ಬೆಂಗಳೂರು: “ನನ್ನ ದೃಷ್ಟಿಯಲ್ಲಿ ಯಾವುದೇ ಗೊಂದಲ ಇರಬಾರದು. ಗೊಂದಲಗಳಿಂದ ಆಡಳಿತದ ಮೇಲೆ ಪರಿಣಾಮ ಉಂಟಾಗುತ್ತದೆ” ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಇಂದು (ಸೋಮವಾರ) ಮಾಧ್ಯಮದವರ ಜೊತೆ ಮಾತನಾಡಿದ ಅವರು, “ಅವರು ಹೇಳಿದ ಮೇಲೆ ಗೌರವ ಕೊಡಬೇಕು. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಯಾವ ಸೂಚನೆ ಕೊಡುತ್ತಾರೆ ಎಂದು ನನಗೆ ಗೊತ್ತಿಲ್ಲ. ಇಲ್ಲೇ ಗೊಂದಲ ಬಗೆಹರಿಸಿಕೊಳ್ಳಿ ಅಂದಿದ್ದಾರೆ. ಹಾಗಾಗಿ, ಇಲ್ಲಿಯೇ ಗೊಂದಲ ಬಗೆಹರಿಸಿಕೊಳ್ಳಬೇಕು” ಎಂದು ಸಹಮತ ವ್ಯಕ್ತಪಡಿಸಿದರು.
“ನನ್ನ ದೃಷ್ಟಿಯಲ್ಲಿ ಗೊಂದಲ ಇರಬಾರದು, ಗೊಂದಲವಿದ್ದರೆ ಬಗೆಹರಿಸಿಕೊಳ್ಳಬೇಕು. ಉತ್ತಮ ಆಡಳಿತ ಕೊಡಬೇಕು. ಗೊಂದಲವು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಅಧಿಕಾರಿಗಳಿಗೂ ಸಂದೇಶ ಹೋಗಬೇಕು” ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ ವಿಚಾರವಾಗಿ ಮಾತನಾಡಿ, “ಇದೇ 27ರಂದು ಡಿಡಬ್ಲ್ಯೂಸಿ ಸಭೆ ಇದೆ. ಅದಕ್ಕಾಗಿ ಸಿಎಂ, ಡಿಸಿಎಂ ದೆಹಲಿಗೆ ಹೋಗುತ್ತಾರೆ. ಆ ವೇಳೆ ಹೈಕಮಾಂಡ್ ಭೇಟಿ ಮಾಡಬಹುದು. ಅದರಲ್ಲಿ ವಿಶೇಷವೇನೂ ಇಲ್ಲ” ಎಂದು ತಿಳಿಸಿದರು
Laxmi News 24×7