Breaking News

8ನೇ ಕ್ಲಾಸ್ ಓದಿರುವ ರಿಂಕು ಸಿಂಗ್​ಗೆ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ನೌಕರಿ;

Spread the love

ಟೀಂ ಇಂಡಿಯಾದ ಯುವ ಕ್ರಿಕೆಟಿಗ ರಿಂಕು ಸಿಂಗ್ (Rinku Singh) ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಬದುಕಿನಿಂದ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಜೌನ್‌ಪುರದ ಮಚ್ಲಿಶಹರ್ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ (Priya Saroj) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂದಿನ ನವೆಂಬರ್ ತಿಂಗಳಲ್ಲಿ ರಿಂಕು ಹಾಗೂ ಪ್ರಿಯಾ ಅವರ ವಿವಾಹ ನಡೆಯಬೇಕಿತ್ತು. ಆದರೆ ರಿಂಕು ಅವರ ಬಿಡುವಿಲ್ಲದ ಕ್ರಿಕೆಟ್​ ವೇಳಾಪಟ್ಟಿಯಿಂದಾಗಿ ವಿವಾಹ ಸಮಾರಂಭವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಇದರ ನಡುವೆ ಇದೀಗ ರಿಂಕು ಸಿಂಗ್​ಗೆ ಉತ್ತರ ಪ್ರದೇಶ ಸರ್ಕಾರ ಸರ್ಕಾರಿ ಉದ್ಯೋಗ ನೀಡಿದೆ. ವಾಸ್ತವವಾಗಿ ಯೋಗಿ ಸರ್ಕಾರವು ರಿಂಕು ಅವರನ್ನು ಮೂಲ ಶಿಕ್ಷಣ ಅಧಿಕಾರಿ ಹುದ್ದೆಗೆ ನೇಮಿಸಿದೆ (ಬಿಇಒ) ಎಂಬ ಸುದ್ದಿ ಹೊರಬಿದ್ದಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಕ್ಕಾಗಿ ರಿಂಕು ಸಿಂಗ್ ಅವರಿಗೆ ರಾಜ್ಯ ಸರ್ಕಾರದಿಂದ ಈ ಹುದ್ದೆ ಮತ್ತು ಗೌರವ ದೊರೆತಿದೆ.

9ನೇ ತರಗತಿಯಲ್ಲಿ ಅನುತ್ತೀರ್ಣ

ವಾಸ್ತವವಾಗಿ 9ನೇ ತರಗತಿಯಲ್ಲಿ ಅನುತ್ತೀರ್ಣರಾಗಿರುವ ರಿಂಕು ಸಿಂಗ್​ಗೆ ಕ್ರೀಡಾ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಗುರುತಿಸಿ ಯೋಗಿ ಸರ್ಕಾರ ಅವರಿಗೆ ಕೆಲಸ ನೀಡಲು ನಿರ್ಧರಿಸಿದೆ. ಮೂಲ ಶಿಕ್ಷಣ ಅಧಿಕಾರಿಯಾಗಿ, ರಿಂಕು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣವನ್ನು ಸೃಷ್ಟಿಸಲು ಕೆಲಸ ಮಾಡಬೇಕಾಗುತ್ತದೆ. ರಿಂಕು ಸಿಂಗ್ ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿದ್ದು, ಈಗ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ ನೀಡಲು ಅವಕಾಶ ಸಿಕ್ಕಿದೆ.

ಸರ್ಕಾರಿ ಕೆಲಸದಲ್ಲಿ ರಿಂಕು ಸಿಂಗ್ ಸಂಬಳ ಎಷ್ಟು?

ವರದಿಯ ಪ್ರಕಾರ, ಮೂಲ ಶಿಕ್ಷಣ ಅಧಿಕಾರಿಯಾಗಿ ರಿಂಕು ಸಿಂಗ್ ಅವರ ಮಾಸಿಕ ವೇತನ 57562- 61312 ರೂ.ಗಳವರೆಗೆ ಇರಬಹುದು. ಇದರಲ್ಲಿ ಅವರ ಮೂಲ ವೇತನ ಸುಮಾರು 47600 ರೂ.ಗಳಾಗಿರಬಹುದು. ರಿಂಕು ಸಿಂಗ್ ಪಡೆಯುವ ಸಂಬಳವು ಡಿಎ, ಎಚ್‌ಆರ್‌ಎ ಮತ್ತು ಪ್ರಯಾಣ ಭತ್ಯೆಯಂತಹ ವೆಚ್ಚಗಳನ್ನು ಸಹ ಒಳಗೊಂಡಿರುತ್ತದೆ. ಇದರಲ್ಲಿ ಅವರ ಗ್ರೇಡ್ ಪೇ 4800 ರೂ.ಗಳಾಗಿರುತ್ತದೆ. ಇದು ಮಾತ್ರವಲ್ಲದೆ, ರಿಂಕು ಸಿಂಗ್ ಪಿಎಫ್ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯಂತಹ ಯೋಜನೆಗಳ ಪ್ರಯೋಜನವನ್ನು ಸಹ ಪಡೆಯುತ್ತಾರೆ.


Spread the love

About Laxminews 24x7

Check Also

ಮಹಾದಾಯಿಗಾಗಿ ಕೇಂದ್ರ ಹಸ್ತಕ್ಷೇಪ ಮಾಡಲಿ

Spread the love ಮಹಾದಾಯಿಗಾಗಿ ಕೇಂದ್ರ ಹಸ್ತಕ್ಷೇಪ ಮಾಡಲಿ ಗೋವಾ ಸಿಎಂ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ ಹೇಳಿದ್ದೇನು? ಕೇಂದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ