Breaking News
Home / Uncategorized / ಪೌರತ್ವ ತಿದ್ದುಪಡಿ ನಿಯಮಗಳು ಜುಲೈ ಒಳಗೆ ಸಿದ್ಧವಾಗಲಿವೆ: ಕೇಂದ್ರ ಸರ್ಕಾರ

ಪೌರತ್ವ ತಿದ್ದುಪಡಿ ನಿಯಮಗಳು ಜುಲೈ ಒಳಗೆ ಸಿದ್ಧವಾಗಲಿವೆ: ಕೇಂದ್ರ ಸರ್ಕಾರ

Spread the love

ನವದೆಹಲಿ,ಫೆಬ್ರವರಿ 02: ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿನ ನಿಯಮಗಳು ಜುಲೈ ಒಳಗೆ ಸಿದ್ಧವಾಗಲಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ಬಾಂಗ್ಲಾದೇಶ,ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮೇತರ ಅಲ್ಪ ಸಂಖ್ಯಾತರಿಗೆ ಹಿಂದೂ, ಸಿಖ್,ಜೈನ,ಬೌದ್ಧ,ಪಾರ್ಸಿ ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡಲು ಅನುಕೂಲವಾಗುವ ಸಿಎಎಯನ್ನು 2019ರಡಿಸೆಂಬರ್‌ನಲ್ಲಿ ಸಂಸತ್ ಅಂಗೀಕರಿಸಿತ್ತು.

2019ರ ನಾಗರಿಕ ಕಾಯ್ದೆಯನ್ನು 2019ರ ಡಿಸೆಂಬರ್ ರಂದು ಅಧಿಸೂಚಿಸಲಾಗಿದೆ. 2020ರ ಜನವರಿ 10ರಿಂದ ಕಾಯ್ದೆ ಜಾರಿಗೆ ಬಂದಿದೆ.ನಿಯಮಗಳನ್ನು ರೂಪಿಸಲು ಲೋಕಸಭೆ ಮತ್ತು ರಾಜ್ಯಸಭೆಯ ಸಮಿತಿಗಳು ಕ್ರಮವಾಗಿ ಏಪ್ರಿಲ್ 9 ಮತ್ತು ಜುಲೈ 9ರವರೆಗೆ ಸಮಯ ಪಡೆದಿವೆ ಎಂದು ತಿಳಿಸಿದ್ದಾರೆ.

ಗೃಹ ಸಚಿವಾಲಯವು ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಮಾತನಾಡಿದ್ದು, ದೇಶವ್ಯಾಪಿ ನೋಂದಣಿ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿದೆ.

ಎನ್‌ಆರ್‌ಸಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅಸ್ಸಾಂನಲ್ಲಿ ಭಾರತೀಯ ಪೌರರಲ್ಲದವರನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗಿತ್ತು. ಇದು ದೇಶವ್ಯಾಪಿ ವಿಸ್ತರಣೆ ಆಗಬಹುದು ಎಂಬ ಆತಂಕವೂ ಕೂಡ ಇತ್ತು.


Spread the love

About Laxminews 24x7

Check Also

ಚುನಾವಣೆ ಚೆಕಿಂಗ್; ದಾಖಲೆ ಇಲ್ಲದ 20 ಲಕ್ಷಕ್ಕೂ ಅಧಿಕ ವಶ.!

Spread the love ಚಿತ್ರದುರ್ಗ; ಚಿತ್ರದುರ್ಗದಲ್ಲಿ ವಾಹನ ಒಂದರಲ್ಲಿ ವ್ಯಕ್ತಿಯೊಬ್ಬರು ದಾಖಲೆ ಇಲ್ಲದೆ ಸುಮಾರು 20 ಲಕ್ಷಕ್ಕೂ ಅಧಿಕ ಹಣವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ