Breaking News

ಮತ್ತೊಬ್ಬ ಹುಡುಗಿ ಮೇಲೆ ಕ್ರಶ್ ಆಗಿದೆ ಎಂದಿದ್ದಕ್ಕೆ 2ನೇ ತರಗತಿ ವಿದ್ಯಾರ್ಥಿನಿಯನ್ನು ಉಚ್ಚಾಟಿಸಿದ ಶಾಲೆ

Spread the love

ತನ್ನ ಸಹಪಾಠಿಯ ಮೇಲೆ ಕ್ರಶ್ ಆಗಿರುವುದಾಗಿ ಹೇಳಿಕೊಂಡ 8 ವರ್ಷದ ಬಾಲಕಿಯೊಬ್ಬಳನ್ನು ಆಕೆಯ ಶಾಲೆ ಉಚ್ಛಾಟಿಸಿದೆ.

ಶೋಲ್ ಶೆಲ್ಟನ್ನ ಹೆಸರಿನ ಈ ಬಾಲಕಿಯ ತಾಯಿ ಡೆಲೇನ್ ಮಾತನಾಡಿ, ತನ್ನ ಸ್ನೇಹಿತೆಯ ಬಗ್ಗೆ ತನಗಿದ್ದ ಭಾವನೆಗಳ ಬಗ್ಗೆ ಪ್ರಾಮಾಣಿಕವಾಗಿ ಹೇಳಿಕೊಂಡ ಬಳಿಕ ಆಕೆಯನ್ನು ಶಾಲೆಯಿಂದ ಉಚ್ಛಾಟನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

‌ಒಕ್ಲಾಹಾಮಾದ ಒವಸ್ಸೋದಲ್ಲಿರುವ ಕ್ರಿಜಾಅಯ್ಸ್‌ ಕ್ರಿಶ್ಚಿಯನ್ ಸ್ಕೂಲ್‌ನಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ಶೋಲ್ ಇದೇ ಕಾರಣದಿಂದ ಅಂದಿನ ದಿನದ ತರಗತಿಗಳನ್ನು ಮಿಸ್ ಮಾಡಿಕೊಂಡಿದ್ದು, ಪ್ರಾಂಶುಪಾಲರ ಚೇಂಬರ್‌ನಲ್ಲಿ ಕಾಲ ಕಳೆಯಬೇಕಾಗಿ ಬಂದಿತ್ತು ಎಂದು ಆಕೆಯ ತಾಯಿ ತಿಳಿಸಿದ್ದಾರೆ.

“ಮಹಿಳೆಯರು ಪುರುಷರೊಂದಿಗೆ ಸೇರುವ ಮೂಲಕ ಮಾತ್ರವೇ ಮಕ್ಕಳನ್ನು ಮಾಡಿಕೊಳ್ಳಬಹುದಾಗಿದೆ ಎಂದು ಶಾಲೆಯ ಉಪ ಪ್ರಾಂಶುಪಾಲರು ನನಗೆ ಹೇಳಿದ್ದರು. ಹುಡುಗಿಯರು ಹುಡುಗಿಯರನ್ನು ಇಷ್ಟ ಪಡುವ ವಿಚಾರ ನಿಮಗೆ ಹೇಗೆ ಅನಿಸುತ್ತದೆ ಎಂದು ಕೇಳಿದ್ದಕ್ಕೆ, ನನಗೆ ಈ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದೆ” ಎಂದು ಡೆಲೇನ್ ಹೇಳಿದ್ದಾರೆ.


Spread the love

About Laxminews 24x7

Check Also

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

Spread the love ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ ಗೋಕಾಕ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ