Breaking News

ಸಿಎ ಪಾಸ್ ಮಾಡಿದ ಕೂಲಿ ಕಾರ್ಮಿಕನ ಮಗ ರಮೇಶ

Spread the love

ಸಿಎ ಪಾಸ್ ಮಾಡಿದ ಕೂಲಿ ಕಾರ್ಮಿಕನ ಮಗ ರಮೇಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಳ್ಳಿಕಾನಿನ ರಮೇಶ್ ನಾಯ್ಕ ಪ್ರತಿಷ್ಠಿತ “𝗜𝗻𝘀𝘁𝗶𝘁𝘂𝘁𝗲 𝗼𝗳 𝗖𝗵𝗮𝗿𝘁𝗲𝗿𝗲𝗱 𝗔𝗰𝗰𝗼𝘂𝗻𝘁𝗮𝗻𝘁𝘀 𝗼𝗳 𝗜𝗻𝗱𝗶𝗮” ಮೇ 2025 ರಲ್ಲಿ ನೆಡೆಸಿದ ಅಂತಾರಾಷ್ಟ್ರಿಯ ಮಟ್ಟದ CA ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಇವರು ಮಂಜುನಾಥ ಹಾಗೂ ಶಾರದಾ ದಂಪತಿಗಳ ಮಗನಾಗಿದ್ದು ಅವಿದ್ಯಾವಂತರಾದ ತಂದೆ ತಾಯಿ ಇಬ್ಬರು ದಿನಗೂಲಿ ಕೆಲಸ ಮಾಡುತ್ತಾರೆ. ಚಿಕ್ಕ ಅರಣ್ಯ ಭೂಮಿಯಲ್ಲಿ ವಾಸಿಸುವ ಇವರು ಯಾವದೇ ಸ್ವಂತ ಜಮೀನು ಹೊಂದಿಲ್ಲ.
ರಮೇಶ ತೀರಾ ಕಡು ಬಡತನದ ಪರಿಸ್ಥಿಯಲ್ಲೂ ದ್ರತಿಗೆಡದೆ ಮನೆಯಲ್ಲಿಯೇ ಛಲದಿಂದ ಓದಿ ಅತೀ ಕಷ್ಟಕರ ಪರೀಕ್ಷೆಯಲ್ಲಿ ಒಂದಾದ 𝗖𝗔 ಎಲ್ಲ ಹಂತದ ಪರೀಕ್ಷೆ ಪಾಸ್ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾನೆ.

Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ