Breaking News

ಗಣೇಶೋತ್ಸವ ಮೆರವಣಿಗೆ ಮಾರ್ಗದ ಅಭಿವೃದ್ಧಿ… ಮಹಾನಗರ ಪಾಲಿಕೆಯ ಕಾರ್ಯಕ್ಕೆ ಮಹಾಪೌರ, ಶಾಸಕರಿಂದ ಚಾಲನೆ

Spread the love

ಗಣೇಶೋತ್ಸವ ಮೆರವಣಿಗೆ ಮಾರ್ಗದ ಅಭಿವೃದ್ಧಿ…
ಮಹಾನಗರ ಪಾಲಿಕೆಯ ಕಾರ್ಯಕ್ಕೆ ಮಹಾಪೌರ, ಶಾಸಕರಿಂದ ಚಾಲನೆ
ಗಣೇಶೋತ್ಸವ ಮೆರವಣಿಗೆ ಮಾರ್ಗದ ಅಭಿವೃದ್ಧಿ…
ಬೆಳಗಾವಿ ಮಹಾನಗರ ಪಾಲಿಕೆಯಿಂದ ಕಾಮಗಾರಿ
ರಸ್ತೆಯ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ
27 ಲಕ್ಷ ವಿಶೇಷ ಅನುದಾನದಲ್ಲಿ ಕಾಮಗಾರಿಆಗಸ್ಟ್ 27 ರಿಂದ ಆರಂಭಗೊಳ್ಳಲಿರುವ ಗಣೇಶೋತ್ಸವದ ಹಿನ್ನೆಲೆ ಮೆರವಣಿಗೆ ಮಾರ್ಗದ ಅಭಿವೃದ್ಧಿ ಕಾಮಗಾರಿಗೆ ಬೆಳಗಾವಿಯ ಮಹಾಪೌರರು ಮತ್ತು ಉತ್ತರ ಶಾಸಕರು ಚಾಲನೆಯನ್ನು ನೀಡಿದರು.May be an image of 6 people
ಬೆಳಗಾವಿಯ ಗಣೇಶೋತ್ಸವದ ಮೆರವಣಿಗೆ ಮಾರ್ಗದಲ್ಲಿ ಉಂಟಾದ ತೆಗ್ಗುಗಳನ್ನು ಮುಚ್ಚಿ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಬೆಳಗಾವಿ ಮಹಾನಗರ ಪಾಲಿಕೆಯೂ ಕೈಗೆತ್ತಿಕೊಂಡಿದೆ. ಅಭಿವೃದ್ಧಿಯನ್ನು ಸರಿಯಾಗಿ ಮಾಡುವ ಉದ್ಧೇಶದಿಂದ ರಾತ್ರಿಯ ವೇಳೆ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ಮಹಾಪೌರ ಮಂಗೇಶ್ ಪವಾರ್ ತಿಳಿಸಿದರು.
ಇನ್ನು ಉತ್ತರ ಶಾಸಕ ಆಸೀಫ್ ಸೇಠ್ ಅವರು ಗಣೇಶೋತ್ಸವದ ಹಿನ್ನೆಲೆ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ 27 ಲಕ್ಷ ರೂಪಾಯಿ ವಿಶೇಷ ಅನುದಾನದಲ್ಲಿ ಮೆರವಣಿಗೆ ಮಾರ್ಗವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಗಣೇಶೋತ್ಸವದ ಹಿನ್ನೆಲೆ ವಾಹನಗಳ ಮೆರವಣಿಗೆಗೆ ತೊಂದರೆಯಾಗದಿರಲಿ ಎಂಬ ಉದ್ಧೇಶದಿಂದ ಈ ಕಾಮಗಾರಿಯನ್ನು ರಾತ್ರಿಯ ಹೊತ್ತು ಆರಂಭಿಸಿರುವುದಾಗಿ ತಿಳಿಸಿದರು.May be an image of 14 people, service vehicle and foundry
ಈ ಸಂದರ್ಭದಲ್ಲಿ ಉಪಮಹಾಪೌರರಾದ ವಾಣಿ ಜೋಷಿ, ನಗರಸೇವಕ ಶಿವಾಜೀರಾವ್ ಮಂಡೋಳಕರ, ಮುಝಮ್ಮಿಲ್ ಢೋಣಿ, ಜಯತೀರ್ಥ ಸೌಂದತ್ತಿ, ಮಹಾನಗರ ಪಾಲಿಕೆ ಅಭಿಯಂತರರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ