ರಾಜಕೀಯ ಇಚ್ಛಾಶಕ್ತಿಯ ವ್ಯಕ್ತಿತ್ವ.
ಗುರುಮಠಕಲ್ ಶಾಸಕರಾದ ಶ್ರೀ ಶರಣಗೌಡ ಕಂದಕೂರ ಅವರು ರಾಜ್ಯ ಸರ್ಕಾರದ ಬೆಳಗಾವಿಯ ಚಳಿಗಾಲದ ಅಧಿವೇಶನದ ಸದನದಲ್ಲಿ ಸರ್ಕಾರದ ಆಡಳಿತದಲ್ಲಿನ ಸೂಕ್ಷ್ಮತೆಯ ವಿಚಾರವನ್ನು ಉತ್ತರ ಕರ್ನಾಟಕದ ಪ್ರತಿಯೊಂದು ಕ್ಷೇತ್ರಕ್ಕೂ ಅನ್ವಯಿಸುವ ರೀತಿಯಲ್ಲಿ ಸೇರಿದಂತೆ ಅವರ ಗುರುಮಠಕಲ್ ಕ್ಷೇತ್ರದ ಪ್ರತಿಯೊಂದು ಇಲಾಖೆಯ ಆಡಳಿತದ ನ್ಯೂನತೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
ಜನರ ಬದುಕಿನ ಪರವಾಗಿ ನಿಲ್ಲಲು ನಮ್ಮನು ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ ಆ ಜನರ ರುಣ ತೀರಿಸಲು ನಮ್ಮ ಕ್ಷೇತ್ರದ ಪ್ರಗತಿಗೆ ಸರ್ಕಾರ ಅನುದಾನ ಕೊಡಬೇಕು ಈ ವಿಚಾರದಲ್ಲಿನ ಅವರ ವಾಕ್ಚಾತುರ್ಯತೆಗೆ ಸದನವು ಮೌನಕ್ಕೆ ಜಾರಿತು.
ಶರಣಗೌಡ ಕಂದಕೂರ ಅವರಲ್ಲಿನ ಜ್ಞಾನದ ಮಾಹಿತಿಗಳು ಸೇರಿದಂತೆ ಸಾಮಾಜಿಕ ಕಾರ್ಯಕ್ಷಮತೆ ವಿಚಾರಗಳನ್ನು ಅವರು ವಿವರಿಸುವ ಪರಿ ಗಮನಿಸಿದ ನನಗೆ ರಾಜಕಾರಣದ ನೀತಿಗೆ ತಕ್ಕ ನಾಯಕ ಎಂಬ ವಿಚಾರದಲ್ಲಿ ಹೆಮ್ಮೆಪಟ್ಟೆ . ಇತ್ತೀಚಿನ ರಾಜಕಾರಣದಲ್ಲಿ ಗೆಲುವಿನ ಮಾನದಂಡಕ್ಕೆ ಜನಪ್ರತಿನಿಧಿಗಳು ಮಹತ್ವವನ್ನು ನೀಡುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಾಮಾಜಿಕ ಇಚ್ಚಾಶಕ್ತಿಯ ಬಗ್ಗೆ ಕ್ಷೇತ್ರದ ಜನತೆ ಸೇರಿದಂತೆ ರಾಜಕೀಯ ಪಕ್ಷಗಳು ಮಹತ್ವವನ್ನು ನೀಡುತ್ತಿಲ್ಲ.
ಈ ಬಹು ಮುಖ್ಯ ವಿಚಾರದಿಂದಲ್ಲೇ ರಾಜಕೀಯ ಎಂಬ ಸಾಮಾಜಿಕ ಕ್ಷೇತ್ರ ವ್ಯಾಪಾರೀಕರಣದ ಕಡೆ ಸಾಗುತ್ತಿದೆ. ಒಂದು ಪುಟ್ಟು ಮತದಾರರಿಗೆ ಕೊಟ್ಟು ನೂರು ಪಟ್ಟು ಜನತೆಯ ತೆರಿಗೆಯನ್ನು ಅನುದಾನದ ರೂಪದಲ್ಲಿ ಪಡೆಯಲು ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ನಾನಾ ರೀತಿಯ ರೂಪುರೇಷೆಗಳನ್ನು ಸಿದ್ಧಪಡಿಸುತ್ತಾರೆ. ಇದುವೇ ಈ ಕಾಲಘಟ್ಟದ ಪ್ರಭುತ್ವದ ರಾಜಕೀಯ ನೀತಿಯಾಗಿದೆ.
ಸರ್ಕಾರದ ಆಡಳಿತದಲ್ಲಿ ಪ್ರಗತಿಗೆ ಕಿಮ್ಮತ್ತಿಲ್ಲ ಜೊತೆಗೆ ಈ ಅಧಿವೇಶನದಲ್ಲಿ ಪ್ರಗತಿಪರ ಚರ್ಚೆಗಳು ನಡೆಯುತ್ತಿಲ ಈ ಕಾರಣಕ್ಕೆ ಶರಣಗೌಡ ಕಂದಕೂರ ಅವರು ಈ ಅಧಿವೇಶನದ ಯಾವುದೇ ಭತ್ಯೆ ಊಟ ವಸತಿ ಸೌಲಭ್ಯವನ್ನು ಪಡೆಯುತ್ತಿಲ್ಲ. ಇದು ಒಂದು ಉತ್ತಮ ಸಂದೇಶ.
Laxmi News 24×7