ಉತ್ತರ ಕರ್ನಾಟಕದೆಡೆ ಸರ್ಕಾರದ ನಿರ್ಲಕ್ಷ್ಯತನ ಖಂಡಿಸಿ 1 ರಿಂದ ಆಮರಣ ಉಪವಾಸ ಸತ್ಯಾಗ್ರಹ; ಗೋಲಶೆಟ್ಟಿ
ರಾಜ್ಯ ಸರಕಾರದ ಉತ್ತರ ಕರ್ನಾಟಕದ ನಿರ್ಲಕ್ಷ್ಯತನದ ವಿರುದ್ಧ ಬರುವ ಜ.1 ರಿಂದ ಆಮರಣ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನಾಗೇಶ ಗೊಲಶೆಟ್ಟಿ ತಿಳಿಸಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚಳಿಗಾಲದ ಅಧಿವೇಶನದಲ್ಲಿ ಅರ್ಧ ಭಾಗ ಅಧಿವೇಶನ ಮುಗಿದರೂ ಸಹ ಬೆಳಗಾವಿ ಎರಡನೇ ರಾಜ್ಯಧಾನಿ ಘೋಷಣೆ ಮಾಡಬೇಕು, ಸುವರ್ಣ ವಿಧಾನಸೌಧಕ್ಕೆ ಬೆಂಗಳೂರಿನಲ್ಲಿರುವ ಸೆಕ್ರೆಟರಿ ಮಟ್ಟದ ಸರಕಾರಿ ಕಚೇರಿ ಸ್ಥಳಾಂತರ ಹಾಗೂ ಕಿತ್ತೂರು ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕು ಆಮರಣ ಉಪವಾಸ ಕೈಗೊಳ್ಳಲಿದ್ದೇನೆ ಎಂದರು.
ನಮ್ಮ ಬೇಡಿಕೆ ಈಡೇರಿಸುವ ವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಸದನದಲ್ಲಿ ಬೆರಳೆಣಿಕೆಯಷ್ಟು ಉತ್ತರ ಕರ್ನಾಟಕದ ಶಾಸಕರನ್ನು ಹೊರತು ಪಡಿಸಿದರೆ ಯಾರೂ ಈ ಭಾಗದ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Laxmi News 24×7