Breaking News

ಶಿವಶಂಕರಪ್ಪರಿಗೆ ಮುಂದುವರಿದ ಚಿಕಿತ್ಸೆ, ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್​: ವದಂತಿ ಬಗ್ಗೆ ಪುತ್ರ ಆಕ್ರೋಶ

Spread the love

ದಾವಣಗೆರೆ: ಹಿರಿಯ ಶಾಸಕ ಹಾಗೂ ಅಖಿಲ ಭಾರತೀಯ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ಅನಾರೋಗ್ಯ ವಿಚಾರವಾಗಿ‌ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಶಾಮನೂರು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿಡಿಗೇಡಿಗಳು ಶಾಮನೂರು ಶಿವಶಂಕರಪ್ಪ ಪೋಟೋ ಹಾಕಿ ಓಂ ಶಾಂತಿ ಎಂದು ಪೋಸ್ಟ್ ಮಾಡಿರುವುದು ಕಂಡು ಬಂದಿದೆ.‌ ಇದರ ಬಗ್ಗೆ ಶಾಮನೂರು ಶಿವಶಂಕರಪ್ಪ ದ್ವಿತೀಯ ಪುತ್ರ ಎಸ್​.ಎಸ್. ಗಣೇಶ್ ಅವರು ಖಂಡಿಸಿ ಶಾಮನೂರು ಶಿವಶಂಕರಪ್ಪ ಅವರ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.‌

ದಾವಣಗೆರೆಯಲ್ಲಿ ಮಾತನಾಡಿದ ಅವರು, “ಅಪ್ಪಾಜಿಯವರು ಆರೋಗ್ಯವಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ದಾವಣಗೆರೆಗೆ ಬರಲಿದ್ದಾರೆ. ಉಸಿರಾಟದ ತೊಂದರೆಯಿಂದ ಅವರನ್ನು ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಎಲ್ಲಾ ರಾಜಕೀಯ ಗಣ್ಯರು, ಸ್ವಾಮೀಜಿಗಳು ಆಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದ್ದಾರೆ. ಎಲ್ಲಾ ವದಂತಿಗಳು ಸುಳ್ಳು ಯಾರು ನಂಬಬೇಡಿ ಆತಂಕ ಪಡಬೇಡಿ. ಅಪ್ಪಾಜಿಯಾವರು ಅರೋಗ್ಯದಲ್ಲಿ‌ ಚೇತರಿಸಿಕೊಂಡು ದಾವಣಗೆರೆಗೆ ಬರುತ್ತಾರೆ. ಅವರ ಅರೋಗ್ಯ ಚೇತರಿಕೆಗೆ 15 ದಿನಗಳ ಕಾಲ ಬೇಕಿದೆ. ಶಾಮನೂರು ಅವರು ಮತ್ತೊಂದು ಚುನಾವಣಾ ಮಾಡುತ್ತಾರೆ ಅಷ್ಟು ಆರೋಗ್ಯವಾಗಿ ಬರುತ್ತಾರೆ. ಅಭಿಮಾನಿಗಳು ಅಪ್ಪಾಜಿಯವರ ಆರೋಗ್ಯ ಸುಧಾರಣೆಗೆ ಪೂಜೆ ಸಲ್ಲಿಸುತ್ತಿದ್ದಾರೆ” ಎಂದರು.

ಅವರ ಬಗೆಗಿನ ಎಲ್ಲಾ ವದಂತಿಗಳು ಸುಳ್ಳು. ಯಾರು ಆತಂಕ ಪಡುವುದು ಬೇಕಾಗಿಲ್ಲ. ಇನ್ನು ಸ್ವಲ್ಪ ದಿನ ಹಿಡಿಯಲಿದೆ. ಎಲ್ಲಾ ಸರಿಯಾದ ಮೇಲೆ ನಾವೇ ಕರೆದುಕೊಂಡು ಬರುತ್ತೇವೆ. 10 ಅಥವಾ 15 ದಿನವೂ ಆಗಬಹುದು. ಗೊತ್ತಿಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುಳ್ಳು ಹಬ್ಬಿಸಿದರೆ ಅವರಿಗೆ ಒಳ್ಳೆಯದು ಆಗಲ್ಲ. ಸುಳ್ಳು ಸುದ್ದಿ ಹಬ್ಬಿಸುವುದರಿಂದ ನಮಗೆ ಬೇಜಾರಗುತ್ತದೆ. ನಮ್ಮ ಕುಟುಂಬದ ಸದಸ್ಯರೆಲ್ಲ ಆಸ್ಪತ್ರೆಯಲ್ಲಿ ಇದ್ದೇವೆ. ನಿನ್ನೆ ಮಠಾಧಿಪತಿಗಳು, ವೈದ್ಯರು ಹಾಗೇ ಮೊನ್ನೆ ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ, ಖರ್ಗೆ ಅವರು ಬಂದಿದ್ದರು. ಬಹಳ ಜನ ಬಂದು ಮಾತನಾಡಿಸಿಕೊಂಡು ಹೋಗಿದ್ದಾರೆ. ಅಂತಹದ್ದೇನು ತೊಂದರೆ ಇಲ್ಲ. ಚೇತರಿಕೆಯಾಗಿ ಬರುತ್ತಾರೆ ಎಂದು ಪುತ್ರ ಗಣೇಶ್ ಅವರು ಮಾಹಿತಿ ನೀಡಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ