ಬೆಂಗಳೂರು: ಜಾತಿ ನಿಂದನೆ ಆರೋಪದಡಿ ಬಿಗ್ಬಾಸ್ ಮಾಜಿ ಸ್ಪರ್ಧಿ, ವಕೀಲ ಕೆ.ಎನ್. ಜಗದೀಶ್ ಅವರನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಎಂಬುವವರು ನೀಡಿದ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಜಗದೀಶ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಜಾತಿ ನಿಂದನೆ ಮಾಡಿರುವ ಆರೋಪ ಜಗದೀಶ್ ಅವರ ವಿರುದ್ಧ ಕೇಳಿ ಬಂದಿತ್ತು. ಅದರನ್ವಯ ಜಗದೀಶ್ ಅವರಿಗೆ ಗುರುವಾರ ನೋಟಿಸ್ ನೀಡಲು ಪೊಲೀಸರು ತೆರಳಿದ್ದಾಗ ಮನೆಯ ಬಾಗಿಲು ತೆರೆಯದೇ ಹೈಡ್ರಾಮಾ ಮಾಡಿದ್ದರು.
ಇನ್ನು ಶುಕ್ರವಾರ ಬಂಧನಕ್ಕೊಳಗಾಗುವ ಮುನ್ನ ಫೇಸ್ಬುಕ್ ಮೂಲಕ ವಿಡಿಯೋ ಪ್ರಕಟಿಸಿರುವ ಜಗದೀಶ್ ಅವರು, ‘ಇದೊಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಯಾರೂ ಅಶಾಂತಿಯುಂಟು ಮಾಡಬೇಡಿ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಜಗದೀಶ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಸದಾ ಒಂದಿಲ್ಲೊಂದು ವಿಚಾರಗಳಿಗೆ ತಮ್ಮ ಪ್ರತಿಕ್ರಿಯೆ ಮೂಲಕ ಸುದ್ದಿಯಾಗುವ ಜಗದೀಶ್, ಕಿರುತೆರೆಯ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.
Laxmi News 24×7