Breaking News

ಬಾಲಕನ ರಕ್ಷಣೆಗೆ ಇಳಿದ ಸಹೋದರರಿಬ್ಬರು ನೀರುಪಾಲು: 15 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಅಣ್ಣ!

Spread the love

ಮೈಸೂರು: ವರುಣಾ ನಾಲೆಯ ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋದ ಸಹೋದರರಿಬ್ಬರು ನೀರುಪಾಲಾದ ದಾರುಣ ಘಟನೆ ಮೈಸೂರು ತಾಲೂಕಿನ ಬಡಗಲಹುಂಡಿ ಗ್ರಾಮದ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ.

ಮೈಸೂರು ತಾಲೂಕಿನ ಬಡಗಲಹುಂಡಿ ಗ್ರಾಮದ ರಮೇಶ್ ಎಂಬುವರ ಮಗ ನಂದನ್(25), ರವಿ ಎಂಬುವರ ಮಗ ರಾಕೇಶ್(20) ಮೃತ ಸಹೋದರರು. ಮೃತ ಯುವಕರ ತಂದೆ ಅಣ್ಣ-ತಮ್ಮಂದಿರಾಗಿದ್ದು, ಇವರ ಮಕ್ಕಳು ಸಾವಿನಲ್ಲೂ ಒಂದಾಗಿರುವುದು ಕುಟುಂಬಸ್ಥರಿಗೆ ಆಘಾತ ಉಂಟುಮಾಡಿದೆ.

ವರುಣಾ ಮುಖ್ಯ ನಾಲೆಯಿಂದ ಬಡಗಲಹುಂಡಿ, ಮೂಡಲಹುಂಡಿ ಮಾರ್ಗವಾಗಿ ನರಸೀಪುರ ರಸ್ತೆಯ ಎಂ.ಸಿ. ಹುಂಡಿ ಕಡೆ ನೀರುಣಿಸುವ ಉಪ ನಾಲೆಯಲ್ಲಿ ಬಡಗಲಹುಂಡಿ ಗ್ರಾಮದ 15 ವರ್ಷದ ಬಾಲಕನೊಬ್ಬ ಮಾರಿಗುಡಿ ಕ್ರಾಸ್ ಬಳಿ ವರುಣಾ ನಾಲೆಯಲ್ಲಿ ನೀರಿನಲ್ಲಿ ಸುಸ್ತಾಗಿ ಮುಳುಗಲಾರಂಭಿಸಿದ್ದ. ಇದೇ ವೇಳೆ ಮಧ್ಯಾಹ್ನ 2.30ರ ವೇಳೆಗೆ ಗದ್ದೆಗೆ ಗೊಬ್ಬರ ಹಾಕಲು ಬೈಕ್‌ನಲ್ಲಿ ನಂದನ್ ಮತ್ತು ರಾಕೇಶ್ ತೆರಳುತ್ತಿದ್ದರು. ಆಗ ನೀರಿನಲ್ಲಿ ಬಾಲಕ ಮುಳುಗುತ್ತಿರುವುದನ್ನು ನೋಡಿ, ಕೂಡಲೇ ರಕ್ಷಣೆಗಾಗಿ ಇಬ್ಬರೂ ಸಹೋದರರು ನಾಲೆಗೆ ಧುಮುಕಿದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ