ಅಕ್ರಮ ಸಾರಾಯಿ ಮಾರಾಟ ಮತ್ತು ಮಾದಕ ವಸ್ತು ಸೇವನೆ
ಒಟ್ಟು 2 ಪ್ರಕರಣಗಳಲ್ಲಿ ಮೂವರು ಅಂದರ್…
ಅಕ್ರಮ ಸಾರಾಯಿ ಮಾರಾಟ ಮತ್ತು ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ ಒಟ್ಟು 2 ಪ್ರಕರಣಗಳಲ್ಲಿ 3 ಜನ ಆರೋಪಿತರನ್ನು ವಶ ಪಡೆದುಕೊಂಡು ಅವರಿಂದ ರೂ.8090/- ಮೌಲ್ಯದ ಅಕ್ರಮ ಸರಾಯಿ ಜಪ್ತಪಡಿಸಿಕೊಳ್ಳಲಾಗಿದೆ.
ಮಾರಿಹಾಳ ಪೊಲೀಸರು ಅಕ್ರಮ ಸರಾಯಿ ಮಾರಾಟದ ಮೇಲೆ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ದಿನಾಂಕ: 18/10/2025 ರಂದು, ಬೆಳಗಾವಿ ಸುಳೇಭಾವಿ, ಆರೋಪಿ ಚಂದ್ರಶೇಖರ ರಾಮು ಸುಣಗಾರ (53) ಎಂಬುವವನು ತನ್ನ ಲಾಭಕ್ಕಾಗಿ ಕರಡಿಗುದ್ದಿ ಗ್ರಾಮದ ಹದ್ದಿಯಲ್ಲಿರುವ ಬೆಳಗಾವಿ-ಬಾಗಲಕೋಟೆ ರಸ್ತೆ ಸಮೀಪದ ಮಹಾಲಕ್ಷ್ಮೀ ಧಾಬಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಮಾರಿಹಾಳ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಹುಲಕುಂದ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿದ್ದು, ಆರೋಪಿಯಿಂದ ವಿವಿಧ ಕಂಪನಿಗಳ ಒಟ್ಟು ರೂ. 8,090/- ಮೌಲ್ಯದ 90 ML ನ ಟೆಟ್ರಾ ಪ್ಯಾಕೆಟ್‌ಗಳಲ್ಲಿ ತುಂಬಿದ್ದ ಸರಾಯಿಯನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ತನಿಖೆ ಮುಂದುವರೆದಿದೆ.ಶಹಾಪೂರ ಪೊಲೀಸ್ ಠಾಣೆಯ ಪೊಲೀಸರು ಗಾಂಜಾ ಸೇವಿಸಿ ಅಸಹಜವಾಗಿ ವರ್ತಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ದಿನಾಂಕ: 18/10/2025 ಬೆಳಗಾವಿ ವಡಗಾಂವ ವಿಷ್ಣು ಗಲ್ಲಿಯ ಜಿಬ್ರಾನ್ ಕುತ್ತುದ್ದಿನ್ ಪಟೇಲ್ (28) ಮತ್ತು ಸಾಹೀಲ್ ಸುರೇಶ ಕಿರ್ತನ (27) ಎಂಬ ಇಬ್ಬರು ಆರೋಪಿತರು ವಿಷ್ಣುಗಲ್ಲಿ ಕಾರ್ನರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ಪದಾರ್ಥ ಸೇವಿಸಿ ವರ್ತಿಸುತ್ತಿರುವುದು ಕಂಡುಬಂದಿದೆ.
ಶಹಾಪೂರ ಠಾಣೆಯ ಪಿಎಸ್‌ಐ ಎಸ್. ಎನ್. ಬಸ್ಸಾಪುರೆ ಹಾಗೂ ಸಿಬ್ಬಂದಿಯವರು ಆರೋಪಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ, ಅವರ ವಿರುದ್ಧ ಶಹಾಪೂರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ. ಇದೇ ರೀತಿ ಅಕ್ರಮ ಸರಾಯಿ ಮಾರಾಟದ ಮೇಲೆ ಮಾರಿಹಾಳ ಪೊಲೀಸರು ದಾಳಿ ನಡೆಸಿ ರೂ. 8,090/- ಮೌಲ್ಯದ ಸರಾಯಿ ಜಪ್ತಿ ಮಾಡುವ ಮೂಲಕ ಒಟ್ಟು 2 ಪ್ರಕರಣಗಳಲ್ಲಿ 3 ಜನ ಆರೋಪಿತರನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಗಳಿಗಾಗಿ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಅವರು ದಾಳಿ ಕೈಗೊಂಡ ಪಿಎಸ್‌ಐ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
Laxmi News 24×7