ಡಾಕ್ಟರ್ ಎಲ್ಲಿದ್ದೀರಾ…ವರ್ಗಾವಣೆಯಾಗಿ ಹೋದರಾ
ಸರ್ಕಾರಿ ವೈಧ್ಯರ ವರ್ಗಾವಣೆ ಬಡರೋಗಿ ಖಾಸಗಿ ಆಸ್ಪತ್ರೆಗೆ ರವಾಣೆ ಎನ್ನುವಂತೆ ಒಂದೇ ಭಾರಿಗೆ ಜಿಲ್ಲಾಸ್ಪತ್ರೆಯಿಂದ 8 ಜನ ವೈಧ್ಯರನ್ನು ವರ್ಗಾವಣೆ ಮಾಡಿದಕ್ಕೆ ಸಾರ್ವಜನಿಕರು ಸಂಕಷ್ಟಕ್ಕಿಡಾಗಿ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಹೌದು ಇದು ಬಾಲಕೋಟೆಯ ಜಿಲ್ಲಾಸ್ಪತ್ರೆಯಲ್ಲಿ ಕಣ್ಣಿಗೆ ಕಾಣಿಸುವ ದೃಶ್ಯ… ಆರೋಗ್ಯ ಇಲಾಖೆಯ ಸಾಮೋಹಿಕ ವರ್ಗಾವಣೆಯಿಂದ 8 ಜನ ವೈಧ್ಯರು ಬೇರೆಡೆಗೆ ವರ್ಗಾವಣೆಯಾಗಿರುವುದ್ದರಿಂದ ಚಿಕಿತ್ಸೆಗೆ ಆಗಮಿಸುವ ರೋಗಿಗಳು ಡಾಕ್ಟರ್ ಎಲ್ಲಿದ್ದಾರೇ ಎಂದರೆ ಅವರು ವರ್ಗಾವಣೆಯಾಗಿದ್ದಾರೆ ಎನ್ನುವ ಮಾತುಗಳು. ಉಚಿತ ಯೋಜನೆಗಳು ನೀಡುತ್ತಿರುವ ಸರ್ಕಾರ ಜಿಲ್ಲಾಸ್ಪತ್ರೆಯಲ್ಲಿನ ವೈದ್ಯರನ್ನು ವರ್ಗಾಯಿಸಿದ್ದಕ್ಕೆ ಬಡರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗುವಂತೆ ಮಾಡಿತಾ.
ಮರು ವೈಧ್ಯರ ನಿಯುಕ್ತಿ ಮಾಡದೇ ಜಿಲ್ಲಾಸ್ಪತ್ರೆಯಲ್ಲಿದ್ದ ಜಿಲ್ಲಾಸ್ಪತ್ರೆಯ ಮೆಡಿಕಲ್ ಆಫೀಸರ್, ಫಿಜಿಸಿಯನ್, ಮಕ್ಕಳ ತಜ್ಞರು, ಅರ್ಥೋಪಿಡಿಸಿಯನ್, ಸರ್ಜನ್, ನೆಪ್ರೋಲಾಜಿಸ್ಟ್, ರೇಡಿಯೋಲಾಜಿಸ್ಟ್, ಫಾರೆನಿಕ್ಸ್ ತಜ್ಞರು ಸೇರಿ ಒಟ್ಟು 8 ಜನ ವೈಧ್ಯರನ್ನು ಒಂದೇ ಬಾರಿಗೆ ವರ್ಗಾವಣೆ ಮಾಡಿದ್ದರಿಂದ ಇಲ್ಲಿಗೆ ಬರುವ ರೋಗಿಗಳನ್ನು ಕೇಳೋರೇ ಇಲ್ಲೂ ಇಲ್ಲದಂತಾಗಿದೆ.
ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರೋ ಮಧ್ಯೆ ಬಡ ಜನರು ಒಂದಿಲ್ಲೊಂದು ರೋಗ ರುಜಿನಕ್ಕಾಗಿ ಜಿಲ್ಲಾಸ್ಪತ್ರೆಯತ್ತ ಮುಖ ಮಾಡಿದ್ರೆ ಇಲ್ಲಿ ವೈದ್ಯರೇ ಇಲ್ಲ.
ಆರೋಗ್ಯ ಇಲಾಖೆಯ ನಡೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತ. ಇದು ಮೆಡಿಕಲ್ ಮಾಫಿಯಾ ಎಂದು ಆರೋಪಗಳು ಕೇಳಿ ಬರುತ್ತಿವೆ.
ಮೊದಲೇ ವೈದ್ಯರಿಲ್ಲದೇ ನಿತ್ಯ ಪರದಾಡುತ್ತಿದ್ದ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ದಿನವೊಂದಕ್ಕೆ 1000 ದಿಂದ 1200 ಓಪಿಡಿ ರೋಗಿಗಳ ಆಗಮನ.
ಪ್ರತಿ ತಿಂಗಳು 300 ರಿಂದ 350 ಹೆರಿಗೆಗಳು, 500 ಸರ್ಜರಿಗಳು. 400ರವರೆಗೆ ಡಯಾಲಿಸಸ್ ಕೇಸ್ ಗಳು. ಸಧ್ಯ ವೈದ್ಯರ ವರ್ಗಾವಣೆಯಿಂದ ಕಂಗಾಲಾಗಿರೋ ಬಡ ರೋಗಿಗಳ ಸಂಕಷ್ಟ ಹೇಳತಿರದು.
ಲಕ್ಷ ಲಕ್ಷ ಖರ್ಚು ಮಾಡಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡ್ತಿರೋ ಬಡ ರೋಗಿಗಳು.
ರೋಗಿಗಳಿಗೆ ಸಂಕಷ್ಟದ ಬೆನ್ನಲ್ಲೆ ಬಾಗಲಕೋಟೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಧರಣಿ ನಡೆಸಿದ ಸಾಮಾಜಿಕ ಹೋರಾಟಗಾರರು. ತಕ್ಷಣ ಬೇರೆ ವೈದ್ಯರ ನಿಯೋಜನೆ ಮಾಡದೇ ಹೋದರೆ ವಿವಿಧ ಸಂಘಟನೆಗಳ ಮೂಲಕ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೌನ್ಸಲಿಂಗ್ ಮೂಲಕ ವರ್ಗಾವಣೆಗೊಂಡಿದ್ದಾರೆ. ರೋಗಿಗಳಿಗೆ ಸಮಸ್ಯೆಯಾಗದಂತೆ ಬೇರೆ ವ್ಯವಸ್ಥೆ ಕಲ್ಪಿಸುವುದಾಗಿ ತೀಳಿಸಿದ್ದಾರೆ.
Laxmi News 24×7