ಕಲಬುರಗಿ: ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದಿದ್ದ ಎರಡು ಪ್ರಮುಖ ಅಪರಾಧ ಪ್ರಕರಣಗಳನ್ನು ಸಿನಿಮೀಯ ಶೈಲಿಯಲ್ಲಿ ಭೇದಿಸಲಾಗಿದೆ. ಮಧ್ಯರಾತ್ರಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ, ನಗದು ದೋಚಿದ್ದ ದರೋಡೆ ಪ್ರಕರಣವನ್ನು ಪತ್ತೆದಾರಿ ಶ್ವಾನ ನೀಡಿದ ಸುಳಿವು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.![]()
ಜೂನ್ 22ರಂದು ಶಹಬಾದ್ ಪಟ್ಟಣದ ಧಕ್ಕಾ ತಾಂಡಾದಲ್ಲಿ ಹಣಮಂತ ಪವಾರ್ ಎಂಬುವವರ ಮನೆಗೆ ನುಗ್ಗಿದ ದರೋಡೆಕೋರರು, ಮನೆಯವರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಅವರ ಕೈ-ಕಾಲು ಕಟ್ಟಿ ₹15,26,500 ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗೆ ಪೊಲೀಸರು ಡಾಗ್ ಸ್ಕ್ವಾಡ್ನ ಶ್ವಾನ ‘ರೂಬಿ’ ನೆರವಿನಿಂದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಈ ಎಲ್ಲ ವಸ್ತುಗಳು ವಶ: ಬಂಧಿತರಾದ ರವಿ ರಾಠೋಡ್, ಶಿವಕುಮಾರ್, ಮಹಾದೇವ ಮತ್ತು ಗೋಪಾಲ್ ಅವರಿಂದ 135 ಗ್ರಾಂ ಚಿನ್ನ, 550 ಗ್ರಾಂ ಬೆಳ್ಳಿ ಮತ್ತು ₹40,000 ನನದು ವಶಪಡಿಸಿಕೊಳ್ಳಲಾಗಿದೆ. ಪತ್ತೆದಾರಿ ಶ್ವಾನ ರೂಬಿಯ ನಿಖರ ಸುಳಿವಿನಿಂದ ಈ ಮಹತ್ವದ ದರೋಡೆ ಪ್ರಕರಣ ಭೇದಿಸಲಾಗಿದ್ದು , ರೂಬಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಎಸ್.ಪಿ. ಅಡ್ಡೂರ್ ಶ್ರೀನಿವಾಸಲು ಅವರು ಶ್ಲಾಘನೆ ಪತ್ರ ನೀಡಿ ಗೌರವಿಸಿದರು.
Laxmi News 24×7