ಮುಳುಗುವ ಭೀತಿಯಲ್ಲಿ ಮಂತುರ್ಗಾ-ಹಾಲಾತ್ರಿ ಸೇತುವೆ
ಖಾನಾಪೂರ ತಾಲೂಕಿನ ಮಂತುರ್ಗಾ ಗ್ರಾಮದ ಹಾಲಾತ್ರಿ ಹಳ್ಳದ ಸೇತುವೆ ಮಳೆಯ ಅಬ್ಬರಕ್ಕೆ ಮುಳುಗುವ ಸಂಭವ ಎದುರಾಗಿದೆ.
ಮುಂಜಾಗ್ರತಾ ಕ್ರಮವಾಗಿ ಖಾನಾಪೂರ ಪೋಲಿಸ್ ಠಾಣೆಯ ಪಿಎಸ್ಐ ಎಮ್.ಬಿ.ಬಿರಾದಾರ ಮತ್ತು ಸಿದ್ರಾಮ ಹಸಾರೆ ಅವರು ಪರಿಶೀಲನೆ ನಡೆಸಿದರು.
ಈ ಸೇತುವೆ ಮೇಲೆ ಬಹು ಪ್ರಮಾಣದಲ್ಲಿ ವಾಹನ ಸಂಚಾರ ನಡೆಯುತ್ತದೆ ಈಗಾಗಲೇ ಮಳೆಯ ಪ್ರಮಾಣ ಹೆಚ್ಚು ಇದ್ದು ರಾತ್ರಿ ಸೇತುವೆ ಮೇಲೆ ನೀರು ಬಂದು ರಸ್ತೆ ಸ್ಥಗಿತಕೊಳ್ಳುವ ಸಾದ್ಯತೆ ಹೆಚ್ಚು ಆದ್ದರಿಂದ ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ತಿಳಿಸಲು ಪಿಎಸ್ಐ ಬಿರಾದಾರ ಮತ್ತು ಸಿದ್ರಾಮ ಹಸಾರೆ ತಿಳಿಸಿದ್ದಾರೆ.
Laxmi News 24×7