ದಿನಾಂಕ: 28.07.2025 ರಂದು ಜಿಲ್ಲಾಧಿಕಾರಿ ಬೆಳಗಾವಿ, ಮೊಹಮ್ಮದ ರೋಷನ್ ರವರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಶ್ರೀ ಭೀಮಾಶಂಕರ ಗುಳೇದ ಇವರೊಂದಿಗೆ ಹುಕ್ಕೇರಿ ತಾಲೂಕಿನ ಕಣಗಲಾ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತದ ನಂತರ ಕೈಗಾರಿಕಾ ಪ್ರದೇಶಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಈ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಎಸ್.ಎಲ್.ಎ.ಒ. ಹಾಗೂ ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾಸ್ ಡೆವಲಪ್‌ಮೆಂಟ್ ಬೋರ್ಡ್ ( KIADB ) ನ ಮುಖ್ಯ ಅಭಿಯಂತರರು,
ಕಾರ್ಯನಿರ್ವಾಹಕ ಅಭಿಯಂತರರು, ತಹಶೀಲ್ದಾರರು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.