Breaking News

ಕಳಪೆ ಹತ್ತಿ ಬೀಜ ಬಿತ್ತಿ ನಷ್ಟಕ್ಕೊಳಗಾದ ರೈತರು!!!

Spread the love

ಕಳಪೆ ಹತ್ತಿ ಬೀಜ ಬಿತ್ತಿ ನಷ್ಟಕ್ಕೊಳಗಾದ ರೈತರು!!!
ಕಳಪೆ ಬೀಜ ಬಿತ್ತಿದ ರೈತರ ಹತ್ತಿ ಬೆಳೆಯಲ್ಲಿ ಹೂ-ಕಾಯಿ ಬಿಡದೇ ಸಂಪೂರ್ಣ ನಾಶ
ಅಗ್ರೋ ಅಮರ್ ಬೈಟೆಕ್ ಕಂಪನಿಯಿಂದ ಕಳಪೆಮಟ್ಟದ ಬೀಜ ವಿತರಣೆ ಆರೋಪ
6 ಎಕರೆ ಹತ್ತಿ ಬೆಳೆ ಹಾನಿಗೊಳಗಾದ ರೈತ ವೆಂಕಟೇಶ್ ಮತ್ತು ಬಸವರಾಜ್ ಕಂಗಾಲು
ಕಂಪನಿ ವಿರುದ್ಧ ಕ್ರಮಕ್ಕೆ ರೈತ ಮುಖಂಡರಿಂದ ಜಿಲ್ಲಾಡಳಿತಕ್ಕೆ ಮನವಿ
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಸೋಮಲಪೂರ ಗ್ರಾಮದಲ್ಲಿ ಕಳಪೆ ಹತ್ತಿ ಬೀಜ ವಿತರಣೆಯಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಗ್ರೋ ಅಮರ್ ಬೈಟೆಕ್ ಕಾಟನ್ ಸೀಡ್ಸ್ ಕಂಪನಿಯಿಂದ ವಿತರಣೆಗೊಂಡ ಬೀಜಗಳಿಂದ ಬಿತ್ತನೆ ಮಾಡಲಾಗಿದೆ. ಆದರೇ ಹೂ-ಕಾಯಿ ಬೆಳೆಯದೇ ಸಂಪೂರ್ಣ ನಷ್ಟವಾಗಿದೆ. ರೈತ ವೆಂಕಟೇಶ್ ತನ್ನ 2 ಎಕರೆ ಹಾಗೂ ರೈತ ಬಸವರಾಜ್ ತನ್ನ 4 ಎಕರೆ ಹತ್ತಿ ಬೀಜ ಭಿತ್ತಿದ್ದರು. ಹೂ-ಕಾಯಿ ಬಾರದ ಹಿನ್ನೆಲೆ ಕುರಿಗಾಯಿಗಳು ಬೆಳೆ ಮೇಯಿಸುವ ದೃಶ್ಯ ಇದೀಗ ಸಾಮಾನ್ಯವಾಗಿದೆ.
ಕಳಪೆ ಬೀಜ ವಿತರಿಸಿದ ಕಂಪನಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರೈತ ಮುಖಂಡರು, ಸರಕಾರದಿಂದ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇಂತಹ ಕಂಪನಿಗಳಿಗೆ ಪಾಠ ಕಲಿಸಲು ಕಠಿಣ ಕ್ರಮ ಅಗತ್ಯವಿದೆ ಎಂದು ರೈತರು ಒತ್ತಾಯಿಸಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ