Breaking News

ಅರಣ್ಯದಿಂದ ಕೂಡಿದಂತಹ ಬೆಂಗಳೂರನ್ನು ಮಹಾನಗರವನ್ನಾಗಿಸಿ ಅಂತರಾಷ್ಟಿಯ ಮಟ್ಟದಲ್ಲಿಯೂ ಸಹ ಬೆಂಗಳೂರು ಗುರುತಿಸುವಂತೆ ಮಾಡಿದ್ದು ಮಹಾನ ಧೀಮಂತ ನಾಯಕ ನಾಡಪ್ರಭು ಶ್ರೀ. ಕೆಂಪೇಗೌಡ

Spread the love

ಅರಣ್ಯದಿಂದ ಕೂಡಿದಂತಹ ಬೆಂಗಳೂರನ್ನು ಮಹಾನಗರವನ್ನಾಗಿಸಿ ಅಂತರಾಷ್ಟಿçÃಯ ಮಟ್ಟದಲ್ಲಿಯೂ ಸಹ ಬೆಂಗಳೂರು ಗುರುತಿಸುವಂತೆ ಮಾಡಿದ್ದು ಮಹಾನ ಧೀಮಂತ ನಾಯಕ ನಾಡಪ್ರಭು ಶ್ರೀ. ಕೆಂಪೇಗೌಡ ಎಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ ಹೆಗನಾಯಕ ಅವರು ತಿಳಿಸಿದರು.
May be an image of 10 people, dais and text
ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಹಯೋಗದಲ್ಲಿ ಶುಕ್ರವಾರ (ಜೂ.೨೭) ಜರುಗಿದ ನಾಡಪ್ರಭು ಶ್ರೀ. ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.May be an image of 7 people, flute and text
ಕೆಂಪೆಗೌಡರು ಅನೇಕ ರೀತಿಯ ಸುಧಾರಣೆಯನ್ನು ತರುವದರ ಮೂಲಕ ಬೆಂಗಳೂರಿಗೆ ಅಪಾರವಾದ ಕೊಡುಗೆ ನೀಡುವದರ ಮೂಲಕ ಆಗಿನ ಸಣ್ಣ ನಗರವಾಗಿದ್ದ ಬೆಂಗಳೂರು ಇಂದಿನ ಮಹಾ ನಗರವೆಂದು ಪ್ರಖ್ಯಾತಿಯನ್ನು ಪಡೆದಿದೆ.
ನಮ್ಮ ನಾಡು ನುಡಿ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸಲು ಕೆಂಪೇಗೌಡರು ನೀಡಿದ ಕೊಡುಗೆಯಿಂದಾಗಿ ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿಯೂ ಸಹ ತನ್ನ ಚಾಪನ್ನು ಮೂಡಿಸಿದೆ. ಅನೇಕರಿಗೆ ಅನುಕೂಲವಾಗುವ ವಿಷಯಗಳನ್ನು ಗಮನದಲ್ಲಿಟ್ಟುಕೊಂಡ ಬೆಂಗಳೂರು ನಗರವನ್ನು ಅಭಿವೃದ್ಧಿ ಪಡಿಸಿದ ಶ್ರೇಯಸ್ಸು ನಾಡಪ್ರಭು ಶ್ರೀ. ಕೆಂಪೆಗೌಡರಿಗೆ ಸೇರುತ್ತದೆ ಎಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ ಹೆಗನಾಯಕ ನುಡಿದರು.May be an image of 8 people, dais and text that says "ಜಲ್ಲಾಡಲತ ಬಿಡಗಾವಿ, ಬಿಲ್ಲಾ ಪಂಜಾಯತ, ಕನ್ನಡ ಮತ್ತು ಸಂಸ್ಥತಿ ಇಲಾಜೆ ಹಾಗೂ ಮಹಾನಗರ ಪಾಲಕ್ಸ ತಬುಕ್ತ ಅಶ್ದ ನಾಡಪ್ರಭು ನಂತಿ ಪೇಗೌಡ ಗಂಂ"
ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ್ದ ಮಹೇಶ ಚನ್ನಂಗಿ ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಈಗ ಪ್ರಸಿದ್ಧ ಐ.ಟಿ ಕ್ಷೇತ್ರವಾಗಿದೆ. ಈ ಕ್ಷೇತ್ರದಿಂದಾಗಿ ನಮ್ಮ ಕರ್ನಾಟಕದ ಹೆಸರು ಜಗತ್ತಿಗೆಲ್ಲಾ ಪಸರಿಸಿದೆ ಇದರ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.
ಯಲಹAಕದ ನಾಡಪ್ರಭು ಎಂದೆ ಖ್ಯಾತರಾದ ಕೆಂಪೇಗೌಡರು ದೃಢ ಸಂಕಲ್ಪ ಇಟ್ಟುಕೊಂಡು ಸುಂದರ ಬೆಂಗಳೂರು ನಗರ ನಿರ್ಮಾಣ ಮಾಡಿದರು. ಬೆಂಗಳೂರು ನಗರದ ನಿರ್ಮಾಣದ ಸಂದರ್ಭದಲ್ಲಿ ಭವಿಷ್ಯದ ಆಲೋಚನೆ ಇಟ್ಟುಕೊಂಡು ನಗರದ ಸುತ್ತ-ಮುತ್ತಲು ಕೆರೆಗಳನ್ನು ಗಿಡ ಮರಗಳನ್ನು ಬೆಳೆಸಿ ಸುಂದರವಾದ ನಗರವನ್ನು ನಿರ್ಮಿಸಿದರು.
ಕೆರೆಗಳು, ದೇವಸ್ಥಾನಗಳು, ಹೀಗೆ ಮುಂತಾದ ಕಟ್ಟಡಗಳನ್ನು ಕಟ್ಟಿ, ಕೌಶಲ್ಯಗಾರರಿಗೆ ಬದುಕು ಕಟ್ಟಿಕೊಳ್ಳಲು ಒಟ್ಟು ೬೪ ಪೇಟೆಗಳನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ವಿಜಯನಗರ ಸಾಮ್ರಾಜ್ಯದ ನಾಯಕರಿಂದ ಮೆಚ್ಚುಗೆ ಪಡೆದ ದೊರೆಯಾಗಿದ್ದರು. ತ್ಯಾಗ, ಧರ್ಮ ನಿಷ್ಠೆ, ಧೈರ್ಯ, ಗೌರವ ಮನೋಭಾವನೆ ಎಲ್ಲರಿಗೂ ಮಾದರಿಯಾಗುವಂತಹ ಗುಣಗಳನ್ನು ಹೊಂದಿದ ಶ್ರೀ. ಕೆಂಪೇಗೌಡರ ಹೆಸರು ಭೂಮಿಯ ಮೇಲೆ ಸೂರ್ಯ, ಚಂದ್ರ ಇರುವ ವರೆಗೂ ಶಾಶ್ವತವಾಗಿ ಅಜರಾಮರವಾಗಿರುತ್ತದೆ ಎಂದು ಮಹೇಶ ಚನ್ನಂಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯ ಕುಮಾರ ಹೊನಕೇರಿ, ಮಹಾ ನಗರ ಪಾಲಿಕೆಯ ಉಪ ಆಯುಕ್ತ ಉದಯಕುಮಾರ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಾಯ್.ಎಮ್.ಪಾಟೀಲ, ಜಿಲ್ಲಾ ಉಪಯೋಜನಾ ಸಮನ್ವಯ ಅಧಿಕಾರಿ ಉಮಾದೇವಿ ಹಿರೇಮಠ, ಸಾಹಿತಿಗಳಾದ ಸಿದ್ಧರಾಮ ತಳವಾರ, ಜಾಗತಿಕ ಲಿಂಗಾಯತ ಮಹಾ ಸಭೆಯ ಬೆಳಗಾವಿ ಯುವ ಘಟಕದ ಜಿಲ್ಲಾಧ್ಯಕ್ಷ ಪ್ರೇಮಕುಮಾರ ಚೌಗಲಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಾಡಪ್ರಭು ಶ್ರೀ. ಕೆಂಪೆಗೌಡ ಜಯಂತಿ ಅಂಗವಾಗಿ ವಿವಿಧ ಶಾಲಾ ಕಾಲೇಜುಗಳಲ್ಲಿ ಜರುಗಿದ ವಿವಿಧ ಸ್ಪರ್ಧೆಗಳ ವಿಜೇತ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ