿರೆಡ್ಡಿ ಮಾಹಿತಿ ನೀಡಿದರು.

ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಪಾಸ್‌ ವಿತರಣೆ ಮಾಡಿದ್ದಾರೆ. ಆದರೆಕೆಲ ಬಸ್‌ಗಳಲ್ಲಿ ಪಾಸ್‌ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ. ಸಮಯಕ್ಕೆ ಸರಿಯಾಗಿ ತರಗತಿ ಗಳಿಗೆ ತೆರಳಲು ಬಸ್‌ಗಳಿಲ್ಲ. ಕೂಡಲೇ ಅಧಿಕಾರಿಗಳು ಗಮನಹರಿಸಬೇಕು. –ರಾಣಿ, ವಿದ್ಯಾರ್ಥಿನಿ


Spread the love

About Laxminews 24x7

Check Also

ಮಹಿಳೆ ಮೇಲೆ ಹಲ್ಲೆ ಪ್ರಕರಣ ; ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಸಿಹಿ ತಿನ್ನಿಸಿ ಸ್ವಾಗತ

Spread the loveಬೆಳಗಾವಿ : ಕಳೆದ ಡಿಸೆಂಬರ್ ನಲ್ಲಿ ಬೆಳಗಾವಿ ಹೊರವಲಯದ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ