Breaking News

ಧಾರವಾಡದಲ್ಲಿ‌ ಸರ್ಕಾರಿ‌ ಕಚೇರಿ‌ ಆವರಣದಲ್ಲಿಯೇ ಕಳ್ಳರ ಕೈಚಳಕ‌ತೋರಿದ ಖದೀಮರು….. ಶ್ರೀಗಂಧ ಮರ ಕದ್ದುಕೊಂಡು ಹೋದ ಚಾಲಾಕಿ‌ ಕಳ್ಳರು

Spread the love

ಧಾರವಾಡದಲ್ಲಿ‌ ಸರ್ಕಾರಿ‌ ಕಚೇರಿ‌ ಆವರಣದಲ್ಲಿಯೇ ಕಳ್ಳರ ಕೈಚಳಕ‌ತೋರಿದ ಖದೀಮರು….. ಶ್ರೀಗಂಧ ಮರ ಕದ್ದುಕೊಂಡು ಹೋದ ಚಾಲಾಕಿ‌ ಕಳ್ಳರು
ಇತ್ತಚ್ಚೆಗೆ ಧಾರವಾಡ ಸರ್ಕಾರಿ ಕ್ವಾಟರ್ಸ ಸೇರಿ ಕಚೇರಿ‌ ಆವರಣದಲ್ಲಿರೋ ಶ್ರೀ ಗಂಧ ಮರಗಳಿಗೆ ರಕ್ಷಣೆ ಇಲ್ಲದಂತಾಗಿರುವುದರ ಜತೆಗೆ ಕಳ್ಳರಿಗೂ ಕಾನೂನಿ ಭಯಯು ಇಲ್ಲದಂತಾಗಿದೆ.
ದಕ್ಕೆ ಉದಾಹರಣೆ ಎಂಬಂತೆ‌ ಜಿಲ್ಲಾ ಡಿಡಿಎಲ್‌ಆರ್ ಕಚೇರಿ ಆವರಣದಲ್ಲಿನ ಶ್ರೀಗಂಧ ಕದ್ದುಕೊಂಡು ಚಾಲಾಕಿ ಕಳ್ಳರು‌‌ ಪರಾರಿಯಾಗಿದ್ದಾರೆ.‌
ಹೌದು ಧಾರವಾಡದ ಭೂಮಾಪನಾ ಇಲಾಖೆ (ಡಿಡಿಎಲ್ಆರ್) ಆವರಣದಲ್ಲಿದ್ದ ಮೂರು ಶ್ರೀಗಂಧದ ಮರಗಳಿಗೆ ಚಂದನ ಚೋರರು ಕನ್ನ ಹಾಕಿದ್ದಾರೆ.
ರಾತ್ರೋರಾತ್ರಿ ಕಚೇರಿ ಆವರಣದಲ್ಲಿನ ಮೂರು ಶ್ರೀಗಂಧದ ಮರಗಳನ್ನು ಕತ್ತರಿಸಿರುವ ಖದೀಮರು ಮರದ ಮಧ್ಯೆ ಇದ್ದ ಶ್ರೀಗಂಧದ ತುಂಡನ್ನು ಹೊತ್ತೊಯ್ದಿದ್ದಾರೆ. ಈ ಘಟನೆ ಇಂದು ಬೆಳಿಗ್ಗೆ ಕಚೇರಿಗೆ ಬಂದ ಸಿಬ್ಬಂದಿಗೆ ಶ್ರೀಗಂಧದ ಮರ ಕಳ್ಳತನವಾಗಿರುವುದು ಗೊತ್ತಾಗಿದೆ.
ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ