Breaking News

ಗದಗ ಜಿಲ್ಲೆಯಲ್ಲಿ ವಿಚಿತ್ರ ರೋಗ ಬಾಧೆ, ಕಾಯಿಲೆಯಿಂದ ಮಲಗಿರುವ ರೋಗಿಗಳು; ಆತಂಕಗೊಂಡ ಗ್ರಾಮಸ್ಥರು

Spread the love

ಗದಗ: ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ನಿಗೂಢವಾದ ಕಾಯಿಲೆ ಇಲ್ಲಿನ ಜನರ ನಿದ್ದೆಗೆಡಿಸಿದೆ. ಸುಮಾರು 200ಕ್ಕೂ ಹೆಚ್ಚು ಜನರು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಂದೊಂದು ಮನೆಯಲ್ಲಿ ಇಬ್ಬರು, ಮೂವರು ಹಾಸಿಗೆ ಹಿಡಿದಿದ್ದಾರೆ. ಕೈಕಾಲು ಬೇನೆ, ತಲೆ ಸುತ್ತು, ಪ್ರಜ್ಞಾಹೀನತೆ, ಕಣ್ಣು ಉರಿ, ಜ್ವರ ನೆಗಡಿ, ಹೊಟ್ಟೆಯಲ್ಲಿ ಸಂಕಟವಾಗುವುದು ಹೀಗೆ ನಾನಾ ರೀತಿಯ ಸಮಸ್ಯೆಯಿಂದ ಜನರು ಬಳಲುತ್ತಿದ್ದಾರೆ. ಒಂದೊಂದು ಮನೆಯಲ್ಲಿ 10 ರಿಂದ 12 ಜನ ಹಾಸಿಗೆ ಹಿಡಿದಿದ್ದಾರಂತೆ. ದಿನದಿಂದ ದಿನಕ್ಕೆ ಈ ಕಾಯಿಲೆ ಉಲ್ಬಣಗೊಂಡಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಇದರಿಂದ ಕೆಲವರು ಊರು ಬಿಟ್ಟು ಜಮೀನಿನಲ್ಲಿ ಉಳಿದುಕೊಂಡಿದ್ದಾರಂತೆ. ಇನ್ನು ಮುಖ್ಯವಾಗಿ ಈ ಘಟನೆಗೆ ಕಾರಣ ಏನೂ ಅನ್ನೋದು ಇನ್ನೂ ಗೊತ್ತಾಗಿಲ್ಲ.

ಮುಖ್ಯವಾಗಿ ಈ ಗ್ರಾಮ ನೈರ್ಮಲ್ಯದ ಬಗ್ಗೆ ಹೆಚ್ಚು ಒತ್ತು ನೀಡಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಎಲ್ಲೆಂದರಲ್ಲಿ ಕೊಳಚೆ ಇರೋದ್ರಿಂದ ರೋಗ ಹರಡುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ ಅಲ್ಲಿ ಸಹ ಸ್ವಚ್ಛತೆ ಕಾಪಾಡಿಲ್ಲ. ಹೀಗಾಗಿ ಜನ ನಲ್ಲಿ ನೀರು ಕುಡಿಯುತ್ತಿದ್ದಾರೆ. ಅದು ಒಮ್ಮೆ ಬೋರ್ವೆಲ್ ನೀರು,  ಇನ್ನೊಮ್ಮೆ ಹೊಳೆಯಿಂದ ಬರುವ ನೀರನ್ನು ನಲ್ಲಿ ಮೂಲಕ ಬಿಡಲಾಗ್ತಿದೆಯಂತೆ. ಹೀಗಾಗಿ ಇದೂ ಕಾರಣ ಇರಬಹುದು ಅಂತ ಜನ ಹೇಳ್ತಿದ್ದಾರೆ. ಇನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಇಂದು ಗ್ರಾಮಕ್ಕೆ ಭೇಟಿ ನೀಡಿ ಜನರ ರಕ್ತ ತಪಾಸಣೆಗೆ ಮುಂದಾಗಿದ್ದಾರೆ. ಹಾಗೂ ಅವರ ಗಟ್ಟಲಿನ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಖಚಿತವಾದ ಮಾಹಿತಿ ಲಭ್ಯವಾಗಲಿದೆ. ಈಗಾಗಲೇ ನಮ್ಮ ವೈದ್ಯಕೀಯ ಸಿಬ್ಬಂದಿಗಳು ತಪಾಸಣೆ ಮುಂದೆವರೆಸಿದ್ದಾರೆ.‌ ಯಾರು ಭಯ ಪಡುವ ಅಗತ್ಯ ಇಲ್ಲಾ ಅಂತಾ ಹೇಳ್ತಾಯಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ